ಹುಣಸಿಹಡಗಿಲನಲ್ಲಿ ಹೇಳಿಕೆ ನುಡಿಗಳು

ಕಲಬುರಗಿ,ಜೂ.11- ತಾಲೂಕಿನ ಸುಕ್ಷೇತ್ರ ಹುಣಸಿಹಡಗಿಲದ ಅಲ್ಲಮಪ್ರಭು ಮಂದಿರದಲ್ಲಿ ಬಾದಮಿಯ ಚತುರ್ದಶಿಯಂದು ಹೇಳಿಕೆ ನುಡಿಗಳು.
ಪರಮಪೂಜ್ಯ ಲಿಂಗೈಕ್ಯ ಶ್ರೀಬಸವಲಿಂಗ ಶರಣರ ಸುಪುತ್ರರಾದ ಪೂಜ್ಯ ಗುಂಡೇರಾಯ ಮುತ್ಯಾರವರ ಹೇಳಿಕೆ ನುಡಿಗಳು ಗುಡಿಯ ಹೊರಗಡೆ ಹಿಂಗಾರಿ ಮುಂಗಾರಿ ಸೋಸಿ ನೊಡದರಾಗ ಹಿಂಗಾರಿ ಮೂರು ಗುಂಜಿ ಹೆಚ್ಚಾಯಿತು. ಬಸವನ ಚಿಕ್ಕ ದಸರಿಗೆ ಹರಿತು ಅನ್ನುದರಾಗ ಕಸರಕುಂತು, ಬಸವನ ಪೀಡಾ ಚಾರಾಣೆ ಬಾಲನಪೀಡಾ ಭಾರಾಣಿ ಉಳಿತು.
ಸ್ವಪ್ನನದ ನಂತರ ಹೇಳಿದ ನುಡಿಗಳು. ದಿಕ್ಕು ಪೂರ್ವ ತೊಗರಿಬೆಳೆ ಇತ್ತು ಸರಿಯಾಗಿ ಇತ್ತು ಹತ್ತಿಬೆಳಿ ಕೂಡಾ ಇತ್ತು ಶರಣರು ಅಲ್ಲಿಗೆ ಹೋಗಿ ನೋಡಿದರು ಕೂರಗಿನಡೆದಿತ್ತು ಒಂದು ಕರಿ ಎತ್ತು ಕೆಂಪ ಎತ್ತ ಇದ್ದವು, ಶರಣರು ಯಾವದು ಚಲೋಅದ ಅಂತ ಕೇಳಿದಾಗ ಎರಡು ಸರಿಯಾಗಿ ಇವೇರಿ ಯಪ್ಪಾ ಅಂತಾ ರೈತನು ಹೇಳಿದನು.
ದಿಕ್ಕು ಪಶ್ಚಿಮ- ತೊಗರಿ ಬೆಳಿ ಇತ್ತು ಹಾಗೂ ಉದ್ದ, ಹೆಸರ, ಬೆಳೆಗಳು ಇದ್ದವು ಎಲ್ಲ ಬೆಳೆಗಳು ಸರಿಯಾಗಿ ಇದ್ದವು.
ದಿಕ್ಕು ಉತ್ತರ- ತೊಗರಿ ಸೂರ್ಯಪಾನ ಹತ್ತಿ ಬೆಳಿಬಾಳ ಇತ್ತು ಬೆಳೆಗಳು ಸರಿಯಾಗಿದ್ದವು ಮುಂದ ಬರುವದರೋಳಗ ಒಂದು ಭಾವಿ ಇತ್ತು ಬಾವಿತುಂಬಾ ನೀರು ಇದ್ದವು ಎರಡು ಎತ್ತುಗಳು ಕಟ್ಟೆ ರೈತ ಬಾಳಬಾಟಿ ಹಾಕಿದನು ಶರಣರು ಅಲ್ಲಿಗೆ ಹೋಗಿ ಯಾಕಪ ಹ್ಯಾಂಗ ಇದ್ದಿಯಾ ಅಂತ ಕೇಳಿದರು ಇದೇನು ಮಾಡತಾ ಇದಿಯಾ ಅಂತ ಕೇಳಿದರು ಆಗ ರೈತನು ಎಲ್ಲಾ ತರಹದ ಕಾಯಿ ಪಲ್ಲೆ ಮಾಡಿದರಿ ಅಂತ ಯಾಕಪ ಬರೀ ಇದೆ ಮಾಡಿದೆಯಲ್ಲ ಅಂತ ಕೇಳಿದಾಗ ಆರೈತನು ಒಂದು ಹೋದರ ಒಂದು ಉಳಿತಾರಿಯಪ್ಪಾ ಅಂತ ಹೇಳಿದ.
ದಿಕ್ಕು ದಕ್ಷಿಣ- ಸಜ್ಜಿ ಹತ್ತಿ ಬಹಳ ಇತ್ತು ಹಾಗು ತೊಗರಿ ಹೆಸರು ಉದ್ದು ಎಲ್ಲಾ ಬೆಳೆಗಳು ಸರಿಯಾಗಿದವು ಹೊಲದ ತುಂಬಾ ಎಲ್ಲ ಜನರು ಕಾಣುತ್ತಿದ್ದರು ಅಂತ ತೀರ್ಥಗುಂಡಕ್ಕೆ ಪ್ರಯಾಣ ಬೆಳೆಸಿದರು. ಹೇಳಿಕೆಯ ವರದಿಯನ್ನು ಹಣಮಂತರಾವ ಬಿ.ಮಂಗಾಣಿ ಅವರು ಪ್ರಕಟಿಸಿದ್ದಾರೆ.