ಹುಬ್ಬಳ್ಳಿಯ ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣ, ಸಿಬಿಐ ಮೂಲಕ ತನಿಖೆಯಾಗಲಿ :ಜಗನ್ನಾಥ ಜಮಾದಾರ್

oplus_3276800

ಬೀದರ್: ಮೇ. 23ಃ ರಾಜ್ಯದ ಹುಬ್ಬಳ್ಳಿಯ ವಿರಾಪೂರ್ ಓಣೆಯ ನಿವಾಸಿ ಅಂಜಲಿ ಅಂಬಿಗೇರ್ ಅವರನ್ನು ಹತ್ಯೆಯ ಘಟನೆ ಸಿಬಿಐ ಮೂಲಕ ತನಿಖೆ ಮಾಡಬೇಕು ಅದರಲ್ಲಿರುವ ತಪ್ಪಿತಸ್ಥ ಮತ್ತು ಕಾಣದ ಕೈಗಳ ವ್ಯಕ್ತಿಗಳಿಗೆ ಅತ್ಯಂತ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಮತ್ತು ಕೊಲೆ ಆರೋಪಿ ವಿಶ್ವನಾಥ ಅಲಿಯಾಸ್ ಗೀರಿಷ ಸಾವಂತನಿಗೆ ತಕ್ಷಣವೇ ಪೊಲೀಸ್ ಎನ್‍ಕೌಂಟರ್ ಮಾಡಬೇಕು ಅಥವಾ ಅವನಿಗೆ ಗಲ್ಲುಶಿಕ್ಷೆಗೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಬೀದರ ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಜಗನ್ನಾಥ ಜಮಾದಾರ್ ಅವರು ಬುಧವಾರ ಬೆಳಿಗ್ಗೆ ಬೀದರ ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

ಪದೆ ಪದೆ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯ, ಸರ್ಕಾರದ ದಿವ್ಯ ನಿರ್ಲಕ್ಷತನಕ್ಕೆ ಖಂಡಿಸಿ ನ್ಯಾಯಕ್ಕಾಗಿ ದಿ. 24-05-2024 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬೀದರ ನಗರದ ಪ್ರವಾಸಿ ಮಂದಿರದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ಮಹಾವೀರ ವೃತ್ತ ತಹಸಿಲ್ ಕಛೇರಿ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿ ಅರ್ಪಿಸಲಾಗುವುದು. ಈ ಪ್ರತಿಭಟನೆ ಮೇರವಣಿಗೆಯಲ್ಲಿ ಬೀದರ ಜಿಲ್ಲೆಯ 8 ತಾಲೂಕುಗಳಿಂದ ಹೆಚ್ಚಿನ ಸಖ್ಯೆಯಲ್ಲಿ ಸಮಾಜ ಬಾಂಧವರು ಮತ್ತು ಇತರೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸದ ಅವರು ಪಾಲ್ಗೋಳ್ಳುವಂತೆ ಮನವಿ ಮಾಡಿದರು.

ಸಂತ್ರಸ್ಥ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಧನ ಒದಗಿಸಬೇಕು. ಕುಟುಂಬಸ್ಥರಿಗೆ ಸಂಸಾರ ನೌಕೆ ನಿರ್ವಣೆಗಾಗಿ ಸರಕಾರಿ ನೌಕರಿ ಕೊಡಬೇಕು. ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಿ ಆ ಓಣಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ದಿನದ 24*7 ಪೊಲೀಸ್ ಬಂದೊಬಸ್ತ ಏರ್ಪಡಿಸಬೇಕು. ಹಂತಕ ವಿಶ್ವನಾಥ ಅಲಿಯಾಸ್ ಗೀರಿಶ್ ಸಾವಂತ (21) ಹುಬ್ಬಳ್ಳಿಯ ಎಲ್ಲಾಪೂರ್ ಓಣಿಯ ನಿವಾಸಿಯಾಗಿದ್ದು, ವೀರಾಪೂರ್ ಓಣಿಯ ನಿವಾಸಿಯಾಗಿರುವ ಅಂಜಲಿ ಅಂಬಿಗೇರ್ ಅವಳ ಮನೆಗೆ ತೆರಳಿ ಕೊಲೆಗೈದ ಘಟನೆ ಇಡಿ ಟೋಕರೆ ಕೋಳಿ (ಕಬ್ಬಲಿಗ, ಗಂಗಾಮತ, ಅಂಬಿಗರ) ಸೇರಿದಂತೆ 37 ಪರ್ಯಾಯ ಪದಗಳಿಂದ ಕರೆಯಲ್ಪಡುವ ಈ ಸಮಾಜದ 60 ಲಕ್ಷ ಜನರ ಎದೆ ಝಲ್ ಎನಿಸಿದೆ. ಅಲ್ಲದೇ ಪದೆ ಪದೆ ತಮ್ಮ ಸಮುದಾಯದ ಮೇಲೆ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ, ಶೋಷಣೆಗಳಂತಹ ಹೀನ ದುಷ್ಕøತ್ಯಗಳು ನಿರಂತರವಾಗಿ ಜರುಗುತ್ತಲೆ ಇವೆ. ತಮ್ಮ ಸಮಾಜಕ್ಕೆ ಒಟ್ಟಾರೆ ರಕ್ಷಣೆ ಇಲ್ಲದಂತಾಗಿದೆ ಅನಾಥ ಸಮಾಜ ಎನಿಕೊಳ್ಳತೊಡಗಿದೆ. ಸಮಾಜದ ರಕ್ಷಣೆಗಾಗಿ ಸರ್ಕಾರ ಮುಂದಾಗದೇ ಇರುವುದು ದುರಂತದ ಸಂಗತಿಯಾಗಿದೆಂದು ಜಗನ್ನಾಥ ಜಮಾದಾರ್ ಅವರು ತಿವ್ರ ಕಳವಳ ವ್ಯಕ್ತಪಡಿಸಿ, ಸಮಾಜದ ಪ್ರತಿನಿಧಿತ್ವ ವಹಿಸಲು ತಮಗೆ ಎಮ್.ಎಲ್.ಸಿ ಮಾಡಬೇಕು ಎಂದು ಬಿಜೆಪಿ ವರಿಷ್ಠರಿಗೆ ಒತ್ತಾಯಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾ ಸಂಚಾಲಕರಾದ ಸುನೀಲ ಭಾವಿಕಟ್ಟಿ, ಬೀದರ್ ಉತ್ತರ ಅಧ್ಯಕ್ಷ ಚಂದ್ರಕಾಂತ ಹಳ್ಳಿಖೆಡಕರ್, ದಕ್ಷಿಣ ಕ್ಷೇತ್ರದ ಅಧ್ಯಕ್ಷ ಶನ್ಮೂಖಪ್ಪಾ ಶೇಕಾಪೂರ್, ಕಾರ್ಯದರ್ಶಿ ಗೋವಿಂದ ಜಾಲಿ, ಶಿವರಾಜ ಜಮಾದಾರ್ ಇದ್ದರು.


ಸಂತ್ರಸ್ಥ ಕುಟುಂಬಕ್ಕೆ ವಯಕ್ತಿಕವಾಗಿ 51 ಸಾವಿರ ರೂ. ನೀಡುವುದಾಗಿ ಘೋಷಿಸಿದ ಅವರು ಶಿಘೃವೇ ಹುಬ್ಬಳ್ಳಿಯ ಅವರ ನಿವಾಸಕ್ಕೆ ತಂಡದ ಮೂಲಕ ತೆರಳಿ ಪರಿಹಾರ ನೀಡುವುದಾಗಿ ಜಗನ್ನಾಥ ಜಮಾದಾರ ಅವರು ಹೇಳಿದರು.