ಹುದ್ದೆ ಖಾಯಂಗೆ ಎನ್‌ಎಚ್‌ಎಂ ನೌಕರರ ಆಗ್ರಹ

ಬೆಂಗಳೂರು,ಮಾ.೧೮ ಎನ್ ಎಚ್ ಎಂ ಒಳಗುತ್ತಿಗೆ ನೌಕರರ ಸಂಘದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮನ್ನ ಕಾಯಂ ಮಾಡುವಂತೆ ಮನವಿ ಮಾಡಿದೆ ಕಳೆದ ಶನಿವಾರ ಮಾರ್ಚ್ ೧೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ್ದ ಎನ್ ಹೆಚ್ ಎಂ ನೌಕರರ ಸಂಘದ ಸದಸ್ಯರುಗಳು ಆರೋಗ್ಯ ಇಲಾಖೆಯಲ್ಲಿ ಸುಮಾರು ೨೭,೦೦೦ ಎನ್ ಎಚ್ ಎಮ್ ಒಳಗುತ್ತಿಗೆ ನೌಕರರು ೨೦ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಕೋವಿಡ್ -೧೯ ಎಂಬ ಮಹಾಮಾರಿ ರೋಗವನ್ನು ನಿಭಾಯಿಸುವಲ್ಲಿ ದೇಶದಲ್ಲಿ ನಮ್ಮ ರಾಜ್ಯವು ಮಾದರಿಯಾಗಲು ಎನ್ ಹೆಚ್ ಎಂ ಒಳಗುತ್ತಿಗೆ ನೌಕರರ ಪಾತ್ರ ಬಹುಮುಖ್ಯವಾಗಿರುತ್ತದೆ ನಮ್ಮ ಸೇವೆಯನ್ನು ಗುರುತಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಎನ್ ಹೆಚ್ ಒಳಗುತ್ತಿಗೆ ನೌಕರರನ್ನೂ ಖಾಯಂ ಮಾಡುತ್ತೇವೆ ಎಂದು ಘೋಷಿಸಿರುತ್ತೀರಿ ಅದರಿಂದ ತಾವು ನಮ್ಮನ್ನು ಖಾಯಂ ಮಾಡಬೇಕೆಂದು ಮನವಿ ಮಾಡಿದರು ಇವರ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ತಮ್ಮ ಮನವಿಗೆ ಸಕಾರಾತ್ಮಕವಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನೌಕರರ ಪರವಾಗಿ ರಾಜ್ಯ ಸಂಘದಿಂದ ರಾಜ್ಯ ಅಧ್ಯಕ್ಷರಾದ ಅಶ್ವಥ್ ಅಭಿನಂದನೆ ಹೇಳಿದ್ದಾರೆ
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾವುರಾಜ ಎಸ್ ,ಮಾಧ್ಯಮ ಕಾರ್ಯದರ್ಶಿ ಆನಂದ್ ಜಂಟಿ ಕಾರ್ಯದರ್ಶಿ ಜಗದೀಶ್, ಗಿರೀಶ್ ಮತ್ತು ರಾಯಚೂರು ಜಿಲ್ಲೆಯ ಪ್ರಧಾನ ಕಾರ್ಯದರ್ಶಿ, ನಬಿ ಸಾಬ್ ಮತ್ತು ರಾಜ್ಯ ಪದಾಧಿಕಾರಿಗಳು ಇದ್ದರು