ಹುಡಗಿ. ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

ಹುಮನಾಬಾದ್:ಅ.1: ತಾಲ್ಲೂಕಿನ ಹುಡಗಿ ಗ್ರಾಮ ಪಂಚಾಯಿತಿಯ ಎರಡನೆ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಂಬಮ್ಮ ಹಣಮಂತ್ ಹಾಗೂ ಸುಜಾತ ಪ್ರದೀಪ್ ಸ್ಪರ್ಧಿಸಿದ್ದರು. ಅಂಬಮ್ಮ ಹಣಮಂತ 18 ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಸುಜಾತ ಪ್ರದೀಪ್ 5 ಮತಗಳ ಪಡೆದು ಸೋಲು ಅನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಎಮ್.ಡಿ. ಸಿದ್ಧಿಕ್‍ಶಾ ಹಾಗೂ ವಿಮಲಬಾಯಿ ಸ್ಪರ್ಧಿಸಿದ್ದರು. ಎಮ್.ಡಿ. ಸಿದ್ದಿಕ್‍ಶಾ 16 ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ವಿಮಲಾಬಾಯಿ 6 ಮತಗಳನ್ನು ಪಡೆದು ಸೋಲು ಅನುಭವಿ ಸಿದ್ದಾರೆ ಎಂದು ಚುನಾವಣೆ ಅಧಿಕಾರಿ ದೀಪಿಕಾ ನಾಯಕ
ತಿಳಿಸಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪಿ.ಡಿ.ಓ ಶಿವರಾಜ, ಮಲ್ಲಪ್ಪಾ ಸನ್ನದ ಸನ್ಮಾನಿಸಿದರು. ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ ಮಾಶೆಟ್ಟಿ, ಮಾಜಿ ಅಧ್ಯಕ್ಷ ಆನಂದ ಕುಮಾರ ಸೈನೀರ, ಹಿರಿಯ ಸದಸ್ಯರಾದ ಪ್ರಭು ಮಾಳನಾಯಕ, ಸೈಯದ ಮುಜೀಬ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.