ಹುಣಸಗಿ ಲಾಕ್‍ಡೌನ್ ಜಾರಿಗೆ ಪೊಲೀಸರ ಬಿಗಿಕ್ರಮ

ಹುಣಸಿಗಿ,ಮೇ.26- ಮಹಾಮಾರಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ 14 ದಿನಗಳ ಕಾಲ ಲಾಕ್ಡೌನ್ ಘೋಷಿಸಿದ್ದು, ಯಾದಗಿರಿ ಜಿಲ್ಲೆಯಲ್ಲಿ ಮೇ.24ರ ಬೆಳಗ್ಗೆ 6ರಿಂದ ಮೇ.28ರ ಬೆಳಗ್ಗೆ 6 ರ ವರಿಗೆ ಸಂಪೂರ್ಣವಾಗಿ ಲಾಕ್ಡೌನ್ ಜಾರಿ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ರಾಗ ಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.
ಅಗತ್ಯ ಮತ್ತು ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿದ್ದು, ಆಸ್ಪತ್ರೆ ಔಷಧಿ ಅಂಗಡಿ ನೀರು ವಿದ್ಯುತ್ ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಮಾರುಕಟ್ಟೆಗಳು ಸಂಪೂರ್ಣ ಬಂದು ಮಾಡಲಾಗಿದೆ. ಆದರೂ ಕೂಡ ಗೊತ್ತಿದ್ದು ಜನರು ಬೇಕಾಬಿಟ್ಟಿಯಾಗಿ ತಿರುಗುವುದು ಸುಳ್ಳು ನೆಪವೊಡ್ಡಿ ತಿರುಗಾಡುವುದು ಇದಕ್ಕೆ ಬೇಸತ್ತ ಪೆÇಲೀಸ್ ಅಧಿಕಾರಿಗಳು ಬೆಳಂ ಬೆಳಗ್ಗೆ 6 ಗಂಟೆಗೆ ತಪಾಸಣೆಗೆ ಇಳಿದರು ತಪಾಸಣೆಯನ್ನು ಇಲ್ಲಿನ ಸಿಪಿಐ ದೌಲತ್ ಪಿಎಸ್‍ಐ ಬಾಪುಗೌಡ ಎಸ್‍ಐ ರಾಥೋಡ್ ಎಸ್‍ಐ ಮೌನೇಶ್ ಪೆÇಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದವರು ಕೈಗೊಂಡರು.