ಹುಣಸೆನಾಡು ಕೂಡ್ಲಿಗಿ”ಎಂದು ನಾಮಫಲಕ ಹಾಕಲು ರೈತ ಹಿತರಕ್ಷಣಾ ವೇದಿಕೆ ಮನವಿ.

ಕೂಡ್ಲಿಗಿ.ಏ.16 :- ರಾಜ್ಯದಲ್ಲಿ ಅತೀ ಹೆಚ್ಚು ಹುಣಸೆಮರದ ಫಸಲು ಹೊಂದಿರುವ ಏಕೈಕ ತಾಲೂಕೆಂದರೆ ಕೂಡ್ಲಿಗಿ ಈ ತಾಲೂಕಿಗೆ ಹುಣಸೇನಾಡೆಂದು ಪರಿಗಣಿಸಿ ತಾಲೂಕಿನ ಗಡಿಭಾಗ ಮತ್ತು ಪಟ್ಟಣದ ಗಡಿಭಾಗದಲ್ಲಿ “ಹುಣಸೇನಾಡು ಕೂಡ್ಲಿಗಿ”ಗೆ ಸ್ವಾಗತ ಎಂಬ ನಾಮಫಲಕ ಹಾಕುವಂತೆ ಕರ್ನಾಟಕ ರೈತ ಹಿತರಕ್ಷಣಾ ವೇದಿಕೆಯ ತಾಲೂಕು ಘಟಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಭಾಗಗಳಲ್ಲಿ ಸಾವಿರಾರು ಹುಣಸೇಮರಗಳಿದ್ದು ಇದನ್ನೇ ನಂಬಿ ಕೆಲ ಕುಟುಂಬಗಳು ಜೀವನ ಸಾಗಿಸುತ್ತಿವೆ ಅಲ್ಲದೆ ಪಟ್ಟಣದಲ್ಲಿ ಇದರ ಮಾರಾಟದ ಮಾರುಕಟ್ಟೆ ಬೇಕಾಗಿದೆ ಹುಣಸೆಹಣ್ಣಿನ ತಂಪಾದ ಉಗ್ರಾಣವೊಂದು ನಿರ್ಮಾಣವಾಗಬೇಕಿದ್ದು ಇದನ್ನು ಸಂಬಂದಿಸಿದ ಜನಪ್ರತಿನಿಧಿಗಳು ಗಮನ ಹರಿಸಿ ನಿರ್ಮಿಸಲು ಮುಂದಾಗಬೇಕಿದೆ ಅಲ್ಲದೆ ಅತಿಹೆಚ್ಚು ಹುಣಸೆ ಇರುವ ಈ ಕೂಡ್ಲಿಗಿ ತಾಲೂಕಿಗೆ ಹುಣಸೇನಾಡು ಕೂಡ್ಲಿಗಿ ಎಂದು ನಾಮಾಂಕಿತವಾಗಲಿ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು ಇದನ್ನು ಪರಿಗಣಿಸಿ ತಾಲೂಕಿನ ಗಡಿಭಾಗ ಮತ್ತು ಪಟ್ಟಣದ ಗಡಿಭಾಗದಲ್ಲಿ ಸ್ವಾಗತ ಕಮಾನುಗಳನ್ನು ಹಾಕಿ ಆದರಲ್ಲಿ ಹುಣಸೇನಾಡು ಕೂಡ್ಲಿಗಿಗೆ ಸ್ವಾಗತ ಎಂದು ನಾಮಫಲಕ ಹಾಕಬೇಕೆಂದು ಕರ್ನಾಟಕ ರೈತ ಹಿತರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಬಿ ಎಂ ನವೀನ್ ಕುಮಾರ್, ಉಪಾಧ್ಯಕ್ಷ ಹೆಚ್. ಉದಯಕುಮಾರ್, ಕಾರ್ಯದರ್ಶಿ ರಿಯಾಜ್ ಪಾಷಾ, ಪ್ರದೀಪಕುಮಾರ, ಎಸ್. ರಾಘವೇಂದ್ರ, ಮಾಳ್ಗಿ ಅನಿಲಕುಮಾರ್, ಕಾವಲ್ಲಿ ನಾಗರಾಜ, ಬಾಣದ ಕೃಷ್ಣ, ಶಾವಿ ಕಿಶೋರ್, ಕೆ. ಇಬ್ರಾಹಿಂ ಮುನ್ನಾ, ಹೊನ್ನೂರಸ್ವಾಮಿ, ಮಂಜುನಾಥ ಹಾಗೂ ಇತರರು ಸೇರಿ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರಗೆ ಮನವಿ ಸಲ್ಲಿಸಿದರು.