ಹುಡುಗಿಯರ ಜೊತೆ ವಿಲ್ಹಿಂಗ್ ಖದೀಮ ಜೈಲಿಗೆ

ಮುಂಬಯಿ(ಮಹಾರಾಷ್ಟ್ರ),ಏ.೩-ಹಿಂದೆ ಒಬ್ಳು ಮುಂದೆ ಒಬ್ಳು ಹುಡುಗೀನ ಕೂರಿಸಿಕೊಂಡು ಅಪಾಯಕಾರಿ ವಿಲ್ಹಿಂಗ್ ಮಾಡಿ ಬೈಕ್ ನಲ್ಲಿ ಸ್ಟಂಟ್ ಮಾಡಿದ್ದ ಯುವಕನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಹಿಂದೆ ಮುಂದೆ ಒಬ್ಬಬ್ಬ ಹುಡುಗಿಯನ್ನು ಕೂರಿಸಿಕೊಂಡು ಈ ಯುವಕ ಸ್ಟಂಟ್ ಮಾಡ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಕ್ರಮಕ್ಕೆ ಮುಂದಾದ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆರೋಪಿಯ ವಿರುದ್ಧ ಅಂಟಾಪ್ ಹಿಲ್ ಹಾಗೂ ವಾಡಲಾ ಐಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ಬೈಕ್ ಸ್ಟಂಟ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ೨೪ ವರ್ಷದ ಯುವಕನನ್ನು ಬಂಧಿಸಿದ್ದಾರೆ.ಪೊಲೀಸರ ಪ್ರಕಾರ ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೮ (ಉದ್ದೇಶಿತ ನರಹತ್ಯೆಯ ಪ್ರಯತ್ನ)ಹಾಗೂ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಗೆ ಈಗಾಗಲೇ ಅಪರಾಧದ ಹಿನ್ನೆಲೆ ಇದ್ದು ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.