ಹುತಾತ್ಮರಿಗೆ ರಾಷ್ಟ್ರಪತಿ ಶ್ರದ್ಧಾಂಜಲಿ

ನವದೆಹಲಿ.ನ.೨೬: ಮುಂಬೈ ಮೇಲಿನ ೨೬/೧೧ರ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಹಾಗೂ ಮೃತಪಟ್ಟವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶ್ರದ್ಧಾಂಜಲಿ ಸಲ್ಲಿಸಿದರು.
ತಮ್ಮ ಪ್ರಾಣ ಪಣಕ್ಕಿಟ್ಟು, ಉಗ್ರರ ವಿರುದ್ಧ ಹೋರಾಡಿದ ಹಾಗೂ ಹುತಾತ್ಮರಾದ ಯೋಧರ ಧೈರ್ಯ?ಸಾಹಸಕ್ಕೆ ದೇಶ ಸದಾ ಕೃತಜ್ಞವಾಗಿರುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಹುಲ್‌ಗಾಂಧಿಯಿಂದ ಗೌರವ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸಹ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹುತಾತ್ಮ ಯೋಧರ ಭಾವಚಿತ್ರಗಳಿರುವ ಎರಡು ನಿಮಿಷದ ವಿಡಿಯೊವೊಂದನ್ನು ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘೨೬/೧೧ ಮುಂಬೈ ಭಯೋತ್ಪಾದಕ ದಾಳಿ ಘಟನೆಯ ಹೀರೊಗಳಿಗೆ ವಂದನೆಗಳು’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.