ಹುಟ್ಟೂರಿನ ಜನರಿಗೆ ಮಿಡಿದ ಚಂದ್ರು…

ಅದೆಷ್ಟೋ ಜನ‌ ತಾವು ಹುಟ್ಟಿ ಬೆಳೆದ ಊರನ್ನು ಬೆಳೆದ ಮೇಲೆ ಮರೆಯುವುದುಂಟು ಆದರೆ ಕೆಲವರು ಮಾತ್ರ ತಮ್ಮೂರಿನ ಜನರ ಕಷ್ಟಕ್ಕೆ ಸ್ಪಂದಿಸುವ ಗುಣವಿರುತ್ತದೆ. ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ಆರ್ ಚಂದ್ರು ಕೊರೋನಾ ಸಂಕಷ್ಟ ಸಮಯದಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ.

ಚಿತ್ರರಂಗವಲ್ಲದೆ ತಾವು ಹುಟ್ಟಿಬೆಳೆದ ಚಿಕ್ಕಬಳ್ಳಾಪುರ ಕೇಶಾವರ ಗ್ರಾಮದ ಸುಮಾರು ಸಾವಿರ ಮನೆಗಳಿಗೆ 25 ಕೆಜಿಯ ಅಕ್ಕಿ ಮೂಟ್ಟೆ ನೀಡಿದ್ದಾರೆ.ನಾನೊಬ್ಬ ರೈತನ ಮಗ. ಕೊರೋನಾ

ಸಂಕಷ್ಟದ ಕಾಲದಲ್ಲಿ ನನ್ನೂರಿನವರಿಗೆ ನೆರವಾಗುವುದು ನನ್ನ ಧರ್ಮ. ಇಂದು ಮತ್ತು ಎಂದೆಂದಿಗೂ ನಾನು ಮಣ್ಣಿನ ಋಣ ತೀರಿಸಲು ಮುಂದಾಗಿರುತ್ತೇನೆ ಎನ್ನುತ್ತಾರೆ ಆರ್ ಚಂದ್ರು ಇತ್ತೀಚೆಗೆ ಚಿತ್ರರಂಗದ ಮಂದಿ್ಗೆಗೆ ನೆರವಾಗಿ ಮಾನವೀಯತೆ ಪ್ರದರ್ಶಿಸಿದ್ದರು.