ಹುದ್ದೆಗಳಲ್ಲಿ ಮೇಲು ಕೀಳು ಇಲ್ಲಾ.

ಚಿತ್ರದುರ್ಗ.ಏ.೧೮;ಪದವಿ ಶಿಕ್ಷಣ ಪ್ರತಿ ವಿದ್ಯಾರ್ಥಿಗಳಿಗೂ ತಿರುವ ಪಡೆದುಕೊಳ್ಳುವ ಸಂದರ್ಭ, ಪ್ರತಿ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನೀಯರ್ ಹುದ್ದೆಗಳಿಗೆ ಹೋಗುವ ಹಂಬಲವಿರುತ್ತದೆ, ಆದರೆ ಪ್ರತಿ ಹುದ್ದೆಯಲ್ಲೂ ಪ್ರತಿಭಾವಂತರು ಬೇಕಾಗುತ್ತದೆ, ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಹುದ್ದೆ ಸಿಕ್ಕರು ಸಹ ಮೇಲು ಕೀಳು ಎನ್ನದೆ, ಪ್ರಾಮಾಣಿಕವಾಗಿ ದುಡಿದು, ಅಲ್ಲಿಯ ಸಮಸ್ಯಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ, ವಿನೋದ್ ಟ್ಯುಟೋರಿಯಲ್ಸ್ ಸಂಯುಕ್ತವಾಗಿ ಉಚ್ಚಂಗಿ ಎಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವಿಜ್ಞಾನ ರಸಪ್ರಶ್ನೆಯಲ್ಲಿ ಬಹುಮಾನ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರತಿಬಾವಂತರು ಮುಂದುವರಿದ ರಾಷ್ಟçಗಳಿಗೆ ಹೋಗಿ ಸೇವೆ ಮಾಡುವ ಮನೋಭಾವನೆಯನ್ನು ತೊರೆಯಬೇಕಾಗುತ್ತದೆ. ಏಕೆಂದರೆ ಪ್ರತಿಭಾ ಪಲಾಯನ ನಮ್ಮ ದೇಶಕ್ಕೆ ನಷ್ಟವನ್ನುಂಟು ಮಾಡುತ್ತಿದೆ, ಆದಷ್ಟು ಇಲ್ಲಿಯ ಪ್ರತಿಭೆಗಳು ಇಲ್ಲಿಯೇ ಉಳಿದು, ಸಮಾಜದ ಸುಧಾರಣೆಗೋಸ್ಕರ, ದೇಶದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ಜನಜಾಗೃತಿ ಮೂಡಿಸುವ ಕೆಲಸಗಳಿಗೆ ವಿದ್ಯಾರ್ಥಿಗಳ ಸೈನ್ಯವೇ ಬೇಕಾಗಿದೆ ಎಂದರು. ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದ ಮೇಲೆ ಇತರರ ಜೀವನದ ಬಗ್ಗೆ, ಸಮಾಜದ ಸುಸ್ಥಿತಿಯ ಬಗ್ಗೆ ಯೋಚಿಸುವಂತಾಗಬೇಕು. ಅದೇ ಶಿಕ್ಷಣದ ಮುಖ್ಯ ಗುರಿಯಾಗಬೇಕು. ಕೆಲವು ಮಕ್ಕಳಿಗೆ ಪೂರ್ಣ ಪ್ರಮಾಣದ ಶಿಕ್ಷಣವನ್ನು ಪಡೆಯಲು ಅವಕಾಶ ಸಿಗುವುದಿಲ್ಲ, ಕೆಲವರಿಗೆ ಅಂತಹ ಅವಕಾಶಗಳು ಸಿಕ್ಕಾಗ ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಪೋಷಕರು ನೀಡಿದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಾಧನೆಗೈದು ಸಮಾಜದ ಸುಸ್ಥಿತಿ ಗೊಸ್ಕರ ಅವರು ತಮ್ಮ ಜೀವನ ಪೂರ್ತಿ ಶ್ರಮಿಸಬೇಕಾಗುತ್ತದೆ ಎಂದರು.ಶಿಕ್ಷಕ ವಿನೋದರವರು ಮಾತನಾಡುತ್ತಾ ಶಿಕ್ಷಣದಲ್ಲಿ ಕಷ್ಟಪಟ್ಟು ಓದುವುದಕ್ಕಿಂತ, ಇಷ್ಟಪಟ್ಟು ಓದುವಂತಾ ಮಾರ್ಗಗಳನ್ನು ಅನುಸರಿಸಬೇಕು. ಪಾಠ ಮಾಡುವಾಗ ಪುಸ್ತಕದ ವಿಚಾರಗಳು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾಟುವಂತಿರಬೇಕು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವ ಎಲ್ಲಾ ಪ್ರಯತ್ನವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಕೆ. ಬಿ. ಮಹಂತೇಶ್, ಕಾರ್ಯದರ್ಶಿಗಳು, ಕೆ.ಜೆ.ವಿ.ಎಸ್. ಕಲ್ಲೇಶ್ ಜಿಲ್ಲಾ ವಿಜ್ಞಾನ ಸಂಯೋಜಕರು, ಜಯದೇವಮೂರ್ತಿ, ನವೀನ್. ಪಿ. ಆಚಾರ್ ಹಾಗೂ ಉಚ್ಚಂಗಿ ಎಲ್ಲಮ್ಮ ದೇವಸ್ಥಾನದ ನಿವಾಸಿಗಳು ಭಾಗವಹಿಸಿದ್ದರು. ವಿಜ್ಞಾನ ರಸಪ್ರಶ್ನೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹರ್ಷಿತ್ ಜೈನ್, 50 ಅಂಕಗಳಿಗೆ 49 ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಗಳಿಸಿದ ರೋನಕ್. ಎಂ. ಸುರಾನಾ 50 ಅಂಕಗಳಿಗೆ 48 ಅಂಕಗಳನ್ನು ಪಡೆದ ಇಬ್ಬರನ್ನೂ ಸನ್ಮಾನಿಸಲಾಯಿತು