ಹುಣಸಿಹೊಳೆಯಲ್ಲಿ: ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀ ಪಾದಂಗಳವರ ಚಾತುರ್ಮಾಸ್

ಕಲಬುರಗಿ:ಜು.21:ಶುಭಕೃತ ನಾಮ ಸಂವತ್ಸರದಲ್ಲಿ ಶ್ರೀ ಶ್ರೀ 1008 ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀ ಪಾದಂಗಳವರು ತಮ್ಮ ತೃತೀಯ ಚಾತುರ್ಮಾಸ್ಯ ಕೃಷ್ಣ ನದಿ ತೀರ ವೀರಘಟ್ಟ ಹುಣಸಿಹೊಳೆಯಲ್ಲಿ ಆಚರಿಸಲು ಸಂಕಲ್ಪಿಸಿದ್ದಾರೆ.
ಸುಮಾರು ಎರಡು ಶತಮಾನಗಳ ಇತಿಹಾಸವಿರುವ ಶುಕ್ಲ ಯಜುರ್ವೇದಿಯ ಶಾಖ ಮಠವಾದ
ಸುರಪುರ ತಾಲೂಕಿನ ಶ್ರೀಮದ್ ಕಣ್ವಮಠ ಮೂಲ ಮಹಾಸಂಸ್ಥಾನ ಹುಣಸಿಹೊಳೆಯಲ್ಲಿ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀ ಪಾದಂಗಳವರು ಶುಭ ಕೃತ ನಾಮ ಸಂವತ್ಸರದ ತಮ್ಮ ತೃತೀಯ ಚಾತುರ್ಮಾಸ್ಯ ವ್ರತವನ್ನು ಅನುಷ್ಠಾನ ಮಾಡಲಿದ್ದಾರೆ.
ಜುಲೈ 23 ರಿಂದ ಸೆಪ್ಟಂಬರ್ 10 ಅನಂತ ಚತುರ್ದಶಿಯವರೆಗೆ ಅನುಗ್ರಹ ಮುಖಿಗಳಾದ ಶ್ರೀಪಾದಂಗಳವರು ವಿಠಲ ಕೃಷ್ಣನಿಗೆ ವಿಶೇಷ ಪೂಜೆ ಪುನಸ್ಕಾರ ಗೋಷ್ಠಿ, ಉಪನ್ಯಾಸ ಧಾರ್ಮಿಕ ಕಾರ್ಯಕ್ರಮಗಳು ಜ್ಞಾನ ಸತ್ರಗಳನ್ನು ಹಮ್ಮಿಕೊಳ್ಳಲಿದ್ದಾರೆ ಮತ್ತು ಆಗಸ್ಟ್ 19 ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಟ್ರಸ್ಟನ ಅಧ್ಯಕ್ಷರಾದ ಶ್ರೀ ಮನೋಹರ್ ಮಾಡಗೇರಿ, ದಿವಾನರಾದ ಸುರೇಶ್ ಕುಲಕರ್ಣಿ, ರಂಗನಾಥ್ ಜೋಶಿ ಪ್ರಸನ್ನ ಆಲಮಪಲ್ಲಿ, ರಾಜು ಜೋಷಿ, ವಿನುತ್ ಏಸ್ ಜೋಶಿ ಹಾಗೂ ಟ್ರಸ್ಟನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ರಾಜ್ಯದ ಮತ್ತು ಹೊರ ರಾಜ್ಯದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ, ಚಾತುರ್ಮಾಸ್ಯದ ವಿಶೇಷ ಸೇವೆ ಸಲ್ಲಿಸಲು ಬಯಸುವವರು ಮೋ: 9822504100 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.