ಹುಟ್ಟೂರಲ್ಲಿ ರಾಜಕೀಯ ಶುರು ಮಾಡಿದ ಸಿದ್ದರಾಮಯ್ಯ

ಮೈಸೂರು: ನ.01:- ರಾಜ್ಯ ರಾಜಕೀಯ ದಲ್ಲಿ ಸಕ್ರಿಯರಾದ ಬಳಿಕ ಮೈಸೂರು ರಾಜಕಾರಣ ಪಕ್ಕಕ್ಕಿಟ್ಟಿದ್ದ ಸಿದ್ದರಾಮಯ್ಯ ಈಗ ಮತ್ತೆ ಜಿಲ್ಲೆಯಲ್ಲಿ ರಾಜಕೀಯ ಶುರು ಮಾಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಿಂದಲೇ ರಾಜಕೀಯ ಶುರು ಮಾಡಿರುವ ಸಿದ್ದು ತೆನೆ ಮುಖಂಡರ ಸೆಳೆಯಲು ಮುಂದಾಗಿದ್ದಾರೆ.
ಜೆಡಿಎಸ್ ನಲ್ಲೇ ಉಳಿಸಿಕೊಂಡು ಚಾಮುಂಡೇಶ್ವರಿ ಗೂ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ ದೇವೇಗೌಡ ಹಾಗೂ ಕುಮಾರಸ್ವಾಮಿ ನಡೆಗೆ ಜೆಡಿಎಸ್ ನಲ್ಲಿ ಐವರು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಮಾತ್ರವಲ್ಲದೆ ಅಂದೆ ಸಿದ್ದರಾಮಯ್ಯ ಕರೆದರೆ ಕಾಂಗ್ರೆಸ್ ಗೂ ಹೋಗುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಕಾಣಿಸಿಕೊಳ್ಳುವ ಮೂಲಕ ಪರೋಕ್ಷವಾಗಿ ಜಿಟಿಡಿ ಸವಾಲ್ ಹಾಕಲು ಮುಂದಾಗಿದ್ದಾರೆ. ಆ ಮೂಲಕ ಜಿಲ್ಲಾ ರಾಜಕಾರಣ ಚುರುಕು ಪಡೆದಂತಾಗಿದೆ.
ಪತ್ರಕರ್ತರಿಗೆ ಲಕ್ಷ ಲಕ್ಷ ಹಣ: ತನಿಖೆಗೆ ಆಗ್ರಹ
ತಮ್ಮ ಭ್ರಷ್ಟಾಚಾರ ವನ್ನು ಮುಚ್ಚಿಹಾಕಲು ಪತ್ರಕರ್ತರಿಗೆ ಲಕ್ಷ ಲಕ್ಷ ಹಣ ಉಡುಗೊರೆ ನೀಡಿದ್ದಾರೆ. ಶೇ. 40 ಕಮಿಷನ್ ಪತ್ರಕರ್ತರಿಗೆ ತಲುಪಿದೆ. ಈ ಹಣದ ಮೂಲದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಿಎಂ ಗಮನಕ್ಕೆ ಬರದೆ ಈ ರೀತಿ ಯಾರೋ ಒಬ್ಬರು ಹಣ ಕೊಡೋಕೆ ಆಗುತ್ತಾ? ಇದನ್ನು ಪತ್ರಕರ್ತರು ವಾಪಸ್ ಕೊಟ್ಟಿದ್ದಾರೆ. ಈ ರೀತಿ ಹಣ ಕೊಡುವ ಹಿಂದಿನ ಉದ್ದೇಶ ಏನು? ಈ ಹಣ ಯಾವುದು? ಎಲ್ಲಿಂದ ಬಂತು ? ಇದು ಶೇ.40 ಕಮಿಷನ್ ಲಂಚ ಹೊಡೆದ ದುಡ್ಡು ಎಂದು ಆರೋಪಿಸಿದ್ದಾರೆ.
ಬಿಜೆಪಿಯವರು ಎಂತಹ ಲಜ್ಜೆಗೆಟ್ಟವರು ಇರಬಹುದು? ಒಂದು ಲಕ್ಷ ಹಣ ಕೊಟ್ಟು ಅದನ್ನು ಸಮರ್ಥನೆ ಮಾಡುತ್ತಾರಲ್ಲ ಎಂತಹ ಭಂಡರು. ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆ. ಆರ್‍ಎಸ್‍ಎಸ್ ಒಂದು ಸುಳ್ಳಿನ ಕಾರ್ಖಾನೆ. ಸುಳ್ಳು ಸೃಷ್ಟಿಯೇ ಅವರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನ ಬಸವರಾಜ ಅಮರಗೋಳ ಎಂಬ ಗುತ್ತಿಗೆದಾರ ಕಮಿಷನ್ ಕೊಡಲಾಗದೇ ದಯಾಮರಣಕ್ಕೆ ಅವಕಾಶ ಕೋರಿರುವುದು ರಾಜ್ಯದ ಬಿಜೆಪಿ ಶೇ. 40 ಕಮಿಷನ್ ಸರ್ಕಾರ ಎಂಬುದಕ್ಕೆ ಪ್ರಬಲ ಸಾಕ್ಷಿಯಾಗಿದೆ. ಕೊರೊನಾ ಅಲೆಯಲ್ಲಿ ಉಪಕರಣ ಸರಬರಾಜು ಮಾಡಿದ್ದ ಹಣವನ್ನು ಪಡೆಯಲು ಸಾಧ್ಯವಾಗದಿದ್ದರಿಂದ ರಾಷ್ಟ್ರಪತಿಗೆ ಪತ್ರ ಬರೆದು ತನ್ನ ಬಳಿ ಶೇ. 35-40 ಕಮಿಷನ್ ಕೇಳುತ್ತಿದ್ದಾರೆ. ಇಷ್ಟು ಹಣ ಕೊಡಲಾಗುವುದಿಲ್ಲ. ನನ್ನ ಬಾಕಿ ಬಿಲ್ ಹಣವನ್ನು ನೀವೇ ಕೊಡಿಸಿ ಇಲ್ಲದಿದ್ದರೆ ನನಗೆ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಕೇಳಿದ್ದಾರೆ ಎಂದರು.
ಹೃದಯಾಘಾತದಿಂದ ನಿಧನರಾದ ಪೆÇಲೀಸ್ ಇನ್ಸ್ಪೆಕ್ಟರ್ ನಂದೀಶ್ ಅವರ ಅಂತಿಮ ದರ್ಶನ ಪಡೆಯಲು ಹೋಗಿದ್ದ ಎಂಟಿಬಿ ನಾಗರಾಜ್ ಪೆÇಲೀಸ್ ಸಿಬ್ಬಂದಿ ಜತೆ ಮಾತನಾಡುವಾಗ 70-80 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡರೆ ಹೃದಯಾಘಾತ ಆಗದೆ ಇರುತ್ತದಾ? ಎಂದು ಹೇಳಿದ್ದಾರೆ. ಇದಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರ ಹೊಣೆ ಅಲ್ವಾ? ಈ ಲಂಚದ ಹಣವನ್ನು ಗೃಹ ಸಚಿವರು ಅಥವಾ ಸಿಎಂ ಪಡೆದಿರಬೇಕು? ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಎರಡು ವರ್ಷ ಮೂರು ತಿಂಗಳು ಸುಮ್ಮನಿದ್ದು, ವಾಲ್ಮೀಕಿ ಶ್ರೀಗಳು 257 ದಿನ ಧರಣಿ ಮಾಡಿದ್ದರಿಂದ ಮೀಸಲು ಹೆಚ್ಚಿಸಲಾಗಿದೆ. ಹೆಚ್ಚಳ ಮೀಸಲು ಅನುಷ್ಠಾನಕ್ಕೆ ಬರಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಬೇಕು. ಹೇಗಿದ್ದರೂ ಕೇಂದ್ರದಲ್ಲಿ ಬಿಜೆಪಿಯದೇ ಸರ್ಕಾರ ಇದೆ. ಇದನ್ನು 9ನೇ ಶೆಡ್ಯೂಲ್‍ಗೆ ಸೇರಿಸಬೇಕಾದರೆ ಸಂಸತ್ತಿನಲ್ಲಿ ವಿಧೆಯಕ ಮಂಡನೆ ಆಗಿ ಪಾಸ್ ಆಗಬೇಕು. ಈ ಕೆಲಸವನ್ನು ಮಾಡಿಸಲಿ. ಬರೀ ಕ್ರಾಂತಿಕಾರಕ ನಿರ್ಧಾಎ ಎಂದು ಬುರುಡೆ ಬಿಟ್ಟರೆ ಆಗಲ್ಲ ಎಂದು ತಿಳಿಸಿದರು.