ಹುಬ್ಬಳ್ಳಿಗೆ 25 ಜಂಬೋ ಸಿಲಿಂಡರ್ ಪೂರೈಸಿದ ಸೂದ್

ಹುಬ್ಬಳ್ಳಿ,ಮೇ26: ಬಹುಭಾಷಾ ನಟ ಸೋನು ಸೂದ್ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಅನೇಕರಿಗೆ ಸಹಾಯ ಮಾಡಿದ್ದಾರೆ. ಸದ್ಯ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಸೋನು ಸೂದ್ ತಮ್ಮ ಆಕ್ಸಿಜನ್ ಸೆಂಟರ್ ವಿಸ್ತರಣೆ ಮಾಡಿದ್ದಾರೆ. ರಾಜ್ಯ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಆಸಕ್ತಿ ಹಿನ್ನೆಲೆ ಸೋನು ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಾಣವಾಯು ಒದಗಿಸೋಕೆ ಮುಂದಾಗಿದ್ದಾರೆ. ಅದಕ್ಕಾಗೇ ಹುಬ್ಬಳ್ಳಿಯ ರೈಲ್ವೆ ಪೆÇಲೀಸ್ ಠಾಣೆ ಆವರಣದಲ್ಲಿ ಆಕ್ಸಿಜನ್ ಕೇಂದ್ರ ತೆರೆದಿದ್ದಾರೆ.

ಬೆಂಗಳೂರಿನ ಸ್ವ್ಯಾಗ್ ಸಂಸ್ಥೆಯ ಸಹಯೋಗದೊಂದಿಗೆ ಸದ್ಯ ಈ ಕೇಂದ್ರ ತೆರೆದಿದ್ದು, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ಜನರಿಗೆ ಇದರ ನೆರವು ಸಿಗಲಿದೆ ಎನ್ನಲಾಗಿದೆ. ಯಾರಿಗೆ ಆಕ್ಸಿಜನ್ ಅವಶ್ಯಕತೆ ಇದಿಯೋ ಅವರು ಒಂದು ದೂರವಾಣಿ ಕರೆ ಮಾಡಿದರೆ ಸಾಕು ಆಕ್ಸಿಜನ್ ಒದಗಿಸೋ ಕೆಲಸ ರೈಲ್ವೆ ಪೆÇಲೀಸರು ಹಾಗೂ ಸಂಸ್ಥೆ ಮಾಡಲಿದೆ.

ಮೊದಲ ಹಂತವಾಗಿ 25 ಜಂಬೋ ಸಿಲೆಂಡಿರ್‍ಗಳನ್ನು ನೀಡಿದ್ದು, ಸೋನು ಸೂದ್ ಅವಶ್ಯಕತೆ ಎಷ್ಟು ಬರುತ್ತದೆಯೋ ಅಷ್ಟು ಆಕ್ಸಿಜನ್ ಪೂರೈಸಲು ಸಿದ್ಧ ಎನ್ನುತ್ತಿದ್ದಾರೆ. ಇನ್ನು ರೈಲ್ವೆ ಪೆÇಲೀಸರು ಕೂಡಾ ಸೋನು ಸೂದ್ ಚಾರಿಟಿ ಪೌಂಡೇಶನ್‍ಗೆ ಸಾಥ್ ನೀಡಿದ್ದು, ಅವರೇ ಖುದ್ದು ಮುಂದೆ ನಿಂತು ಇನ್ನು ಮುಂದೆ ಯಾರಿಗೆ ಆಕ್ಸಿಜನ್ ಅವಶ್ಯಕತೆ ಇದೆಯೋ ಅಂತಹವರು ಇಲ್ಲಿಗೆ ಬರಬಹುದು ಅಥವಾ ಚಾರಿಟಿ ನೀಡಿರೋ 70699 99961 ಹೆಲ್ಪ್ ಲೈನ್ ನಂಬರ್‍ಗೆ ದೂರವಾಣಿ ಕರೆ ಮಾಡಿದರೂ ಪೆÇಲೀಸರ ನೆರವಿನೊಂದಿಗೆ ಆಕ್ಸಿಜನ್ ಪೂರೈಕೆ ಆಗಲಿದೆ ಎನ್ನಲಾಗಿದೆ.