ಹುತಾತ್ಮರ ದಿನದಂದು ಜೈಹಿಂದ್ ಕಾರ್ಯಕ್ರಮ

ಮೈಸೂರು:ಮಾ:23: ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಯುವಕರಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಕಿಚ್ಚು ಹಚ್ಚಲು ಕಾರಣಕರ್ತರಾದವರೇ ಭಗತ್ ಸಿಂಗ್ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ತಿಳಿಸಿದರು.
ಭಗತ್ ಸಿಂಗ್, ರಾಜ್ ಗುರು, ಸುಖದೇವ್ ರವರ ಹುತಾತ್ಮರ ದಿನಾಚರಣೆ ಅಂಗವಾಗಿ ಜೈ ಹಿಂದ್ ಕಾರ್ಯಕ್ರಮವನ್ನು ವೀರ ಸಾವ ರ್ಕರ್ ಯುವ ಬಳಗ ಹಾಗೂ ಯುವ ಭಾರತ್ ಸಂಘಟನೆ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ (ಮೆಟ್ರೊಪೆÇೀಲ್) ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಅವರ ಭಾವಚಿತ್ರ ಹಿಡಿದು ಇಂಕ್ವಿಲಾಬ್ ಜಿಂದಾವಾದ್, ಅಮರ್ ರಹೇ ಭಗತ್ ರಾಜಗುರು ಸುಖದೇವ್ ಎಂದು ಘೋಷಣೆ ಕೂಗುತ್ತಾ ನಂತರ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಉಳಿವಿಗಾಗಿ ಶಾಂತಿಯುತವಾಗಿ ಒಂದು ತಂಡ ಇದ್ದರೇ ಕ್ರಾಂತಿಕಾರಿಯಾಗಿ ಮತ್ತೊಂದು ತಂಡ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಸ್ವಾತಂತ್ರ್ಯ ಪಡೆಯಲಾಯಿತು. ಈ ನಿಟ್ಟಿನಲ್ಲಿ ಬ್ರಿಟಿಷರ ಹಿಂದುಗಳ ಮಾರಣಹೋಮ ವನ್ನು ದಿಕ್ಕರಿಸಿ ಭಗತ್‍ಸಿಂಗ್ ಕುಟುಂಬ ಪಣ ತೊಟ್ಟಿತು, ಅತಿ ಹೆಚ್ಚು ಪರಿಣಾಮ ಬೀರಿದ್ದು ಜಲಿಯಾನ್ ವಾಲಿಬಾಗ್‍ನ ಘಟನೆ, ಇದೇ ರೀತಿಯಲ್ಲಿ ಮುಂದುವರೆದ ಬ್ರಿಟಿಷರ ಅಂತ್ಯ ಮಾಡಲು ಪಾರ್ಲಿಮೆಂಟ್‍ನ ಕೆಂಪು ಕೋಟೆಯ ಮೇಲೆ ಬಾಂಬ್ ದಾಳಿ ಮಾಡಿ ಬ್ರಟಿಷರೇ ಭಾರತ ಬಿಟ್ಟು ತೊಲಗಿ, ಇಂಕ್ವೀಲಾಬ್ ಜಿಂದಾ ಬಾದ್ ಎಂಬ ಘೊಷಣೆ ವಾಕ್ಯದಲ್ಲಿ ಹೋರಾಟ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಕೇವಲ 23 ವರ್ಷದ ಯುವಕರಾಗಿದ್ದವರವನ್ನು ಮಾರ್ಚ್ 23 ರಂದು ಬಲಿದಾನ ಮಾಡಿದ್ದು ನಮ್ಮ ರಾಷ್ಟ್ರದ ಕರಾಳ ದಿನ ಎಂದು ಹಿಂದೂ ದೇಶಭಕ್ತ ಘೊಷಣೆ ಮಾಡಬೇಕೆಂದು ಕೊರಲಾಯಿತು ಎಂದರು.
ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ನವೀನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಾದ ರೇಣುಕರಾಜ್, ಯುವ ಭಾರತ್ ಸಂಘಟನೆಯ ಸಂಚಾಲಕರಾದ ಜೋಗಿ ಮಂಜು, ಯುವ ಮುಖಂಡ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಸಂದೇಶ್, ಸುಚೇಂದ್ರ, ಪ್ರಮೋದ್ ಗೌಡ, ನವೀನ್, ಉಮೇಶ್, ಗುರುಪ್ರಸಾದ್, ಶಾಂತಿಲಾಲ್ ಜೈನ್, ಹರೀಶ್ ನಾಯ್ಡು, ದೀಪಕ್ ಹಾಗೂ ಇನ್ನಿತರರು ಹಾಜರಿದ್ದರು.