ಹುತಾತ್ಮರ ತ್ಯಾಗ ಬಲಿದಾನವನ್ನು ನಾವು ಸ್ಮರಿಸಬೇಕು

ಧಾರವಾಡ,ಆ.13: ಈ ದೇಶದ ಮತ್ತು ನಾಡಿನ ಸ್ವಾತಂತ್ರ್ಯ ಹೋರಾಟದ ಹುತಾತ್ಮರತ್ಯಾಗ, ಬಲಿದಾನವನ್ನು ನಿಸ್ವಾರ್ಥ ಬದುಕನ್ನು ನಾವಿಂದು ಸ್ಮರಿಸಬೇಕು. ವಿದ್ಯಾರ್ಥಿಗಳುತಂದೆ, ತಾಯಿ, ಸಮಾಜ ಹಾಗೂ ಗುರುವಿನ ಋಣ ತೀರಿಸಿ ಸಾಧಕರಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕರಾದಡಾ. ಆರ್.ಸಿ. ಹಲಗತ್ತಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ನವನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಆ ದಿನಗಳು ಸ್ಮರಣೆಯಲ್ಲಿಕರ್ನಾಟಕದಲ್ಲಿಚಲೇಜಾವ್ ಚಳುವಳಿಯ ಸ್ವರೂಪಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕರಾದಉದಯ ನಾಯಕಉಪನ್ಯಾಸ ನೀಡುತ್ತಾ, ಚಲೇಜಾವ್ ಚಳುವಳಿ ಕರ್ನಾಟಕದಲ್ಲಿ ಹೋರಾಟಗಾರರಲ್ಲಿಜಾಗೃತಿಗಿಂತಜನಜಾಗೃತಿ ಮೂಡಿಸಿ ಹೋರಾಟಗಾರರಲ್ಲಿ ಸ್ಪೂರ್ತಿಯನ್ನುತಂದಿತು. ಈ ಹೋರಾಟಕರ್ನಾಟಕದಲ್ಲಿಯೂಉಗ್ರ ಸ್ವರೂಪದ್ದಾಗಿತ್ತು.ಈ ಚಳುವಳಿಯಲ್ಲಿ ಅನೇಕ ವಿದ್ಯಾರ್ಥಿಗಳು, ಅಧ್ಯಾಪಕರು ಶಾಲೆ ಕಾಲೇಜಿಗೆ ಬಹಿಷ್ಕಾರ ಹಾಕಿ ಹೊರ ಬಂದರೆ ವಕೀಲರು ನ್ಯಾಯಾಲಯ ಬಹಿಷ್ಕರಿಸಿ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.ಬೆಳಗಾವಿ, ಧಾರವಾಡ, ಮೈಸೂರಿನಲ್ಲಿಉಗ್ರಸ್ವರೂಪ ತಾಳಿತು.ಎಲ್ಲೆಡೆ ವಿಧ್ವಂಸಕಕೃತ್ಯ ನಡೆದು ಸರ್ಕಾರಿ ಆಸ್ತಿಪಾಸ್ತಿ ನಾಶವಾಯಿತು.ರೈಲು ನಿಲ್ದಾಣಗಳು ಹಾಳಾದವು. ಸಹಸ್ರಾರು ವಿದ್ಯಾರ್ಥಿಗಳು ಲಾಠಿಏಟುತಿಂದು ಬಂಧನಕ್ಕೊಳಗಾದರು.ಆರ್.ಆರ್. ದಿವಾಕರ್, ಹರ್ಡೇಕರ ಮಂಜಪ್ಪ, ಎಸ್. ನಿಜಲಿಂಗಪ್ಪ, ಶಿರೂರ ವೀರಭದ್ರಪ್ಪ, ಶಿವಮೂರ್ತಿಸ್ವಾಮಿ ಅಳವಂಡಿ ಮುಂತಾದವರು ಚಳುವಳಿಯ ನೇತೃತ್ವ ವಹಿಸಿದ್ದರು.
ಗಾಂಧೀಜಿಯವರ ಮಾಡುಇಲ್ಲವೇ ಮಡಿ ಎಂಬ ಕರೆಗೆಓಗೊಟ್ಟಈಸೂರಿನ ಹೋರಾಟಗಾರರು ‘ಏಸೂರು ಹೋದರುಈಸೂರುಕೊಡೆವು’ ಎಂದುಒಕ್ಕೊರಲಿನಿಂದ ಕೂಗಿ ಸ್ವಾತಂತ್ರ್ಯ ಸ್ಪೂರ್ತಿತುಂಬಿದರು.ಈಸೂರುಕರ್ನಾಟಕದಲ್ಲಿ ಸ್ವಾತಂತ್ರ್ಯಘೋಷಣೆ ಮಾಡಿದ ಮೊದಲ ಗ್ರಾಮವಾಗಿದೆ.ಇದೆ ಸಮಯದಲ್ಲಿಕರ್ನಾಟಕಜಾಲಿಯನ್ ವಾಲಾಬಾಗ್‍ಎಂದುಕರೆಯಲ್ಪಟ್ಟ ವಿಧುರಾಶ್ವತ್ಥದಲ್ಲಿ 35 ಜನ ಬ್ರಿಟಿಷ ಪೊಲೀಸರಗುಂಡಿಗೆ ಬಲಿಯಾದರು.ಆದರೂ ಈ ಘಟನೆ ಹೋರಾಟಗಾರರಲ್ಲಿ ಶೌರ್ಯ, ಸಂಕಲ್ಪ ಶಕ್ತಿಯನ್ನು ಹೆಚ್ಚಿಸಿತು. ಈ ಘಟನೆಗಳು ಇತಿಹಾಸದಲ್ಲಿಉಜ್ವಲ ಅಧ್ಯಾಯವಾಗಿವೆ. ನಮ್ಮಕನ್ನಡದ ಹೋರಾಟಗಾರರು ಶೌರ್ಯತ್ಯಾಗ, ಬಲಿದಾನವನ್ನು ವಿದ್ಯಾರ್ಥಿಗಳು ಸ್ಮರಿಸಬೇಕೆಂದುಉದಯ ನಾಯಕ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಅಶೋಕ ಸವಣೂರ ಮಾತನಾಡಿದರು.ವೇದಿಕೆಯಲ್ಲಿ ಶಂಕರ ಕುಂಬಿ, ಪ್ರೊ.ವೀರನಗೌಡ ಮರಿಗೌಡ್ರ, ಮಹಾಂತೇಶ ನರೇಗಲ್ ಮಾತನಾಡಿದರು.ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಾಯತ್ರಿ ಹುದ್ದಾರ ಸ್ವಾಗತಿಸಿದರು.ಎಸ್.ಬಿ. ವಸ್ತ್ರಮಠ ನಿರೂಪಿಸಿದರು. ಬಿ.ವ್ಹಿ. ಮಡಿವಾಳರ ವಂದಿಸಿದರು. ಕಾರ್ಯಕ್ರಮದಲ್ಲಿಯಲ್ಲಪ್ಪ ಹೊಸಮನಿ, ರುಕ್ಮಿಣಿಕುಲಕರ್ಣಿ, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಮುಂತಾದವರಿದ್ದರು.