ಹುಣಸಗಿ ತಾಲೂಕು: ಸಂಜೆ 5 ಗಂಟೆವರೆಗೆ ಶೇ.61.37 ಮತದಾನ

ಹುಣಸಗಿ:ಡಿ.23:ತಾಲೂಕಿನಲ್ಲಿ 17 ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಹುಣಸಗಿ ತಾಲೂಕಿನಲ್ಲಿ ಮಧ್ಯಾಹ್ನದ ವರೆಗೂ ಶೇ.46.64 ಮತದಾನ ಆಗಿದ್ದು ಕಂಡು ಬಂತು. ನಂತರ ಸಂಜೆ 5 ಗಂಟೆ ಸುಮಾರಿಗೆ ಶೇ.61.37 ಮತದಾನ ಪ್ರಮಾಣ ಏರಿಕೆ ಆಗಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕುನು ಚಲಾಯಿಸಿದ್ದಾರೆ.

ಚುನಾವಣೆ ಸ್ವೀಪ್ ಕಮೀಟಿ ಮತದಾನ ಬಗ್ಗೆ ಅಲ್ಲಲ್ಲಿ ಜನರಿಗೆ ಜಾಗೃತಿ ಮೂಡಿಸಿದ್ದರಿಂದಾಗಿ ಮತದಾನ ಹೆಚ್ಚಳಕ್ಕೆ ಕಾರಣವಾಗಿದೆ. ವಯಾವೃದ್ಧರು ತಮ್ಮ ಕುಟುಂಬಸ್ಥರ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಕಾಮನಟಗಿ ಗ್ರಾ.ಪಂ: ಕಾಮನಟಗಿ ಗ್ರಾಮದಲ್ಲಿ 1 ನೇ ವಾರ್ಡ್ ಹಾಗೂ 2 ನೇ ವಾರ್ಡ್‍ನ ಮತಗಟ್ಟೆಗಳ ಬ್ಯಾಲೇಟ್ ಪೇಪರ್ ಅಭ್ಯರ್ಥಿಗಳ ಚಿನ್ಹೆಗಳು ಅದಲು-ಬದಲಾಗಿ ರಾತ್ರಿ ವೇಳೆ ಸಮಸ್ಯೆ ಆಗಿತ್ತು. ಹೀಗಾಗಿ ಎಚ್ಚೆತ್ತುಕೊಂಡ ಚುನಾವಣಾಧಿಕಾರಿಗಳು ರಾತ್ರಿ ಸ್ಥಳಕ್ಕೆ ಆಗಮಿಸಿ ಗೊಂದಲಕೀಡಾಗಿದ್ದ ಬ್ಯಾಲೇಟ್ ಪೇಪರ್ ಸಮಸ್ಯೆಯನ್ನು ಪರಿಹರಿಸಿದರು.

ಹುಣಸಗಿ ನೂತನ ತಾಲೂಕಿನಲ್ಲಿಯೇ ಈ ಭಾರಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತದೊಂದಿಗೆ ಎದುರಿಸುವಂತಾಯಿತು. ಹೀಗಾಗಿ ಬೆಳ್ಳಗ್ಗೆ 7 ಗಂಟೆಗೆ ಪ್ರಾರಂಭಿಸಿದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯಗೊಳಿಸಲಾಯಿತು.