ಹುಣಸಗಿ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೆಣಿಗೆ

ಹುಣಸಗಿ,ಮೇ.26- ಮಹಾಮಾರಿ ಕೋವಿಡ್ ಸೋಂಕಿನ ಎರಡನೆ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ, ಕಾರ್ಮಿಕರ ನೆರವಿಗೆ ಸಹಾಯಹಸ್ತ ನೀಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಸಾರಿವಿ ರೂ.ಗಳ ಚೆಕ್‍ನ್ನು ಕಿರಾಣಿ ವ್ಯಾಪಾರಸ್ಥರಾದ ಗುರುಲಿಂಗಪ್ಪ ಶಿವಲಿಂಗಪ್ಪ ಸಜ್ಜನ್ ಅವರು, ತಹಸಿಲ್ದಾರ ಮಾದೇಗೌಡರಿಗೆ ಸಲ್ಲಿಸಿದರು.
ಕೋವಿಡ ಲಾಕ್‍ಡೌನ್ ಸಂಕಷ್ಟದಲ್ಲಿ ಸಿಲುಕಿರುವ ಸಂತ್ರಸ್ಥರ ನೆರವಿಗೆ ಮುಂದಾಗಿರುವ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೆಜ ಘೋಷಿಸಿದ್ದಾರೆ, ಅವರ ಪರಿಹಾರ ನಿಧಿಗೆ ತಮ್ಮ ಅಲ್ಪನೆರವಿನ ಚೆಕ್‍ನ್ನು ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಜ್ಜನ ಅವರು ಸಲ್ಲಿಸಿದರು.