ಹುಣಸಿಹೊಳೆಯಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ದೇವಸ್ಥಾನ ನಿರ್ಮಾಣ

ಕಲಬುರಗಿ,ಜು 3: ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ ರಾಷ್ಟ್ರೀಯ ಹಾಗೂ ರಾಜ್ಯ ಪದಾಧಿಕಾರಿಗಳ ಸಭೆ ಸುರಪುರ ತಾಲೂಕಿನ ಹುಣಸಿಹೊಳೆಯ ಶ್ರೀಮತ್ ಕಣ್ವಮಠ ಮೂಲಮಹಾ ಸಂಸ್ಥಾನದ ಪೀಠಾಧಿಪತಿಗಳಾದ ವಿದ್ಯಾಕಣ್ವವಿರಾಜ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಆಯೋಜಿಸಲಾಗಿತ್ತು. ಕಣ್ವ ಪರಿಷತ್ತಿನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಮನೋಹರ ಮಾಡಿಗೇರಿ ಮಾತನಾಡಿ ಮುಂಬರುವ ದಿನಗಳಲ್ಲಿ ಶ್ರೀಮತ್ ಕಣ್ವಮಠ ಆಡಳಿತಾಭಿವೃದ್ಧಿ ಟ್ರಸ್ಟ್ ಮತ್ತು ಕಣ್ವ ಪರಿಷತ್ ವತಿಯಿಂದ ಶ್ರೀಮಠದ ಆವರಣದಲ್ಲಿ ವಿಠ್ಠಲಕೃಷ್ಣ, ಸೂರ್ಯನಾರಾಯಣ ಮತ್ತು ಯಾಜ್ಞವಲ್ಕ್ಯ ಮಹರ್ಷಿಗಳ ದೇವಸ್ಥಾನ ಹಾಗೂ ಶ್ರೀ ಮಠದ ಪುಷ್ಕರಣಿಯ ಹತ್ತಿರ ಕಣ್ವಋಷಿಗಳ ವಿಗ್ರಹ ಪ್ರತಿಷ್ಠಾಪಿಸಲಾಗುವುದು, ಶಾಖಾ ಬಾಂಧವರ ಸಹಾಯ, ಸಹಕಾರದೊಂದಿಗೆ ದೇವಸ್ಥಾನಗಳ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪೀಠಾಧಿಪತಿಗಳಾದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರು ಮಾತನಾಡಿ ಈ ಬಾರಿ ಚಾತುರ್ಮಾಸ್ಯ ವ್ರತದ ಸಂಕಲ್ಪವನ್ನು ಭಕ್ತರ ಅಪೇಕ್ಷೆಯ ಮೇರೆಗೆ ಶ್ರೀಮತ್ ಕಣ್ವಮಠದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಮತ್ತು ಚಾತುರ್ಮಾಸ ಸಮಿತಿ ಅಧ್ಯಕ್ಷರನ್ನಾಗಿ ವಿ.ಕಿಶನರಾವ್ ಕುಲಕರ್ಣಿ ಅವರನ್ನು ನೇಮಿಸಲಾಗಿದೆ ಎಂದರು.
ಕಣ್ವ ಪರಿಷತ್ತಿನ ರಾಜ್ಯಾಧ್ಯಕ್ಷರಾದ ವಿ ಕಿಶನರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ಅಖಿಲ ಭಾರತ ಶುಕ್ಲ ಯಜುರ್ವೇದಿಯ ರಾಷ್ಟ್ರೀಯ ಸಮ್ಮೇಳನವನ್ನು ಈ ವರ್ಷದ ಅಂತ್ಯದೊಳಗೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು, ಪರಿಷತ್ತಿನ ದಕ್ಷಿಣ ವಲಯದ ಅಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದರು.
ಅಖಿಲ ಭಾರತ ಶುಕ್ಲಯಜುರ್ವೇದಿಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಆರ್ ಲಕ್ಷ್ಮಿಕಾಂತ್ ಮಾತನಾಡಿದರು.ವೇದಮೂರ್ತಿಗಳಾದ ಶಂಕರಭಟ್ ಜೋಶಿ, ವಿಷ್ಣುಪ್ರಕಾಶ್ ಜೋಶಿ ಮತ್ತು ಸಂಜಯ್ ಕುಲಕರ್ಣಿ ವೇದ ಘೋಷ ನಡೆಸಿಕೊಟ್ಟರು. ಮಂಜುಳಾದೇವಿ ಪ್ರಾರ್ಥನಾ ಗೀತೆ ಹಾಡಿದರು, ರವಿಕಿರಣ್ ತಾಳಿಕೋಟೆ ನಿರೂಪಿಸಿದರು, ಐ. ರಮೇಶ್ ಸ್ವಾಗತಿಸಿದರು, ವಿನುತ್ ಜೋಶಿ ವಂದಿಸಿದರು.
ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷಪ್ರಹ್ಲಾದ ಎಸ್ ಕುಲಕರ್ಣಿ, ಶ್ಯಾಮ್ ಕಣ್ವ, ಮೋಹನ್ ದೇವರು, ರಾಜು ಜೋಶಿ, ಶುಕ್ಲ ಯಜು: ಶಾಖಾ ಟ್ರಸ್ಟನ ಅಧ್ಯಕ್ಷ ವೈ ವಿ ವೇಣುಗೋಪಾಲ್, ಕೆ. ಎನ್. ಚಂದ್ರಶೇಖರ, ನಾಗರಾಜ್ ಕೋನಕುಂಟ್ಲು, ರಮೇಶಾಚಾರ್ಯ ಬಾದರ್ಲಿ, ಸುರೇಶ್ ಕುಲಕರ್ಣಿ, ವಿನುತ ಜೋಶಿ, ಕೃಷ್ಟಾಚಾರ್ಯ ತುರಡಗಿ, ಪಿಬಿ ಹಂಗರಗಿ, ರಾಘವೇಂದ್ರ ಅಲಗೂರು, ಪ್ರಶಾಂತ್ ಕುಲಕರ್ಣಿ, ರಘುನಾಥ್ ಜೋಶಿ, ಭೀಮಸೇನರಾವ್ ವಿಜಯಪುರ, ಭೀಮಸೇನರಾವ್ ಚಟ್ನಿಹಾಳ್,ಪ್ರಸನ್ನ ಅಲಂಪಲ್ಲಿ, ಗೋವರ್ಧನ್, ರಾಘವೇಂದ್ರ ಗೆದ್ದಲಮರಿ, ಕಿಶನರಾವ್ ದೇಸಾಯಿ ಜಾವೂರು, ಮಂಜುನಾಥ್ ಕುಲಕರ್ಣಿ, ಅನಂತ್ ಕುಲಕರ್ಣಿ, ರಮೇಶ್ ಕುಲಕರ್ಣಿ, ಲಕ್ಷ್ಮಣ, ಸಂತೋಷ್ ಉಪಸ್ಥಿತರಿದ್ದರು.