ಹುಣಸಗಿಯಿಂದ ಶ್ರೀಶೈಲ್ ಜಗದ್ಗುರುಗಳ ಪಾದಯಾತ್ರೆಗೆ ಬೀಳ್ಕೊಡುಗೆ

ಹುಣಸಗಿ :ನ.13: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ನಿಮಿತ್ಯ ವಿವಿಧ ಧಾರ್ಮಿಕ, ಸಾಮಾಜೀಕ ಹಾಗೂ ಜನಜಾಗೃತಿಗಾಗಿ ಪಾದಯಾತ್ರೆಯನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶ್ರೀಕ್ಷೇತ್ರ ಯಡೂರದಿಂದ ಆರಂಭವಾದ ಈ ಪಾದಯಾತ್ರೆ ಯಾದಗಿರಿ ಜಿಲ್ಲೆಯ ನೂತನ ತಾಲೂಕು ಕೇಂದ್ರ ಹುಣಸಗಿಯಿಂದ ಪಟ್ಟಣದ ಎಲ್ಲಾ ಭಕ್ತರು ಹಾಗೂ ಸುರಪೂರ ಶಾಸಕ ನರಸಿಂಹ ನಾಯಕ ರಾಜೂಗೌಡ ಅವರು ಶ್ರೀಶೈಲ್ ಜಗದ್ಗುರುಗಳ ಪಾದಯಾತ್ರೆಯನ್ನು ಹಾಗೂ ಶ್ರೀಗಳನ್ನು ಅದ್ದೂರಿಯಾಗಿ ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಕ್ಕೇರಾ ಪಟ್ಟಣಕ್ಕೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಗುಳುಬಾಳ ಶ್ರೀ ಸೇರಿದಂತೆ,ವಿರೇಶ ಬಿ ಚಿಂಚೋಳಿ, ಬಿ,ಎಮ್, ಅಳ್ಳಿಕೋಟಿ, ತಾಲೂಕಿನ ಹಲವು ಮುಖಂಡರು ಹಾಗೂ ಭಕ್ತರು ವೈಭವಪೂರ್ವಕವಾಗಿ ಶ್ರೀಗಳನ್ನು ಬೀಳ್ಕೊಟ್ಟರು. ಮಾರ್ಗದ ಮಧ್ಯೆ ಶ್ರೀಶೈಲ್ ಮಲ್ಲಿಕಾರ್ಜುನ ಪರಮ ಭಕ್ತ ಎಮ್, ಎಸ್,ಚಂದಾ, ಅವರ ಸಂಜಯ ಫಿಲ್ಲಿಂಗ್ ಸ್ಟೇಷನ ಗೆ ಭೇಟಿ ಸನ್ಮಾನ ಸ್ವೀಕರಿಸಿ ಚಂದಾ ಕುಟುಂಬಸ್ತರಿಗೆ ಆಶೀರ್ವಾದ ನೀಡಿದರು. (ಕೋಟ್ 1) ಇದೊಂದು ಐತಿಹಾಸಿಕ ಪಾದಯಾತ್ರೆ: ಶಾಸಕ ರಾಜೂಗೌಡ
ಶ್ರೀಶೈಲ ಜಗದ್ಗುರುಗಳ ಈ ಲೋಕ ಕಲ್ಯಾಣಕ್ಕಾಗಿ ನಡೆದ ಪಾದಯಾತ್ರೆ ಐತಿಹಾಸಿಕವಾದದ್ದು. ಒಬ್ಬ ಜಗದ್ಗುರು ಪಲ್ಲಕ್ಕಿ ಬಿಟ್ಟು ಕಾಲ್ನಡಿಗೆಯಲ್ಲೇ ಸಮಾಜದ ಸಾಮರಸ್ಯ, ಸ್ವಾಸ್ಥ್ಯ, ಸಂಸ್ಕಾರ, ಸಂಸ್ಕøತಿ ಉಳಿವಿಗಾಗಿ ನಡೆದಿದೆ. ಎಲ್ಲಾ ಜಿಲ್ಲೆಗಳಲ್ಲಿ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅಧಿಕ ಜನರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಮಾಜ ಯಾವುದೇ ಇರಲಿ ಸಮಾಜದ ಪರಿವರ್ತನೆಗಾಗಿ ಈ ಪಾದಯಾತ್ರೆ ಆರಂಭವಾಗಿದೆ. ಸುರಪುರ ಶಾಸಕ ರಾಜೂಗೌಡ ಹೇಳಿದರು.