ಹುಣಸೆ ಹಣ್ಣಿನ ಗೊಜ್ಜು

ಹುಣಸೆ ಹಣ್ಣು- ಒಂದು ನಿಂಬೆ ಗಾತ್ರದ್ದು.
ನೀರು- ೧,೧/೨ ಕಪ್
ಎಣ್ಣೆ -೧, ೧/೨ ಟೀ ಚಮಚ ಸಾಸಿವೆ -೧ ಟೀ ಚಮಚ
ಜೀರಿಗೆ -೧ ಟೀ ಚಮಚ
ಹಸಿ ಮೆಣಸಿನ ಕಾಯಿ
ಕರಿ ಬೇವಿನ ಎಲೆ
ಇಂಗು -೧/೪ ಟೀ ಚಮಚ
ಬೆಲ್ಲ -೧/೨ ಕಪ್
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನ ತುರಿ- ೧/೪ ಕಪ್ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ

ಹುಣಸೆ ಹಣ್ಣನ್ನು ಒಂದು ಬೌಲ್‌ಗೆ ಹಾಕಿ. ಅರ್ಧ ಕಪ್ ನೀರನ್ನು ಸೇರಿಸಿ.

ಅದರ ರಸ ತೆಗೆಯಲು ಚೆನ್ನಾಗಿ ಕಿವುಚಿ. ೧೫ ನಿಮಿಷಗಳ ಕಾಲ ನೆನೆಯಲು ಬಿಡಿ. ಒಂದು ಕಪ್‌ನಲ್ಲಿ ರಸವನ್ನು ಹಿಂಡಿ ತೆಗೆಯಿರಿ.

ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಸಾಸಿವೆಯನ್ನು ಹಾಕಿ, ಸಿಡಿಯುವ ತನಕ ಹುರಿಯಿರಿ. ಜೀರಿಗೆಯನ್ನು ಸೇರಿಸಿ ಹುರಿಯಿರಿ.

ಹೆಚ್ಚಿಕೊಂಡ ಹಸಿ ಮೆಣಸು ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ. ಇಂಗು ಮತ್ತು ಹುಣಸೆ ರಸವನ್ನು ಸೇರಿಸಿ.

ಒಂದು ಕಪ್ ನೀರನ್ನು ಸೇರಿ, ಚೆನ್ನಾಗಿ ತಿರುವಿ. ಸಾಮಾನ್ಯ ಉರಿಯಲ್ಲಿ ೫ ನಿಮಿಷಗಳ ಕಾಲ ಬೇಯಲು ಬಿಡಿ.

ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ನಂತರ ತೆಂಗಿನ ತುರಿ ಮತ್ತು ಉಪ್ಪನ್ನು ಬೆರೆಸಿ.

ಚೆನ್ನಾಗಿ ತಿರುವಿ, ಮಧ್ಯಮ ಉರಿಯಲ್ಲಿ ೨೦ ನಿಮಿಷಗಳ ಕಾಲ ಬೇಯಲು ಬಿಡಿ. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ. ಒಂದು ಬೌಲ್‌ಗೆ ವರ್ಗಾಯಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.