ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಪಾದಯಾತ್ರೆ

ಲಿಂಗಸುಗೂರು.ಜ.೦೬-ಪ್ರತಿವರ್ಷದಂತೆ ಈ ವರ್ಷವೂ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಸಿದ್ಧಾರೂಢರ ಮಠದಿಂದ ಹುಬ್ಬಳ್ಳಿ ಶಹರದ ಸಿದ್ಧಾರೂಢ ಮಠಕ್ಕೆ ಭಕ್ತರು ಪಾದಯಾತ್ರೆ ಹಮ್ಮಿಕೊಂಡರು.
ಸತತ ೧೨ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ವಾರ್ಷಿಕ ಪಾದಯಾತ್ರೆ ಕಾರ್ಯಕ್ರಮಕ್ಕೆ ಸಹಜಾನಂದ ಅವಧೂತರು ಮತ್ತು ಕೃಷ್ಣಾನಂದ ಅವಧೂತರು ಚಾಲನೆ ನೀಡಿದರು.
ಪ್ರತಿವರ್ಷ ಡಿಸೆಂಬರ್ ೫ ರಿಂದ ಜನೆವರಿ ೫ರ ವರೆಗೆ ಲೋಕ ಕಲ್ಯಾಣಾರ್ಥವಾಗಿ ಕರಡಕಲ್ ಶ್ರೀಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಜ. ೬ರಿಂದ ಮಕರ ಸಂಕ್ರಾಂತಿವರೆಗೂ ಪಾದಯಾತ್ರೆ ನಡೆಯುತ್ತದೆ. ಮಕರ ಸಂಕ್ರಾಂತಿಯ ದಿನದಂದು ಪಾದಯಾತ್ರೆ ಕೈಗೊಂಡಿದ್ದ ಭಕ್ತ ಸಮೂಹ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಸ್ಥಾನಕ್ಕೆ ಮರಳುತ್ತಾರೆ. ಪಾದಯಾತ್ರೆ ಮೂಲಕ ಲೋಕಕಲ್ಯಾಣ ಕಾರ್ಯಕ್ರಮ ನಡೆದಿರುವುದನ್ನು ಸಿದ್ಧರೂಢರು ಸ್ವೀಕರಿಸಲಿ ಎಂದು ಅವಧೂತರು ಭಕ್ತರಿಗೆ ಶುಭ ಕೋರಿದರು.
ತಿಪ್ಪಣ್ಣ ಮೇಗಳಮನಿ, ದೇವೆಂದ್ರ ಪಂಜಲರ್, ಭೀಮರಾಜ, ರಮೇಶ ಮೇಗಳಮನಿ, ದೇಸಾಯಿ, ಹುಲುಗಪ್ಪ, ಸಿದ್ಧಾರ್ಥ ತೆಳಿಗೇರಿ, ಕೇಶವ ಪಂಜಲರ್, ನಾಗರಾಜ, ಪರಶುರಾಮ ಮಾಳೆ, ಕೆಂಚಪ್ಪ ಬಜಲರ್, ಹುಸೇನಪ್ಪ, ನಾಗಪ್ಪ ಸೇರಿದಂತೆ ಇತರರು ಪಾದಯಾತ್ರೆಯಲ್ಲಿ ತೆರಳಿದರು.
೦೬ಎಲ್‌ಎನ್‌ಜಿ-೧. ಪಾದಯಾತ್ರೆಗೆ ಸಜ್ಜಾದ ಭಕ್ತ ಸಮೂಹ.