ಹುದ್ದೆ ಖಾಯಂಗೆ ಅತಿಥಿ ಉಪನ್ಯಾಸಕರ ಒತ್ತಾಯ

ಕೋಲಾರ,ಜು,೩-ರಾಜ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ೨೦೦೫ ರಿಂದ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಅಕ್ರಂಪಾಷ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅತಿಥಿ ಉಪನ್ಯಾಸಕ ನಾಗನಾಳ ಮುನಿಯಪ್ಪ ಮಾತನಾಡಿ, ದೇಶದ ಭವಿಷ್ಯ ರೂಪಿಸುವ ಉಪನ್ಯಾಸಕರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸರಕಾರಗಳು ಹಿಂದೇಟು ಹಾಕಿದ್ದಾರೆ ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೨೦೦೫ ರಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕರ್ತವ್ಯ ನಿರ್ವಹಿಸಿದ್ದೇವೆ ಇದುವರೆಗೂ ನಮ್ಮಗಳ ಸೇವೆಗೆ ತಕ್ಕಂತೆ ವೇತನ ಕೊಟ್ಟಿಲ್ಲ ಆದರೂ ಕೂಡ ಸರಕಾರಿ ಉಪನ್ಯಾಸಕಗಿಂತ ಹೆಚ್ಚಿನ ರೀತಿಯಲ್ಲಿ ಕೆಲಸವನ್ನು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇವೆ ಎಂದರು.
ರಾಜ್ಯದಲ್ಲಿ ಅನೇಕ ಅತಿಥಿ ಉಪನ್ಯಾಸಕರಿಗೆ ವಯೋಮಿತಿ ಮೀರಿ ಹೋಗಿದೆ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಲು ಕೂಡ ಅರ್ಹರಾಗಿರುವುದಿಲ್ಲ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೋಮವಾರ ನಡೆಯುವ ಬಜೆಟ್ ಅಧಿವೇಶನದಲ್ಲಿ ನಮ್ಮಗಳ ಸೇವಾ ನೇಮಕಾತಿ, ಸೇವಾ ವಿಲೀನತೆ ಮಾಡಬೇಕು ಖಾಯಂ ಮಾಡುವ ತನಕ ಯಾವುದೇ ಕಾರಣಕ್ಕೂ ಅತಿಥಿ ಉಪನ್ಯಾಸಕರನ್ನು ಬಿಡುಗಡೆ ಮಾಡದಂತೆ ಮುಂದುವರೆಸಬೇಕು ಕೂಡಲೇ ಸರಕಾರ ೧೨ ತಿಂಗಳ ವೇತನ ನೀಡವಂತೆ ಸರಕಾರವನ್ನು ಮುಂದಾಗಬೇಕು ಎಂದು ಮನವಿ ಮಾಡಿದರು. ಅತಿಥಿ ಉಪನ್ಯಾಸಕರಾದ ನೂರ್ ಅಹಮದ್, ಬಾಲಾಜಿ, ನಾಗಮಣಿ, ಮಂಜುನಾಥ್, ಶ್ರೀನಿವಾಸ್, ಅಮರಾವತಿ, ಮಂಜುನಾಥ್, ರವೀಂದ್ರ ಲಕ್ಷ್ಮೀದೇವಮ್ಮ, ವಿಶ್ವನಾಥ್ ಇದ್ದರು.