ಹುತಾತ್ಮ ದಿನಾಚರಣೆ : ರಕ್ತದಾನ ಶಿಬಿರ

ಹೊಸಪೇಟೆ ಮಾ24: ನಗರದ ಪತಂಜಲಿ ಯೋಗ ಸಮಿತಿಯಿಂದ ಹುತಾತ್ಮ ದಿನಾಚರಣೆ ಆಚರಿಸಲಾಯಿತು.
ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಜಿತೇಂದ್ರ ಮಾತನಾಡಿ, ಭಾರತ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಹಗಲಿರುಳು ಹೋರಾಡಿ ಬಲಿದಾನ ನೀಡಿದವರಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರು ಪ್ರಮುಖರು. ಅವರ ಬಲಿದಾನ, ತ್ಯಾಗ, ರಾಷ್ಟ್ರ ಸೇವೆ ಮಾಡುವ ಯುವಕರಿಗೆ ಸ್ಫೂರ್ತಿಯಾಗಿದೆ ಎಂದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಡಾ. ಎಫ್.ಟಿ.ಹಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ಯುವ ಭಾರತ ಸಂಘಟನೆಯ ರಾಜ್ಯ ಪ್ರಭಾರಿ ಕಿರಣಕುಮಾರ್, ಪತಂಜಲಿ ಯೋಗ ಸಮಿತಿಯ ರಾಜ್ಯ ಮಹಿಳಾ ಪ್ರಭಾರಿ ದಾಕ್ಷಾಯಣಿ ಶಿವಕುಮಾರ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ 15ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ವಿರೇಶ ಕನಕೇರಿಮಠ, ಕಿರಣಕುಮಾರ್, ನಾಗರಾಜ, ಅಕ್ಷಯ್ ಇತರರು ಪಾಲ್ಗೊಂಡು ರಕ್ತದಾನ ಮಾಡಿದರು.