
ಸಂಜೆವಾಣಿ ನ್ಯೂಸ್
ಮೈಸೂರು ನ 07 :ಭಾರತೀಯ ಜನತಾ ಪಾರ್ಟಿ ವತಿಯಿಂದ ಬರ ಅಧ್ಯಯನ ತಂಡ ಇಂದು ಹುಣಸೂರು ತಾಲೂಕಿನ ಚೆಲ್ಲಹಳ್ಳಿ ಹಾಗೂ ಬೆಂಕಿಪುರ ಗ್ರಾಮಕ್ಕೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಿದರು ಸಂಪೂರ್ಣವಾಗಿ ಒಣಗಿ ಹೋಗಿರುವ ರಾಗಿ ಮತ್ತು ಜೋಳದ ಬಳೆಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಅಧಿಕಾರಿಯಾಗಲಿ ಮಂತ್ರಿಯಾಗಲಿ, ಕಾಂಗ್ರೆಸ್ಸಿನ ಶಾಸಕರು ಆಗಲಿ ರೈತರ ಜಮೀನುಗಳಿಗೆ ಭೇಟಿ ನೀಡದೆ ಬರೀ ಬರ ತಾಲೂಕು ಎಂದು ಘೋಷಣೆ ಮಾಡಿರುವುದು ನಾಚಿಗೇಡಿನ ಸಂಗತಿ ಎಂದು ತಿಳಿಸಿದರು ಈ ತಂಡದ ನೇತೃತ್ವವನ್ನು ವಹಿಸಿರುವ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ರವರು ಹೇಳಿದರು ಈ ತಂಡದಲ್ಲಿ ಮಾನ್ಯ ಶಾಸಕರಾದ ಶ್ರೀವತ್ಸರವರು ಮಾಜಿ ಶಾಸಕರುಗಳಾದ ನಿರಂಜನ್ ಕುಮಾರ್ ಅವರು ಎನ್ ಮಹೇಶ್ ರವರು ಸಂಸದರಾದ ಪ್ರತಾಪ್ ಸಿಂಹರವರು ಮಾಜಿ ಸಚಿವರಾದ ವಿಜಯಶಂಕರ್ ಅವರು ಗ್ರಾಮಾಂತರಧ್ಯಕ್ಷರಾದ ಮಂಗಳ ಸೋಮಶೇಖರ್,ಜಿಲ್ಲಾ ವಕ್ತಾರರಾದ ಡಾ.ಕೆ ವಸಂತ ಕುಮಾರ್ ರವರು ಹುಣಸೂರು ತಾಲೂಕ್ ಅಧ್ಯಕ್ಷರಾದ ನಾಗಣ್ಣ ಗೌಡರು ಮತ್ತು ಕುಮಾರಸ್ವಾಮಿ ರವರು ಉಪಸ್ಥಿತರಿದ್ದರು,ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಡಾಕ್ಟರ್ ನವೀನ್ ರವರು ಹಾಗೂ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ರಮೇಶ ರವರು ಉಪಸ್ಥಿತರಿದ್ದರು