ಹುಪಳಾದಲ್ಲಿ ಶಿಲುಬೆ ವೃತ್ತ ಉದ್ಘಾಟನೆ

ಬೀದರ:ಡಿ.25: ಭಾಲ್ಕಿ ತಾಲ್ಲೂಕಿನ ಹುಪಳಾ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಶಿಲುಬೆ ವೃತ್ತವನ್ನು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ಉದ್ಘಾಟಿಸಿದರು.
ಕ್ರೈಸ್ತರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು ಎಂದು ಸಲಹೆ ಮಾಡಿದರು.
ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದು ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಗ್ರಾಮದಲ್ಲಿ ಕ್ರೈಸ್ತರು ಒಂದುಗೂಡಿ ಸುಂದರ ಶಿಲುಬೆ ವೃತ್ತ ನಿರ್ಮಾಣ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಫಾದರ್ ಪ್ರಶಾಂತ, ಸಿಸ್ಟರ್ ಜ್ಯೋತಿ, ಕಾನ್‍ಸ್ಟೆಬಲ್ ರಮೇಶ, ಗ್ರಾಮದ ರಾಜಕುಮಾರ ಲೋಕೇಶ ಮೊದಲಾದವರು ಇದ್ದರು.
ಕಾರ್ಯಕ್ರಮದ ನಂತರ ಕ್ರಿಸ್ಮಸ್ ಪ್ರಯುಕ್ತ ಗ್ರಾಮದ ಚರ್ಚ್‍ನಲ್ಲಿ ಕೇಕ್ ಕತ್ತರಿಸಲಾಯಿತು.