ಹುಣಸೂರಿನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ

ಹುಣಸೂರು,ನ.01:- ಅತಿ ವಿಜೃಂಬಣೆಯಿಂದ ಹುಣಸೂರಿನಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಸಾರ್ವಜನಿಕರ ಮನಸೂರೆಗೋಳ್ಳುವುದರ ಜೊತೆ ಹುಣಸೂರಿನ ಇತಿಹಾಸ ಪುಟದಲ್ಲಿ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ನಗರದ ಕಲ್ಕುಣಿಕೆಯ ರಂಗನಾಥ ಬಡಾವಣೆಯಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್ ಕನ್ನಡ ತೆರಿಗೆ ಚಾಲನೆ ನೀಡಿ ಮೇರವಣಿಗೆಯಲ್ಲಿ ಪ್ರಮುಖರು ಹಾಗೂ ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದರು.
ಮನಸೂರೆಗೊಂಡ ಸ್ತಬ್ದ ಚಿತ್ರಗಳು
ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಿರ್ಮಾಣ ಮಾಡಿದ ಎರಡು ಸ್ತಬ್ದಚಿತ್ರಗಳಲ್ಲಿ ಹುಣಸೂರು ಸಾಧಕರ ಭಾವಚಿತ್ರ ಹಾಗೂ ಅವರ ಪರಿಚಯದ ವಿವರ ಹಾಗೂ ಕರ್ನಾಟಕದ ಏಕಿಕರಣದ ರೂವಾರಿಗಳು, ನಾಡು ಕಂಡ ಧಿಮಂತ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸರ 20 ಅಂಶಗಳ ಕಾರ್ಯಕ್ರಮಗಳ ವಿವರ ಮತ್ತು ತಾಲ್ಲೂಕಿನ ಐತಿಹಾಸಿಕ ಸ್ಥಳಗಳ ಭಾವಚಿತ್ರಗಳು ಹಾಗೂ ಸ್ವಾತಂತ್ರ್ಯ ಹೋರಾಟ ನಡೆಸಿದ ಓನಕೆ ಓಬ್ಬವ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಸಂಗೋಳಿ ರಾಯಣ್ಣ, ಮದಕರಿ ನಾಯಕ, ಸ್ವಾಮಿ ವಿವೇಕನಂದ, ಮೈಸೂರು ಒಡೆಯರ್ ಸೇರಿದಂತೆ ಇನ್ನಿತರೆ ಪ್ರಮುಖರ ವೇಷ ಧರಿಸಿದ ವಿದ್ಯಾರ್ಥಿಗಳು ಹಾಗೂ ಪತ್ರಿಕಾ ವಿತರಕ ಹುಡುಗರು ಎಲ್ಲರ ಮನಸೂರೆಗೊಂಡರು.
ಕಣಕಣದಲ್ಲೂ ರಾರಾಜಿಸಿದ ಅಪ್ಪು
ಈ ಬಾರಿ ಕನ್ನಡ ರಾಜ್ಯೋತ್ಸದಲ್ಲಿ ಪ್ರತಿ ಹಂತದಲ್ಲೂ ಕನ್ನಡದ ಮೇರು ನಟ ದಿವಂಗತ ಪುನೀತ್ ರಾಜ್ ಕುಮಾರ್ ಆವರಿಸಿಕೊಂಡಿದ್ದು ವಿಶೇಷವಾಗಿದ್ದು, ಕೆಲ ವೃತಗಳಲ್ಲಿ ಅಪ್ಪುವಿನ ಪುತ್ಥಳಿ ಸ್ಥಾಪಿಸಿರುವುದು ಮಹಿಳೆಯರನ್ನು ಹಾಗೂ ಮಕ್ಕಳನ್ನು ಸೂಜಿಗಲ್ಲಿನಂತೆ ಸೇಳೆದವು.
ಮಧುವಣಗಿತ್ತಿಯಾದ ಹುಣಸೂರು ನಗರ
ಹುಣಸೂರಿನ ಪ್ರತಿ ವೃತ ಹಾಗೂ ರಸ್ತೆಗಳು ತಳ್ಳಿರು-ತೋರಣಗಳಿಂದ ಅಲಕೃಂತಗೊಂಡು ಊರಿನ ಹಬ್ಬದಂತೆ ಕಂಗೊಳಿಸುತ್ತಿರುವ ಜೊತೆ ಎಲ್ಲ ಜಾತಿ ಧರ್ಮವನ್ನು ಮೀರಿ ಜನತೆ ಕನ್ನಡವನ್ನು ಅಪ್ಪಿಕೊಂಡ ರೀತಿ ಅನನ್ಯ.
ವಿಶೇಷ ಕಲಾ ತಂಡಗಳ ಭಾಗಿ
ಈ ಬಾರಿ ಮೇರವಣಿಯಲ್ಲಿ ಸ್ಥಳಿಯ ಕಲಾ ತಂಡಗಳ ಜೊತೆಯಲ್ಲಿ ಸ್ಥಳಿಯ ಶಾಲಾ ಮಕ್ಕಳ ಮನೋರಂಜನ ಕಾರ್ಯಕ್ರಮಗಳು ಹಾಗೂ ಕೇರಳದ ಚಂಡೆ ಮತ್ತು ಮಾರಿಗುಡಿ ಬೀದಿಯ ಮುತ್ತುಮಾರಮ್ಮ ದೇವಸ್ಥಾನದ ವತಿಯಿಂದ ನಿರ್ಮಿಸಿದ ಚಾಮುಂಡಿ ಮರ್ಧನ ಸ್ತಬ್ದಚಿತ್ರ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ಮುಖಂಡ ಜಿ.ಡಿ.ಹರೀಶ್‍ಗೌಡ, ನಗರಸಭೆ ಅಧ್ಯಕ್ಷೆ ಗೀತಾ ನಿಂಗರಾಜು, ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ಪೌರಯುಕ್ತೆ ಎಲ್.ರೂಪ ತಹಶೀಲ್ದಾರ್ ಡಾ ಆಶೋಕ್, ಇಓ ಬಿ.ಕೆ.ಮನು, ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ತಾ.ಪಂ ಸಹಾಯಕ ನಿರ್ದೆಶಕ ಲೋಕೆಶ್, ತಾಲ್ಲೂಕು ಪಿ.ಡಿ.ಓ ಸಂಘದ ಅಧ್ಯಕ್ಷ ರಾಮಣ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೋಂಡಿದರು.