ಹುಟ್ಟೂರಲ್ಲಿ ಮತದಾನ ಮಾಡಿದ ಮಾಜಿ ಸಚಿವ

ಸೇಡಂ,ಡಿ,27: ತಾಲ್ಲೂಕಿನಲ್ಲಿ ನಡೆಯುತ್ತಿರುವ ಎರಡನೇ ಹಂತದ 27 ಗ್ರಾಪಂಗಳಲ್ಲಿ ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ಮಾಜಿ ಸಚಿವ ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರಾದ ಡಾ, ಶರಣಪ್ರಕಾಶ್ ಪಾಟೀಲ್ ಹುಟ್ಟೂರಲ್ಲಿ ಮತದಾನ ಮಾಡಿದರು. ನಂತರ ಮತದಾನ ಮಾಡಿದ ಮಾಧ್ಯಮದವರ ಜೊತೆ ಮಾತನಾಡಿದ ಅವರು ಹುಟ್ಟೂರಲ್ಲಿ ಮತದಾನ ಮಾಡುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಮಹತ್ವ ತಿಳಿಸಿದಂತೆ ಆಗುತ್ತದೆ ತಾಲೂಕಿನಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವರು ಎಂದರು.