ಹುಟ್ಟು ಹಬ್ಬಗಳು ಸಮಾಜ ಸೇವೆ ಮಾಡುವ ಆಯುಷ್ಯ ವೃದ್ದಿಸಲಿ


ಸಂಜೆವಾಣಿ ವಾರ್ತೆ
ಸಂಡೂರು:ಅ: 20:  ಹುಟ್ಟು ಹಬ್ಬಗಳು ಸಮಾಜ ಸೇವೆ ಮಾಡುವಂತಹ ಕಾರ್ಯಗಳ ಮೂಲಕ ಆಚರಿಸುತ್ತಿರುವುದು ಬಹು ಉತ್ತಮ ಅಂತಹ ಕಾರ್ಯವನ್ನು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಮುಖ್ಯಸ್ಥರಾಧ ಕುಮಾರ್ ನಾನಾವಟೆಯವರು ದೇವಸ್ಥಾನಗಳ ಸ್ವಚ್ಚತೆಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಿದ್ದು ಬಹು ಉತ್ತಮವಾದುದು ಎಂದು ಶಿವಾನುಭವಗೋಷ್ಠಿ ಅಧ್ಯಕ್ಷ ಅರಳಿಕುಮಾರಸ್ವಾಮಿ ತಿಳಿಸಿದರು.
ಅವರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಸಮಾಜ ಸೇವೆ ಮತ್ತು ಹುಟ್ಟು ಹಬ್ಬದ ಅಂಗವಾಗಿ ಕುಮಾರ್ ನಾನಾವಟೆಯವರನ್ನು ಅಭಿನಂದಿಸಿ ಮಾತನಾಡಿ ಇಂತಹ ಸೇವಾಕಾರ್ಯಗಳು ಹೆಚ್ಚು ಹೆಚ್ಚು ನಡೆಯಲಿ ಎಂದರು, ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.