
ಹುಬ್ಬಳ್ಳಿ,ಮಾ.4: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಂದು ಉದ್ಯಮಿಯೋರ್ವನ ಮನೆ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿ.ಸಿ.ಬಿ ಪೆÇಲೀಸರು ಸುಮಾರು ಮೂರು ಕೋಟಿ ರೂ. ಹಣವನ್ನು ಜಪ್ತ ಮಾಡಿದ್ದಾರೆ.
ಕೇಶ್ವಾಪೂರದ ರಮೇಶ ಬೋಣಗೇರಿ ಎಂಬ ಉದ್ಯಮಿಯ ಮನೆ ಮೇಲೆ ದಾಳಿ ನಡೆದಿದ್ದು ಮೂರು ಕೋಟಿ ರೂ. ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಉದ್ಯಮಿಯ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯನ್ನು ಕೈಕೊಂಡಿರುವ ಸಿ.ಸಿ.ಬಿ ಪೆÇಲೀಸರು, ರಮೇಶ ಬೋಣಗೇರಿಯವರ ವಿಚಾರಣೆಯನ್ನು ನಡೆಸಿದ್ದಾರೆ.
ಸಿ.ಸಿ.ಬಿ. ಡಿ.ವೈ.ಎಸ್.ಪಿ ನಾರಾಯಣ ಭರಮನಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಈ ಕುರಿತಂತೆ ಅಶೋಕನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.