ಹುಣಸೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಆರೋಪಗಳ ಸುರಿಮಳೆ

ಹುಣಸೂರು,ಆ.06:- ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯಮೌನದಿಂದ ನಗರ ಸಭೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಆರೋಪಿಸಿ ಕೂಡಲೆ ಸಮಸ್ಯೆ ಪರಿಹಾರಕ್ಕೆ ಒತ್ತಾಹಿಸಿದ್ದಾರೆ.
ನಗರಸಭೆಅಧ್ಯಕ್ಷೆ ಸಮೀನಾ ಪವೀನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿನಗರದ ಸಂತೆ ಮಾಳದಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುಕಟ್ಟೆ ಕಟ್ಟಡ ಪ್ರಾರಂಭವಾಗಿ 10 ವರ್ಷ ಕಳೆದರು ಕಮಾಗಾರಿ ಪೂರ್ಣಗೊಳ್ಳದೆ ಕಟ್ಟಡದ ನೆಲಹಂತಸ್ತಲ್ಲಿ ನೀರುತುಂಬಿ ಅಕ್ಕ-ಪಕ್ಕದಜನರಿಗೆ ಕಿರಿಕಿರಿಯಾಗಿದ್ದು ಇದನ್ನು ಪೂರ್ಣಗೊಳ್ಳಿಸುವಂತೆ ನಗರಸಭೆ ಸದಸ್ಯ ಕೃಷ್ಣರಾಜಗುಪ್ತ ಆಯುಕ್ತರಿಗೆ ಒತ್ತಾಯಿಸಿದರು.
ನಗರದ ತಾಲ್ಲೂಕು ಕಛೇರಿ ಪಕ್ಕದಲ್ಲಿರುವ ರುದ್ರಭೂಮಿಗೆ ಮೂಲ ಸೌಕರ್ಯಗಳಿಸಲ್ಲದೆ ಶವ ಸಂಸ್ಕಾರ ಮಾಡಲುತೊಂದರೆಯಾಗಿದ್ದು, ಕೂಡಲೆ ನಗರಸಭೆ ವತಿಯಿಂದ ಶೀಘ್ರ ಸೌಕರ್ಯ ಕಲ್ಪಿಸಿ, ಒಬ್ಬಕಾವಲುಗಾರನ ನೇಮಿಸುವಂತೆ ಸದಸ್ಯರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಕೆ.ಪಿ.ರವಿಕುಮಾರ್ ಇದಕ್ಕಾಗಿ ನಗರೋತ್ತಾನದಲ್ಲಿ 1ಕೋಟಿ ಹಣ ಮಿಸಲ್ಲಿಟ್ಟಿದ್ದು, ಮಳೆ ನಿಂತ ನಂತರಕಾರ್ಯ ಪ್ರಾರಂಬಿಸಲಾಗುವುದು ಎಂದರು. ಅದೇರೀತಿ ಸ್ಮಶಾನಕ್ಕೆ ಮೂಲ ಸೌಕರ್ಯಕಲ್ಪಿಸಲು ನಗರದ ಸೇವಾಸಂಸ್ಥೆ ಒಂದು ಮುಂದೆ ಬಂದಿದ್ದು ಅವರೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ನಗರಸಭೆ ಆಸ್ತಿ ಉಳಿಸಿ
ಬಹುತೇಕ ಸದಸ್ಯರ ಆರೋಪದಂತೆ ನಗರಸಭೆ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳು ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿ ಕಟ್ಟಡಗಳನ್ನು ನಿರ್ಮಾಣಮಾಡಿಕೊಂಡು ಮಜಾ ಮಾಡುತ್ತಿದರು, ಅಧಿಕಾರಿಗಳು ಮಾತ್ರಜಾಣ ಕುರುಡಾಗಿರುವುದುದನ್ನು ಕಂಡರೆ ಅನುಮಾ ಮೂಡುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಕೂಡಲೆ ಅಕ್ರಮಗಳ ತೆರವಿಗೆಕ್ರಮ ವಹಿಸಲಾಗುವುದು ಎಂದರು.
ಪ್ರತಿಷ್ಠಿತ ಬಡಾವಣೆಗಳ ಜಲವೃತ
ಹಿಂದಿನ ಆಧಿಕಾರಿಗಳ ದುರಾಸೆ ಹಾಗೂ ಮುಠಾಳುತನದಿಂದ ಸರಿಯಾದ ಮಾನದಂಡ ಅನುಸರಿಸದೆ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿದ ಫಲ ಇಂದು ಮಂಜುನಾಥ, ಮಾರುತಿ, ಗೋಕುಲ ಸೇರಿದಂತೆ ಆನೇಕ ಬಡಾವಣೆ ನಿವಾಸಿಗಳು ಸಣ್ಣ ಮಳೆಗೂ ಬೆಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಸದಸ್ಯರ ಶಾಪಕ್ಕೆ ಉತ್ತರಿಸಿದ ಆಯುಕ್ತರು, ನೀರು ಸರಿಯಾಗಿನೀರು ಹರಿಯದಿರುವ ಬಗ್ಗೆ ನನ್ನ ಗಮನಕ್ಕೂ ಇದ್ದು, ತಕ್ಕ ಮಟ್ಟಿಗೆ ಕ್ರಮವಹಿಸಿದ್ದು, ಇದಕ್ಕೆ ಹೆಚ್ಚಿನಅನುದಾನ ಬೇಕಾಗಿದ್ದು ನಗರೋತ್ತಾನದಲ್ಲಿ 9.5ಕೋಟಿಗೆ ಡಿ.ಪಿ.ಆರ್ ತಯಾರಾಗಿದ್ದು ಕೂಡಲೆ ಕ್ರಮವಹಿಸಿ ಶಾಶ್ವತ ಪರಿಕಾರ ಒದಗಿಸಲಾಗುವುದು ಎಂದರು.
ಕರ ವಂಚನೆ
ನಗರದ ಪ್ರಮುಖ ಖಾಸಗಿ ಉದ್ದಿಮೇಯಾದ ಹುಣಸೂರು ಫ್ಲೈವುಡ್ ವಕ್ರ್ಸ ಸರಿಯಾದತೆರಿಗೆಕಟ್ಟದೆ ವಂಚಿಸಿದರೆ ನಗರದ ಮ್ರಮುಖ ವಿದ್ಯಾಸಂಸ್ಥೆಯಾದ ಸಂತ ಜೋಸೇಫ್ ಶಾಲೆ ನಿಯಾಮವನ್ನು ಗಾಳಿಗೆ ತೂರಿ ನಾಲ್ಕೈದು ಅಂತಸ್ಥಿನ ಕಟ್ಟಡಕಟ್ಟಿದೆ, ಆದರೂ ಅಧಿಕಾರಿಗಳು ಕೈ ಕಟ್ಟಿ ಕುಳಿತಿರುವುದು, ಸರ್ಕಾರದ ಭೊಕಸಕ್ಕೆ ನಷ್ಟ ಉಂಟು ಮಾಡುತ್ತಿದೆ ಎಂದು ಸದಸ್ಯರ ಗಂಭಿರ ಆರೋಪಕ್ಕೆ ಆಯುಕ್ತರು ಕ್ರಮ ವಹಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ದೇವನಾಯಕ, ಸ್ಥಾಯಿಸಮಿತಿಅಧ್ಯಕ್ಷೆ ಶ್ವೆತಾ ಮಂಜುನಾಥ್ ಸದಸ್ಯರಾದ ಸ್ವಾಮಿಗೌಡ, ರಮೇಶ್, ಸತೀಶ್, ಸೌರಭ, ರಮೇಶ್ ಸೇರಿದಂತೆಇನ್ನು ಹಲವು ಸದಸ್ಯರು ಮತ್ತು ಆಧಿಕಾರಿಗಳು ಇದ್ದರು.