ಹುಡಗಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ

ಹುಮನಾಬಾದ,ಜು 21: ಹುಡಗಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ
ಬಿಜೆಪಿ ಎಸ್. ಟಿ.ಮೋರ್ಚಾದ ತಾಲ್ಲೂಕು ಅಧ್ಯಕ್ಷ ದಯಾನಂದ ಮೇತ್ರಿ ಆಗ್ರಹಿಸಿದ್ದಾರೆ. ಹುಡಗಿ ಗ್ರಾಮದ ಜನರು ಶಾಲಾ ಮಕ್ಕಳು,ಊರಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿರುತ್ತಾರೆ ಆದರೆ ಹುಡಗಿ ಗ್ರಾಮಕ್ಕೆ ಬಸ್ ನಿಲ್ದಾಣವಿಲ್ಲದೇ ಪರದಾಡುತ್ತಿರುವ ಪ್ರಸಂಗ ಉದ್ಭವಿಸಿದೆ. ಈ ಹುಡಗಿ ಗ್ರಾಮದ ಸರ್ವಿಸ್ ರೋಡ ಇಲ್ಲ, ಹಾಗೂ ಬಸ್ ನಿಲ್ದಾಣವೋ ಏಕೆ ಇಲ್ಲ ಎಂದು ಶಾಲಾ ಮಕ್ಕಳು ಮಾತನಾಡಿಕೊಳ್ಳುತ್ತಿದ್ದಾರೆ. ಹುಡಗಿ ಗ್ರಾಮದಲ್ಲಿ ಶಾಲೆ ಮುಗಿದ ತಕ್ಷಣ ಶಾಲಾ ಮಕ್ಕಳು ಎಲ್ಲಿ ನಿಲ್ಲಬೇಕು, ಹುಡಗಿ ಗ್ರಾಮಕ್ಕೆ ಒಂದು ಟೈಮಿಂಗ್ ಸರಿಯಾಗಿ ಬಸ್‍ನೂ ಬರುವುದಿಲ್ಲ, ನಿಲ್ಲುವುದಕ್ಕೆ ಒಂದು ಆಸರೆಗಾಗಿ ಬಸ್ ನಿಲ್ದಾಣವೋ ಇಲ್ಲ, ಈ ರೋಡ ಮೇಲೆ ವಿದ್ಯಾರ್ಥಿಗಳು ಹಾಗೂ ಊರಿನ ಜನರು ಮತ್ತೊಂದು ಊರಿಗೆ ಹೋಗಬೇಕಾಗಿರುತ್ತದೆ. ಮಳೆಯಲ್ಲಿ ಈ ರಸ್ತೆಯ ಮೇಲೆ ವಿದ್ಯಾರ್ಥಿಗಳು, ಜನರು ನಿಂತಿದರೆ ಹೇಗೆ, ಬಸ್ ನಿಲ್ದಾಣ ಇದ್ದರೆ ನಿಲ್ಲಬಹುದು, ಕುಳಿತುಕೊಳ್ಳಬಹುದು, ರಸ್ತೆಯ ಮೇಲೆ ಆಸರೆವಿಲ್ಲ ನಿಲ್ಲಲು ಹೇಗೆ ಸಾಧ್ಯ ಎಂದು ಬಿಜೆಪಿ ಎಸ್. ಟಿ.ಮೋರ್ಚಾದ ತಾಲ್ಲೂಕು ಅಧ್ಯಕ್ಷ ದಯಾನಂದ ಮೇತ್ರಿರವರು ಪ್ರಶ್ನಿಸಿದ್ದಾರೆ.ಈ ರಸ್ತೆಯ ಮೇಲೆ ಬಹಳಷ್ಟು ಅಪಘಾತಗಳಾಗಿವೆ, ಆದ್ದರಿಂದ ಸಂಬಧಪಟ್ಟ ಅಧಿಕಾರಿಗಳು ತಕ್ಷಣ ಈ ಕಡೆ ಗಮನ ಹರಿಸಿ, ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಊರಿನ ಗ್ರಾಮಸ್ಥರಿಗೆ ಶೀಘ್ರವೇ ಕೆಲಸ ಮಾಡಿಕೊಡಬೇಕೆಂದು ದಯಾನಂದ ಮೇತ್ರಿ ಆಗ್ರಹಿಸಿದ್ದಾರೆ.


ಬಸ್ಸಿಗಾಗಿ ಕಾಯಲು ಬಸ್ ನಿಲ್ದಾಣವಿಲ್ಲದೇ ಮಳೆಯಲ್ಲಿಯೇ ರಸ್ತೆಯ ಮೇಲೆ ಶಾಲೆಯ ವಿದ್ಯಾರ್ಥಿಗಳು, ಊರಿನ ಜನರು ನಿಲ್ಲಲು ಹೇಗೆ ಸಾಧ್ಯವಾಗುತ್ತದೆ. ತಕ್ಷಣ ಹುಡಗಿ ಗ್ರಾಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಬಸ್ ನಿಲ್ದಾಣವಾದರೂ ನಿರ್ಮಿಸಿ ಇಲ್ಲವಾದರೆ ಶೆಡ್ ಆದರೂ ನಿರ್ಮಿಸಿ, ಒಟ್ಟಾರೆ ವಿದ್ಯಾರ್ಥಿಗಳಿಗೆ ಊರಿನ ಸಾರ್ವಜನಿಕರಿಗೆ, ಪುರುಷರಿಗೆ ವೃದ್ಧರಿಗೆ ಮಹಿಳೆಯರಿಗೆ ಸೌಲಭ್ಯ ಒದಗಿಸಿಕೊಡಬೇಕು ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು.
-ಬಿಜೆಪಿ ಎಸ್.ಟಿ.ಮೋರ್ಚಾದ ತಾಲ್ಲೂಕು ಅಧ್ಯಕ್ಷ ದಯಾನಂದ ಮೇತ್ರಿ