
ಹುಣಸಗಿ :ಮಾ.3: ಮಾರ್ಚ್ 7ರಂದು ಯೋಗಿ ನಾರಾಯಣ ಜಯಂತಿ, ಮಾರ್ಚ್ 16 ರಂದು ರೇಣುಕಾಚಾರ್ಯ ಜಯಂತಿ, ಮಾರ್ಚ್ 26 ರಂದು ದೇವರ ದಾಸಿಮಯ್ಯ ಜಯಂತಿ ಇರುವುದರಿಂದ ಹುಣಸಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಹಸೀಲ್ದಾರ ಜಗದೀಶ್ ಚೌರ್ ಅಧ್ಯಕ್ಷತೆಯಲ್ಲಿ ವಿವಿಧ ಮೂರು ಜಯಂತಿಗಳ ಪೂರ್ವಭಾವಿ ಸಭೆ ನಡೆಯಿತು. ನಡೆಯಲಿರುವ ಕಾರ್ಯಕ್ರಮದ ಕುರಿತು ಚರ್ಚಿಸಲು ವಿವಿಧ ಸಮಾಜದ ಮುಖಂಡರು ಹಾಗೂ ಸಂಘಟನೆಗಳ ಪ್ರಮುಖರೊಂದಿಗೆ ಜಯಂತಿ ಆಚರಣೆ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಈ ಎಲ್ಲಾ ಶ್ರೇಷ್ಠ ದಾರ್ಷನಿಕರ ಜಯಂತಿಯಲ್ಲಿ ತಾವುಗಳೆಲ್ಲರೂ ತಾಲೂಕು ಆಡಳಿತ ವತಿಯಿಂದ ನಡೆಸುವ ಆಚರಣೆಯಲ್ಲಿ ಭಾಗವಹಿಸಬೇಕು ಹಾಗೂ ನಿಮ್ಮಿಂದ ಏನಾದ್ರು ಸಲಹೆ ಸೂಚನೆಗಳು ಇದ್ದರೆ ತಿಳಿಸಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಚೆನ್ನಯ್ಯ ಸ್ವಾಮೀ ಹಿರೇಮಠ, ವಿರೇಶ ಬಿ ಚಿಂಚೋಳಿ, ಬಸವರಾಜ ಸ್ಥಾವರಮಠ, ಬಸವರಾಜ ಮಲಗಲದಿನ್ನಿ, ಬಸಣ್ಣ ದೇಸಾಯಿ ಬೈಲಕುಂಟಿ, ಬಿ ಎಲ್ ಹಿರೇಮಠ, ಎ???ಸ್ ಚಂದಾ, ಶಿವಲಿಂಗಸ್ವಾಮಿ ಹೊಸಮಠ, ಶಿವಲಿಂಗಸ್ವಾಮಿ ವೀರಕ್ತಮಠ, ಬೇಡ ಜಂಗಮ ವೇದಿಕೆ ಜಿಲ್ಲಾಧ್ಯಕ್ಷ ನಾಗಯ್ಯಸ್ವಾಮಿ ದೇಸಾಯಿಗುರು, ಹೊನ್ನಕೇಶವ ದೇಸಾಯಿ, ರವಿ ಪೂರಾಣಿಕಮಠ, ಪ್ರಭು ಸ್ವಾಮೀ, ಮಹೇಶ್ ಸ್ಥಾವರಮಠ,ಅನಿಫ್ ಸಾಬ ಬೆನ್ನೂರು, ಕಾಶೀಮಸಾಬ ಚೌದ್ರಿ, ಬಾಷುನಾಯಕ ಸೇರಿದೆಂತೆ ವಿವಿಧ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು. ವೆಂಕಟೇಶ್ ದಾಸರ ನಿರೂಪಿಸಿ ಸ್ವಾಗತಿಸಿದರು, ಹಸನ್ ಮುಲ್ಲಾ ವಂದಿಸಿದರು.