ಹುಮನಾಬಾದ್‍ಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಭೇಟಿ

ಹುಮನಾಬಾದ್:ಜು.20:ಪಟ್ಟಣದ ಬಿಜೆಪಿ ಗೃಹ ಕಚೇರಿಗೆ ಮಂಗಳವಾರ ಸಾರಿಗೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿದ ಸಂದರ್ಭ ಬಿಜೆಪಿ ಮುಖಂಡ ಡಾ. ಸಿದ್ದು ಪಾಟೀಲ್ ಸನ್ಮಾನಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಹಾಗೂ ಬೀದರ ಜಿಲ್ಲೆಯಲ್ಲಿ ಆರ್.ಟಿ.ಓ ಕಚೇರಿಗಳ ಉದ್ಘಾಟನೆ ಕಾರ್ಯಕ್ರಮಗಳು ಕುರಿತು ಚರ್ಚೆ ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಲು ಪ್ರವಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಟ್ಟಡ ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳಿ ಉಚಿತ ಬಸ್ ಪಾಸ್ ಸೇರಿದಮನತೆ ಸರಕಾರದ ಸೌಲಭ್ಯಗಳು ಬಡವರ ಮಕ್ಕಳಿಗೆ ನೀಡುವ ಯೋಜನೆ ನೀವುದರ ಜತೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ಇಲಾಖೆಯಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಭರವಸ ವ್ಯಕ್ತ ಪಡಿಸಿಸರು.

ಹುಮನಾಬಾದ್ ಮತಕ್ಷೇತ್ರದ ಯುವಕರ ಆಶಾಕಿರಣ ಡಾ. ಸಿದ್ದು ಪಾಟೀಲ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿ ಎಲ್ಲಾ ರಿತೀಯ ಅಧೃಷ್ಟ ಮನೆ ಬಾಗಿಲು ತೆರೆಯಲಿದೆ. ಹೀಗಾಗಿ ಮುಖಂಡ ಡಾ. ಸಿದ್ದು ಪಾಟೀಲ್ ನಿರಂತರ ಶ್ರಮ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಕಾರ್ಯಕರ್ತರೊಂದಿಗೆ ಚರ್ಚಿಸಿದರು.

ಡಾ. ಸಿದ್ದು ಪಾಟೀಲ್, ಪುರಸಭೆ ಸದಸ್ಯ ಸುನಿಲ ಪಾಟೀಲ್, ವಿಶ್ವನಾಥ ಪಾಟೀಲ್ ಮಾಡಗೂಳ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕುಂಬಾರ, ವಿನಾಯಕ ಮಂಡಾ, ನಾಗಭೂಷಣ ಸಂಘಮ್ಕರ್, ಭದ್ರೇಶ ಪಾಟೀಲ್, ಸುನಿಲ್ ಪತ್ರಿ, ಗಜೇಂದ್ರ ಕನಕಟ್ಕರ್, ಅಶೋಕ ಹಣಕುಣಿ, ಸಂತೋಷ ಹಳ್ಳಿಖೇಡಕರ್, ಸಂತೋಷ ಸಂಗಮ್, ಸಂತೋಷ ನಾವದಗಿ, ಶ್ರೀನಾಥ ದೇವಣಿ, ಬಸವರಾಜ ಸದ್ಲಾಪೂರೆ, ಗೋಪಾಲಕೃಷ್ಣ ಮೊಹಾಳೆ, ಕಿಶೋರ್ ನಟ್ಟಿ ಇದ್ದರು.


ಹಳ್ಳಿಖೇಡ (ಕೆ) ವಾಡಿ ವಾಲ್ಮೀಕಿ ಆಶ್ರಮಕ್ಕೆ ಸಚಿವ ಭೇಟಿ

ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಕೆ) ವಾಡಿ ಗ್ರಾಮದ ವಾಲ್ಮೀಕಿ ಆಶ್ರಮಕ್ಕೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ಆಶ್ರಮದ ದತ್ತಾತ್ರೇಯ ಮಹಾರಾಜರ ಆರ್ಶೀವಾದ ಪಡೆದರು.

ಬಳಿಕ ಟೋಕರಿ ಕೋಳಿ ಸಮಾಜದ ತಾಲೂಕ ಸಂಘಟನೆ ಹಾಗೂ ಹಳ್ಳಿಖೇಡ (ಕೆ) ವಾಲ್ಮೀಕಿ ಆಶ್ರಮದ ಆಡಳಿತ ಮಂಡಳಿ ವತಿಯಿಂದ ಆಶ್ರಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ 1 ಕೋಟಿ ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.

ಸಚಿವ ಬಿ. ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಆಶ್ರಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಮಾಜದವರು ಸಲ್ಲಿಸಿರುವ ಮನವಿ ಪತ್ರಕ್ಕೆ ಅನುಗುಣವಾಗಿ ಸರಕಾರದ ಯೋಜನೆಯಲ್ಲಿ 50 ಲಕ್ಷ ಅನುದಾನ ನೀಡುವುದಾಗಿ ಭರವಣೆ ನೀಡಿದರು.

ವಾಕ್ಮೀಕಿ ಆಶ್ರಮದ ದತ್ತಾತ್ರೇಯ ಮಹಾರಾಜ, ಡಾ. ಸಿದ್ದು ಪಾಟೀಲ್, ಸುನಿಲ ಪಾಟೀಲ್, ಬ್ಯಾಂಕ್ ರೆಡ್ಡಿ, ನಾಗಭೂಷಣ ಸಂಘಮಕರ್, ದತ್ತಾತ್ರೇಯ ಆಶ್ರಮ ಅಧ್ಯಕ್ಷ ವೀರಣ್ಣ ಉಪಾರ, ಅಶೋಕ ಹಣಕುಣಿ, ಸಣತೋಷ, ಬಸವರಾಜ ಸದ್ಲಾಪೂರೆ, ಸಂತೋಷ ಸಂಗಮ, ರಾಜು ತಾಳಮಡಗಿ, ಚಂದ್ರಕಾಂತ ಉಪಾರ ಸೇರಿದಂತೆ ಅನೇಕರು ಇದ್ದರು.