ಹುತಾತ್ಮರ ದಿನಾಚರಣೆ

ಔರಾದ :ಮಾ.24: ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಅರುಣ್ ಮುಕೇಶ ನಿವೃತ್ತ ಭಾರತೀಯ ಸೈನಿಕರು ಮಾತನಾಡಿ , ವಿದ್ಯಾರ್ಥಿಗಳು ದೃಢನಿರ್ಧಾರ ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು, ವಿದ್ಯಾರ್ಥಿ ಜೀವನ ಹೋರಾಟದ ಜೀವನ ಆಲಸಿ ಆಗದೆ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಭಾರತೀಯ ಸೈನ್ಯ ತನ್ನ ಸಮಸ್ಯೆ ಮತ್ತು ಬೇರೆಯವರಿಗೆ ಸಹಾಯ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ, ಭಗತ್ ಸಿಂಗ್ ರಾಜಗುರು ಸುಖದೇವ ರಂತ ಹಲವಾರು ಭಾರತೀಯರು ಭಾರತಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಬಲಿದಾನವನ್ನು ನೀಡಿದ್ದಾರೆ ಎಂದು ಹೇಳಿದರು.

ಭಾರತೀಯ ಸೈನಿಕರು ಗಡಿಯಲ್ಲಿ ಇರುವುದರಿಂದಲೇ ನಾವು ಮನೆಯಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ರಾಜಕುಮಾರ್ ಖಂಡೆ, CRPF ಇಂಡಿಯನ್ ಆರ್ಮಿ ಕೋಬ್ರಾ ಕಮಾಂಡೋ ತರಬೇತಿದಾರರು ,ಬೆಳಗಾವಿ ಅವರು ಮಾತನಾಡಿ ಭಗತ್ ಸಿಂಗ್ ರವರ ಹಾಗೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಆದರ್ಶಮಯ ಮಾಡಿಕೊಳ್ಳಬೇಕು. ಭಾರತೀಯ ಸೈನಿಕರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು ಸೈನ್ಯದಲ್ಲಿ ಮಾತಿಗಿಂತ ಹೆಚ್ಚು ಕಾರ್ಯ ನಡೆಯುವುದು ನಮ್ಮ ಭಾರತೀಯ ಸೇನೆಯ ವೈಶಿಷ್ಟತೆ ಬಗ್ಗೆ ತಿಳಿಸಿದರು.

ಕಾಲೇಜು ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ ಮಾತನಾಡಿ ,ದೇಶ ಕಂಡ ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್, ದೇಶಪ್ರೇಮದ ಕಿಚ್ಚು ಹಚ್ಚಿಸಿದ ಕ್ರಾಂತಿಕಾರಿ. ಯುವಕರು ಭಗತ್ ಸಿಂಗರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸುಧಾ ಕೌಟಗೆ, ಕಲ್ಲಪ್ಪ ಬುಟ್ಟೆ, ವಂದನ ಮಾಳಿಗೆ, ಅನಿಲ್ ಕುಮಾರ್ ಹೊಸದೊಡ್ಡಿ, ಶಿವಕುಮಾರ್ ಫುಲೆ, ಹಾಗೂ ಇನ್ನಿತರು ಉಪಸ್ಥಿತರಿದ್ದರು.