ಹುಮನಾಬಾದ್ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗೊಂಡಪ್ಪ ಎಚ್ . ಸಿದ್ದನಗೋಳ ಅಮಾನತು

ಹುಮನಾಬಾದ್ :ಜು.17:
ಮೃತಪಟ್ಟ , ನಿವೃತ್ತ ಮತ್ತು ಅನಧಿಕೃತವಾಗಿ ಗೈರು ಹಾಜರಾದ ಶಿಕ್ಷಕರಿಗೆ ವೇತನ ಪಾವತಿಸಿರುವುದೂ ಸೇರಿದಂತೆ ಹಲವು ಗಂಭೀರ ಪ್ರಮಾದಗಳನ್ನು ಎಸಗಿದ ಆರೋಪದಲ್ಲಿ ಹುಮನಾಬಾದ್ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗೊಂಡಪ್ಪ ಎಚ್ . ಸಿದ್ದನಗೋಳ ಅವರನ್ನು ಅಮಾನತು ಮಾಡಲಾಗಿದೆ . ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಗರಿಮಾ ಪಂವಾರ್ ಜು . 15 ರಂದು ಹೊರಡಿಸಿದ ಅಮಾನತು ಆದೇಶದಲ್ಲಿ ಹಲವು ಅಚ್ಚರಿಯ ಅಂಶಗಳಿವೆ . ಹುಮನಾಬಾದ್ ಬಿಇಒ ಕಚೇರಿಯಲ್ಲಿನ ಉಲ್ಲಂಘನೆ ಅವ್ಯವಸ್ಥೆ , ಅವ್ಯವಸ್ಥೆ , ನಿಯಮ ಎಲ್ಲವನ್ನೂ ಅಮಾನತು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ . ಮಾಹಿತಿ
ಹಕ್ಕು ಕಾರ್ಯಕರ್ತ ಚಂದ್ರಕಾಂತ ಬಿರಾದಾರ ಬೋರಂಪಳ್ಳಿ ಅವರು ಬಿಇಒ ವಿರುದ್ಧ ದೂರು ಸಲ್ಲಿಸಿದ್ದರು . ಹುಮನಾಬಾದ್ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಪಿ . ಶಿವಕುಮಾರ ಅವರೂ ಈ ಕುರಿತು ವಿವರವಾದ
ವರದಿ ಶಾಲೆಗಳ ಸಲ್ಲಿಸಿದ್ದರು.ಖಾಸಗಿ ಮಾನ್ಯತೆ ನವೀಕರಣ , ಆರ್‍ಟಿಇ ಅನುದಾನ ಮರುಪಾವತಿಯಲ್ಲಿ ಅಕ್ರಮ ಸೇರಿದಂತೆ ಹಲವು ಗಂಭೀರ ಆರೋಪಗಳು ಬಿಇಒ ಶಿವಗೊಂಡಪ್ಪ ಮೇಲಿದ್ದವು.ಎರಡೂವರೆ ವರ್ಷಗಳಲ್ಲಿ 300 ಕ್ಕೂ ಹೆಚ್ಚು ಶಾಲೆಗಳ ಮಾನ್ಯತೆ ನವೀಕರಣ ಮಾಡಲಾಗಿತ್ತು . 2019 ರಿಂದ 2021 ರವರೆಗೆ 10 ಕೋಟಿಗೂ ಅಧಿಕ ಆರ್‍ಟಿಇ ಶುಲ್ಕ ಮರುಪಾವತಿ ಮಾಡಲಾಗಿತ್ತು . ಆದರೆ ಈ ಸಂಬಂಧ ಕಡತ ನಿರ್ವಹಣೆ ಮಾಡಿರಲಿಲ್ಲ . ಮೂಲಸೌಲಭ್ಯ ಇಲ್ಲದಿದ್ದರೂ 78 ಶಾಲೆಗಳ ಮಾನ್ಯತೆ ನವೀಕರಣ ಮಾಡಲಾಗಿತ್ತು.ನಿವೃತ್ತರಿಗೆ ಮೂರು ತಿಂಗಳು ಸಂಬಳ : ಚಿಟಗುಪ್ಪದ ಶಿಕ್ಷಕರೊಬ್ಬರು ಜೂನ್‍ನಲ್ಲಿ ನಿವೃತ್ತರಾಗಿದ್ದರು . ಆದರೆ , ನಂತರದ ಮೂರು ತಿಂಗಳು ಈ ಶಿಕ್ಷಕರಿಗೆ ಪೂರ್ಣ ವೇತನದ
ರೂಪದಲ್ಲಿ 1.37 ಲಕ್ಷ ರೂ . ಪಾವತಿಸಲಾಗಿತ್ತು . ನಾಗನಕೇರಾ ಶಾಲೆಯ ಶಿಕ್ಷಕರೊಬ್ಬರು ಒಟ್ಟು 1345 ದಿನ ಅನಧಿಕೃತವಾಗಿ ಗೈರು ಹಾಜರಾಗಿ ದ್ದರು . ನಿಯಮಾನುಸಾರ ಸೇವೆಯಿಂದ ವಜಾ ಮಾಡುವ ಬದಲು ವಾರ್ಷಿಕ ವೇತನ ಬಡ್ತಿ , ಸ್ವಯಂಚಾಲಿತ ಬಡ್ತಿಗಳನ್ನು ನೀಡಿದ ಆರೋಪ ಹೊತ್ತಿದ್ದಾರೆ.ಪತ್ರಾಂಕಿತ ವ್ಯವಸ್ಥಾಪಕ ಪಿ . ಶಿವಕುಮಾರ ಅವರು ಮೇಲಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲೂ ಬಿಇಒ ಅವರು ನಿಯಮ ಉಲ್ಲಂಘಿಸಿದ ವಿವರಗಳಿವೆ . ಕಡತಗಳನ್ನು ಕಚೇರಿಯಲ್ಲಿ ನಿಯಮಾನುಸಾರ ನಿರ್ವಹಣೆ ಮಾಡದಿರುವುದು , ಕಚೇರಿ ಕೆಲಸಗಳನ್ನು ಕಚೇರಿಯ ಹೊರಗೆ ಮಾಡುತ್ತಿರುವುದನ್ನೂ ಶಿವಕುಮಾರ್ ಪ್ರಸ್ತಾಪಿಸಿದ್ದರು .

………………………

ನಿಧನರಾದವರಿಗೂ ವೇತನ ನಿಂಬೂರು ಸರಕಾರಿ ಹಿರಿಯ ಪ್ರಾಥುಕ ಶಾಲೆಯ ಶಿಕ್ಷಕರೊಬ್ಬರಿಗೆ ನಿಧನದ ನಂತರವೂ ಎರಡು ತಿಂಗಳು ವೇತನ ನೀಡಲಾಗಿತ್ತು . ವಿಠಲಪುರ ಶಾಲಾ ಸಹ ಶಿಕ್ಷಕರೊಬ್ಬರಿಗೆ ಅನಧಿಕೃತವಾಗಿ ಗೈರು ಹಾಜರಾದ ಅವಧಿಯಲ್ಲಿ 2,21,232 ರೂ . ವೇತನ ನೀಡಲಾಗಿತ್ತು . ಹುಡಗಿ ಕೆಜಿಬಿ ಶಾಲೆ ಶಿಕ್ಷಕಿ ಈ ಸಾಲಿನ ಜನವರಿಯಲ್ಲಿ ಮೃತಪಟ್ಟಿದ್ದರು . ಆದರೆ ಅವರಿಗೆ ಫೆಬ್ರವರಿ ತಿಂಗಳ ವೇತನ ರೂ . 64,993 ರೂ . ಪಾವತಿಸಲಾಗಿತ್ತು .