ಹುಣಸೂರಿನಲ್ಲಿ ಬೃಹತ್ ಸಹಕಾರ ಸ್ನೇಹ ಸಮ್ಮಿಲನ

ಹುಣಸೂರು,ಆ.01:- ದೇಶದ ರೈತಾಪಿಗಳಿಗೆ ಹೈನುಗಾರಿಕೆ ಆಸರೆಯಾಗಿದ್ದು, ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ದ್ವೀತಿಯ ಸ್ಥಾನದಲ್ಲಿದು, ವಿಶ್ವದಲ್ಲಿ ಭಾರತ ಪ್ರಥಮ ಸ್ಥಾನದಲ್ಲಿರಲು ನಮ್ಮ ಸಹಕಾರ ಕ್ಷೇತ್ರದ ಕೊಡುಗೆ ಅಪಾರ ಎಂದು ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದ ಮುನೇಶ್ವgಕಾವಲ್ ಮೈದಾನದಲ್ಲಿ ಶನಿವಾರ ನಡೆದ ಬೃಹತ್ ಸಮಾರಂಭದಲ್ಲಿ ಹಾಲಿನ ಡೈರಿ ಸೇರಿದಂತೆ ವಿವಿಧ ಸಹಕಾರ ಸಂಘ ಸಂಸ್ಥೆಗಳ “ಸಹಕಾರ ಸಮ್ಮಿಲನ” ಕಾರ್ಯಕ್ರಮದಲ್ಲಿ ವಿವಿಧ ಪತ್ತಿನ ಸಹಕಾರ ಸಂಘಗಳ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಹಕಾರಿ ಪಿತಾಮಹ ಸಿದ್ಧನಗೌಡ ಸಣರಾಮನಗೌಡ ಪಾಟೀಲ್, ವರ್ಗೀಸ್ ಕುರಿಯನ್‍ರಿಂದ ಹಿಡಿದು ಕರ್ನಾಟಕದವರೇ ಆದ ಎಂ.ವಿ. ಕೃಷ್ಣಪ್ಪ ಹೀಗೆ ಹಲವಾರು ಮುಖಂಡರುಗಳು ಸಹಕಾರ ಚಳವಳಿಯ ಬಲವರ್ಧನೆಗೆ ಪ್ರೋತ್ಸಾಹ ನೀಡಿದ್ದಾರೆ. ರಾಜ್ಯದಲ್ಲಿ 46 ಸಾವಿರಕ್ಕೂ ಅಧಿಕ ಸಹಕಾರ ಸಂಘಗಳಿದ್ದು, 4 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಠಿ ಮಾಡಲಾಗಿದೆ. ದುಡಿಯುವ ಬಂಡವಾಳ 11 ಲಕ್ಷಕೋಟಿ ಗಳಿಗೂ ಅಧಿಕವಾಗಿದ್ದು, 6 ಲಕ್ಷಕೋಟಿರೂ.ಗೂ ಅಧಿಕ ಠೇವಣಿಗಳನ್ನು ಹೊಂದುವುದರ ಮೂಲಕ ವಿಶ್ವದ ಗಮನ ಸೆಳೆದಿದೆ ಎಂದು ಮಾಹಿತಿ ನೀಡಿದರು.
ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಮಾತನಾಡಿ ತಾಲೂಕಿನಲ್ಲಿ ಹೈನುಗಾರಿಕೆ ಹಾಗೂ ಪತ್ತಿನ ಸಹಕಾರ ಸಂಘಗಳ ಅಭಿವೃದ್ದಿಗೆ ಪೂರಕವಾಗಿ ಮೈಮುಲ್ ಹಾಗೂ ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಸೇರಿಜಂಟಿಯಾಗಿ ಕಾರ್ಯನಿರ್ವಹಿಸಿದ್ದರ ಪರಿಣಾಮ ಇಂದು ಸಹಕಾರಿ ಕ್ಷೇತ್ರ ಪ್ರಗತಿಯತ್ತ ಸಾಗುವ ಜೊತೆಗೆ ಸಹಕಾರಿಗಳ ಬದುಕು ಹಸನಾಗಿದೆ ಎಂದರು.
13 ಸಾವಿರ ಕುಟುಂಬಕ್ಕೆ ಶೂನ್ಯ ಬಡ್ಡಿ ಸಾಲ
ಸರಕಾರ ಹಾಗೂ ಶಾಸಕ ಮತ್ತು ಸಂಸದರ ನಿಧಿಯಿಂದಡೇರಿ ಹಾಗೂ ಸೊಸೈಟಿಗಳ ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುದಾನ ನೀಡುತ್ತಿಲ್ಲ. ಸರಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅಪೆಕ್ಸ್ ಬ್ಯಾಂಕ್ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಕನಿಷ್ಟ 5 ಲಕ್ಷರೂ ನೀಡಲುತೀರ್ಮಾನಿಸಲಾಗಿದೆ. ಹುಣಸೂರು ತಾಲೂಕಿನ 27 ಪತ್ತಿನ ಸಹಕಾರ ಸಂಘಗಳಿಗೆ ಹಿಂದೆ ಕೇವಲ 45 ಕೋಟಿ ಸಾಲ ನೀಡಲಾಗಿತ್ತು, 10 ಸಾವಿರ ಕುಟುಂಬಗಳಿಗೆ ಮಾತ್ರ ಅನುಕೂಲವಾಗಿತ್ತು, ತಾವು ಅಧ್ಯಕ್ಷರಾದ ನಂತರ 145 ಕೋಟಿಗೂಅಧಿಕ ಸಾಲ ವಿತರಿಸಲಾಗಿದೆ. ಮುಂದೆ 13 ಸಾವಿರ ಕುಟುಂಗಳಿಗೆ ಸಾಲ ಸೌಲಭ್ಯ ವಿಸ್ತರಿಸಲು ಮುಂದಾಗಿದ್ದೇವೆ ಎಂದರು.
2000 ಕೋಟಿ ವಹಿವಾಟು
2018 ರಲ್ಲಿ ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷನಾದಾಗ ಕೇವಲ 337 ಕೋಟಿ ಇದ್ದ ಠೇವಣಿ ಕೇವಲ 4 ವರ್ಷಗಳಲ್ಲಿ 900 ಕೋಟಿ ತಲುಪಿದೆ. ಒಂದು ಲಕ್ಷರೈತ ಕುಟುಂಬಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗಿದ್ದು, 1100 ಕೋಟಿಯಿಂದ 2100 ಕೋಟಿವರೆಗೆ ವ್ಯವಹಾರ ನಡೆಸಿರುವ ಹೆಮ್ಮೆ ಇದೆ. ಮಹಿಳಾ ಸ್ವಸಹಾಯ ಸಂಘಗಳಿಗೆ 17 ಕೋಟಿರೂ ಸಾಲ ನೀಡಲಾಗಿದೆ. ಸೊಸೈಟಿಗಳಿಗೆ ಹಿಂದೆ 50 ಸಾವಿರಅನುದಾನ ನೀಡಲಾಗುತ್ತಿತ್ತು.ಇದೀಗ 5 ಲಕ್ಷಕ್ಕೆ ಏರಿಸಲಾಗಿದೆ, ಡಿ.ಸಿ.ಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕಿನಿಂದತಾಲೂಕಿಗೆ 90 ಲಕ್ಷರೂ ಅನುದಾನ ನೀಡಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಮೈಮುಲ್‍ಅಧ್ಯಕ್ಷ ಪ್ರಸನ್ನ, ನಿರ್ದೇಶಕ ಕೆ.ಎಸ್.ಕುಮಾರ್ ನೇತೃತ್ವದ ತಂಡವು ಎರಡೂ ಜಿಲ್ಲೆಗಳ ರೈತರಿಗೆ, ಹೈನುಗಾರರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆಂದು ಸಂಸದ ಪ್ರತಾಪ್ ಶ್ಲಾಘಿಸಿದರು.
ವೇದಿಕೆಯಲ್ಲಿ ಮೈಮುಲ್‍ನ ನಿರ್ದೇಶಕಿ ಶಿವಗಾಮಿ ಸೇರಿದಂತೆ ಎಂಸಿಡಿಸಿಸಿ ನಿರ್ದೆಶಕÀರಾದ ಕೆ.ಎಸ್.ಕುಮಾರ್, ನಾಗೇಂದ್ರಗುಪ್ತ, ಶಿವಗಾಮಿ, ನಗರಸಭಾ ಸದಸ್ಯ ಸತೀಶ್‍ಕುಮಾರ್, ಮೈಮುಲ್‍ಎಂ.ಡಿ ವಿ ಜಯಕುಮಾರ್, ಎಂಸಿಡಿಸಿಸಿ ಬ್ಯಾಂಕಿನ ಸಿ.ಇ.ಓ ಜನಾರ್ಧನ್ ಸೇರಿದಂತೆ ಇತರೆಗಣ್ಯರು ಉಪಸ್ಥಿತರಿದರು.