ಹುಣಸೂರು:ಬೋರ್ ವೆಲ್ ನಲ್ಲಿ ಕಲ್ಲು ಚಪ್ಪಡಿಗಳನ್ನ ಹಾಕಿ ಧ್ವೇಷ ತೀರಿಸಿಕೊಂಡ ಸಂಭಂಧಿಕ

ಸಂಜೆವಾಣಿ ವಾರ್ತೆ
ಹುಣಸೂರು,ಮೇ20:- ಹುಣಸೂರಿನಲ್ಲಿ ನಡೆದ ಬೋರ್ ವೆಲ್ ಕಿರಿಕ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.ಬೋರ್ ವೆಲ್ ಹಾಕುವುದನ್ನ ವಿರೋಧಿಸುತ್ತಾ ಬಂದಿದ್ದ ಸಂಭಂಧಿಕ ಅಮಾನವೀಯವಾಗಿ ಧ್ವೇಷ ತೀರಿಸಿಕೊಂಡಿದ್ದಾನೆ.ಲಕ್ಷಾಂತರ ರೂ ಖರ್ಚು ಮಾಡಿ ಕೊರೆಸಿದ ಬೋರ್ ವೆಲ್ ಗೆ ಕಲ್ಲು ಚೆಪ್ಪಡಿಗಳನ್ನ ತುಂಬಿ ಧ್ವೇಷ ತೀರಿಸಿಕೊಂಡಿದ್ದಾನೆ.ಹುಣಸೂರಿನ ಹೆಮ್ಮಿಗೆ ಗ್ರಾಮದಲ್ಲಿ ಘಟನೆ ನಡೆದಿದೆ.
ಹೆಮ್ಮಿಗೆ ಗ್ರಾಮದ ಸುಜಾತ ಹಾಗೂ ಕೃಷ್ಣೇಗೌಡ ಸಂಭಂಧಿಕರು.ಅಕ್ಕಪಕ್ಕದಲ್ಲೇ ಇವರಿಬ್ಬರ ಜಮೀನಿದೆ.ನೀರಿಗಾಗಿ ಸುಜಾತ ಬೋರ್ ವೆಲ್ ಕೊರೆಸಿದ್ದಾರೆ.ಮೊದಲಬಾರಿಗೆ ನೀರು ಸಿಕ್ಕಿಲ್ಲ.ನಂತರ ಮತ್ತೊಂದು ಬೋರ್ ವೆಲ್ ಕೊರೆಸಿದಾಗ ನೀರು ಬಂದಿದೆ.
ಈ ವೇಳೆ ಸಂಭಂಧಿಕ ಕೃಷ್ಣೇಗೌಡ ಕ್ಯಾತೆ ತೆಗೆದಿದ್ದಾನೆ.ಪಕ್ಕದಲ್ಲೇ ಬೋರ್ ಹಾಕಿದ್ರೆ ನಮ್ಮ ಬೋರ್ ವೆಲ್ ನಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತದೆ ಎಂದು ಕಾರಣ ನೀಡಿ ಕಿರಿಕ್ ಮಾಡಿದ್ದಾನೆ.ಬೋರ್ ವೆಲ್ ಕೊರೆಸಲು ಬಿಡದೆ ಅಡ್ಡಿಪಡಿಸಿದ್ದಾನೆ.ಕೆಲವು ದಿನಗಳ ಹಿಂದಷ್ಟೆ ಈ ಕಿರಿಕ್ ನಡೆದಿದ್ದು ಪ್ರಕರಣ ಪೆÇಲೀಸ್ ಠಾಣೆ ಮೆಟ್ಟಿಲೇರಿದೆ.
ಎರಡೂ ಕುಟುಂಬಗಳನ್ನ ಕರೆಸಿ ಪೆÇಲೀಸರು ಬುದ್ದಿವಾದ ಹೇಳಿದ್ದಾರೆ.ನಂತರ ಗ್ರಾಮದಲ್ಲಿ ಪಂಚಾಯ್ತಿ ನಡೆದು ಅನುಸರಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಕೃಷ್ಣೇಗೌಡ ರಾತ್ರೋ ರಾತ್ರಿ ಬೋರ್ ವೆಲ್ ನಲ್ಲಿ ಕಲ್ಲು ಚೆಪ್ಪಡಿಗಳನ್ನ ತುಂಬಿ ಹಗೆ ತೀರಿಸಿಕೊಂಡಿದ್ದಾನೆ.ಕೃಷ್ಣೇಗೌಡನ ಕುತಂತ್ರಕ್ಕೆ ಬೋರ್ ವೆಲ್ ನ ಪರಿಕರಗಳು ನಾಶವಾಗಿ ಸಾವಿರಾರು ರೂ ನಷ್ಟವಾಗಿದೆ.ಇದೀಗ ಸುಜಾತ ಮನೆಯವರು ಮತ್ತೆ ಹುಣಸೂರು ಗ್ರಾಮಾಂತರ ಠಾಣೆ ಪೆÇಲೀಸರ ಮೊರೆ ಹೋಗಿ ಕೃಷ್ಣೇಗೌಡ ವಿರುದ್ದ ದೂರು ದಾಖಲಿಸಿದ್ದಾರೆ.