ಹುಬ್ಬಳ್ಳಿ ಘಟನೆಗೆ ಸಿಎಂ ಹೊಣೆ

ಬೆಂಗಳೂರು ಏ.೧೮- ಹುಬ್ಬಳ್ಳಿಯಲ್ಲಿ ನಡೆದ ಯುವತಿಯ ಕೊಲೆ ಪ್ರಕರಣ ಇಡಿ ರಾಜ್ಯವೇ ಬೆಚ್ಚಿ ಬೀಳಿಸಿದೆ.
ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ತುಷ್ಠೀಕರಣ ನೀತಿಯಿಂದಾಗಿ ಮುಸ್ಲಿಂ ಸಮುದಾಯದ ಮದೋನ್ಮತ್ತರು ಕಾಯಿದೆಯ ಭಯವಿಲ್ಲದೇ ಕೊಲೆ, ದೊಂಬಿ, ನೈತಿಕ ಪೊಲೀಸ್ ಗಿರಿ, ದೇಶ ವಿರೋಧಿ ಘೋಷಣೆ, ಅಲ್ಲಾಹು ಅಕ್ಬರ್ ಎಂದು ಮಾತ್ರ ಹೇಳಬೇಕೆಂಬ ಸಾರ್ವಜನಿಕ ಆಗ್ರಹ ನಡೆಸುತ್ತಿದ್ದಾರೆ.
ಇದಕ್ಕೆ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ. ಇಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಹುಬ್ಬಳಿಯಲ್ಲಿ ನಡೆದ ಈ ಬರ್ಭರ ಹತ್ಯೆಯನ್ನು ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಸಾಮಾನ್ಯೀಕರಿಸುವುದು ಸರಿಯಲ್ಲ. ಇದರ ಹಿಂದೆ ಇರುವುದು ಈ ದೇಶದ ಕಾನೂನನ್ನು ಧಿಕ್ಕರಿಸುವ ಮಾನಸಿಕತೆ ಅಡಗಿದೆ. ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಹಿಂದು ಯುವಕನ ಜತೆ ಬಂದ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ತಾಲೀಬಾನಿ ಮನಃಸ್ಥಿತಿ, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮಾಡಿದವರನ್ನು ಸಮರ್ಥಿಸುವ ಮನಃಸ್ಥಿತಿ, ಸಹೋದ್ಯೋಗಿಗೆ ಮನೆಗೆ ಡ್ರಾಪ್ ಕೊಟ್ಟು ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದ ನೈತಿಕ ಪೊಲೀಸ್ ಗಿರಿಯ ಮನಃಸ್ಥಿತಿ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡುವ ವಿಧ್ವಂಸಕ ಮನಃಸ್ಥಿತಿ, ರಾಮನವಮಿಯ ದಿನ ಜೈ ಶ್ರೀರಾಮ್ ಎಂದವರ ಮೇಲೆ ಹಲ್ಲೆ ಮಾಡುವ ಮನಃಸ್ಥಿತಿ, ಈಗ ಹುಬ್ಬಳ್ಳಿಯಲ್ಲಿ ಹಾಡಹಗಲೆ ಹಿಂದು ಯುವತಿಯನ್ನು ಬರ್ಭರವಾಗಿ ಹತ್ಯೆ ಮಾಡುವ ಮನಃಸ್ಥಿತಿ ಎಲ್ಲವೂ ಒಂದೇ ಇದರ ಹಿಂದಿರುವ ಧೈರ್ಯ ಯಾವುದು ಗೊತ್ತೇ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ.
ಸಿದ್ದರಾಮಯ್ಯನವರೇ ಇದೇನಾ ನೀವು ಕಂಡ ಕನಸಿನ ಸರ್ವಜನಾಂಗದ ಶಾಂತಿಯ ತೋಟ ಎಂದು ಪ್ರಶ್ನಿಸಿದ್ದಾರೆ.