
ಹುಮನಾಬಾದ:ಎ.16: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಾರ್ಥಿ ರಾಜಶೇಖರ ಪಾಟೀಲ್ ಅವರ ಪರ ಪ್ರಚಾರಕ್ಕೆ ಏಪ್ರಿಲ್ 17 ಕ್ಕೆ ಮದ್ಯಾಹ್ನ 1-40 ಕ್ಕೆ ರಾಹುಲಗಾಂಧಿ ಆಗಮಿಸಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಬೀದರ ಜಿಲ್ಲಾ ಚುನಾವಣೆ ಉಸ್ತವಾರಿ ಶ್ರೀಧರರೆಡ್ಡಿ ಮಾಹಿತಿ ನೀಡಿದರು.
ಪಟ್ಟಣದ ಕಾಂಗ್ರೆಸ್ ಅಭ್ಯಾರ್ಥಿ ರಾಜಶೇಖರ ಪಾಟೀಲ್ ಅವರ ಗೃಹ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು. ಏ. 17ಕ್ಕೆ ಸೋಮವಾರ ಪಟ್ಟಣದ ರಥ ಮೈದಾನದಲ್ಲಿ ಮದ್ಯಾಹ್ನ 1-40 ರಾಹುಲಗಾಂಧಿ ಆಗಮಿಸಲಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರು ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ರಾಜಶೇಖರ ಪಾಟೀಲ್ ಪರವಾಗಿ ತಮ್ಮ ಶಕ್ತಿ ತೊರಿಸಬೇಕು.
ಕ್ಷೇತ್ರ ವ್ಯಾಪ್ತಿ ವಿವಿಧ ಯೋಜನೆ ಮೂಲಕ ಮನೆ, ರಸ್ತೆ, ಚರಂಡಿ, ವಸತಿ ಶಾಲೆ ಸೇರಿದಂತೆ ಅಭಿವೃದ್ಧಿ ಕೆಲಸಗಳನ್ನು ಮನಗಡ ಮತದಾಋಉ 2018,ರಲ್ಲಿ ಪಡೆದಿರುವ ಮತಗಳಕ್ಕಿಂತಲು ಹೆಚ್ಚಿನ ಮತಗಳನ್ನು ಈ ಬಾರಿ ಕ್ಷೇತ್ರದ ಜನತೆ ನೀಡುವ ನೀರಿಕ್ಷೆ ಇದೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಭ್ರಷ್ಟಾಚಾರ ಮುಕ್ತ ರಾಜ್ಯವಾಗಲಿದೆ. ಮತದಾರರು 40% ಪ್ರತಿಶತ ಸರ್ಕಾರದಿಂದ ಬೆಸತ್ತಿದ್ದಾರೆ ಎಂದು ಹೇಳಿದ ಅವರು ಏ.17 ಕ್ಕೆ ಪಟ್ಟಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಜೆವಾಲಾ, ಜಮ್ಮಿರ ಅಹ್ಮದ್ ಸೇರಿದಂತೆ ಕೇಂದ್ರ, ರಾಜ್ಯ ಸೇರಿದಂತೆ ಅನೇಕ ಮುಖಂಡರು ರಾಜಶೇಖರ ಪಾಟೀಲ್ ಪರ ನಾಮಪತ್ರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಚುನಾವಣಾ ನೀರಿಕ್ಷಕಿ ಹಾಗೂ ಎಐಸಿಸಿ ಸದಸ್ಯೆ ಉಸಮ್ಮಾ ಶಾಕೀರ ಮಾತನಾಡಿ. ಜೆಡಿಎಸ್ ಪಕ್ಷ ಅಭ್ಯಾರ್ಥಿಗೆ ಬಲಿಕಾ ಬರ್ಕಾ ಮಾಡಿದ್ದಾರೆ. ಬಿಜೆಪಿ ಅಭ್ಯಾರ್ಥಿ ರಾಜಕೀಯವಾಗಿ ಎಲ್ಲಿಂದ ಬೇಳೆದಿದ್ದಾರೆ ಎನ್ನುವುದು ಅವರೆ ಹೇಳಲ್ಲಿ. ರಾಜಶೇಖರ ಪಾಟೀಲ್ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಅವರ ಅಭಿವೃದ್ಧಿ ಕಾರ್ಯಕ್ಕೆ ಮೇಚ್ಚಿ ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಮನವರಿಕೆ ಮಾಡಿಕೊಂಡರು.
ಕಾಂಗ್ರೆಸ್ ಅಭ್ಯಾರ್ಥಿ ರಾಜಶೇಖರ ಪಾಟೀಲ್ ಮಾತನಾಡಿ. ಏ.17 ಕ್ಕೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸಹಸ್ರಾರು ಸಂಖ್ಯೆ ಕಾರ್ಯಕರ್ತರೊಂದಿಗೆ ತಾಲೂಕು ಆಡಳಿತ ಅವರೆಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಾಗುವುದು. ಬಳಿಕ ರಥ ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಕ್ಷೇತ್ರದ ಜನತೆಯೊಂದಿಗೆ ಪಾಲ್ಗೊಳ್ಳುವ ಮೂಲಕ ಕ್ಷೇತ್ರಕ್ಕೆ ಮುಂದಿನ ಐದು ವರ್ಷದ ಯೋಜನೆಗಳನ್ನು ತಿಳಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೀರಣ್ಣಾ ಪಾಟೀಲ್, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ್ಯ ಸೇರಿದಂತೆ ಅನೇಕರಿದ್ದರು.