ಹುಣಸಗಿ: ಕರವೇಯಿಂದ ಪರಿಸರ ದಿನಾಚರಣೆ

ಹುಣಸಗಿ,ಜೂ.6- ಸಸಿ ನೆಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು.
ಸಂಘಟನೆಯ ಹುಣಸಗಿ ತಾಲೂಕು ಘಟಕ ಕಚೇರಿ ಮುಂಭಾಗದಲ್ಲಿ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಗೆ ಕರವೇ ತಾಲೂಕ ಘಟಕದ ಅಧ್ಯಕ್ಷ ಶಿವಲಿಂಗ ಸಾಹುಕಾರ್ ಪಟ್ಟಣಶೆಟ್ಟಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣಶೆಟ್ಟಿಯವರು, ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಬೇಕು ಎಂದು ಕರೆನೀಡಿದರು.
ಪರಿಸರ ದಿನಾಚರಣೆಯ ಅಂಗವಾಗಿ ಬಡವರು ಮತ್ತು ಕೊರೊನಾ ಸೋಂಕಿತ ರೋಗಿಗಳಿಗೆ ಬೆಳಗಿನ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವಲಿಂಗ್ ಸಾಹುಕಾರ್ ಪಟ್ಟಣಶೆಟ್ಟಿ ಮೌನೇಶ್ ಸಾಹುಕಾರ್ ಚಿಂಚೋಳಿ ಬಸವರಾಜ ಚನ್ನೂರ ಮಲ್ಲು ಇಸಂಪೂರ್ ಶಂಕರಗೌಡ ಪಾಟೀಲ್ ರಾಜು ಅವರಾದಿ ನಿಂಗಣ್ಣ ಗುತ್ತೇದಾರ್ ಮತ್ತಿತರರು ಭಾಗಿಯಾಗಿದ್ದರು.