ಹುತಾತ್ಮ ಸೈನಿಕನ ಪತ್ನಿ ಸೇನೆಗೆ ಸೇರ್ಪಡೆ

ನವದೆಹಲಿ, ಮೇ ೩೦: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ಇಂದು ಭಾರತೀಯ ಸೇನೆಗೆ ಯೋಧರಾಗಿ ಸೇರ್ಪಡೆಯಾಗಿದ್ದಾರೆ.
೨೦೧೯ರ ಫೆಬ್ರುವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೇಜರ್ ವಿಭೂತಿ ಶಂಕರ್ ಹುತಾತ್ಮರಾಗಿದ್ದರು. ಮೇಜರ್ ಶಂಕರ್ ಅವರ ತ್ಯಾಗಕ್ಕಾಗಿ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಚಕ್ರ ನೀಡಿ ಗೌರವಿಸಿತ್ತು.
ಚೆನ್ನೈನ ಸೇನಾ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದು ಉತ್ತೀರ್ಣಗೊಂಡ ಮೇಜರ್ ಶಂಕರ್ ಪತ್ನಿ ನಿತಿಕಾಕೌಲ್ ಇಂದು ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕವಾಗುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಹುತಾತ್ಮ ಮೇಜರ್ ಶಂಕರ್ ಅವರ ಪತ್ನಿ ನಿತಿಕಾ ಕೌಲ್ ಗೆ ಉಧಾಂಪುರ್ ಪಿ.ಆರ್.ಒ ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಅಭಿನಂದನೆ ತಿಳಿಸಿದೆ.
೨೦೧೯ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ ಜೀವ ತೆರುವ ಮೂಲಕ ಹುತಾತ್ಮರಾಗಿದ್ದರು. ಇಂದು ಅವರ ಪತ್ನಿ ನಿತಿಕಾ ಕೌಲ್ ಭಾರತೀಯ ಸೇನೆಗೆ ಸಮವಸ್ತ್ರ ಧರಿಸುವ ಮೂಲಕ ಸೇರ್ಪಡೆಗೊಂಡು ಗೌರವ ಸಲ್ಲಿಸಿದ್ದಾರೆ.
ಮೇಜರ್ ಧೌಂಡಿಯಾಲ್ ಅವರು ಹುತಾತ್ಮರಾಗುವ ಕೇವಲ ಒಂಬತ್ತು ತಿಂಗಳು ಮೊದಲು ನಿತಿಕಾ ಕೌಲ್ ಅವರನ್ನು ವಿವಾಹವಾಗಿದ್ದರು. ಪತಿ ಹುತಾತ್ಮರಾಗಿ ಆರು ತಿಂಗಳ ನಂತರ SSಅಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ನಂತರ ಸೇನಾ ತರಬೇತಿ ಪಡೆಯಲು ಆರಂಭಿಸಿದ್ದರು.