ಹುಟ್ಟು ಹಬ್ಬಕ್ಕೆ ಮಾಸ್ಕ ವಿತರಣೆ

ಔರಾದ :ಎ.3: ಪಟ್ಟಣದ ಯುವ ಮುಖಂಡ ಕಾಂಗ್ರೆಸ್ಅ ಅಸಂಘಟಿತ ಕಾರ್ಮಿಕ ವಲಯದ ಜಿಲ್ಲಾ ಉಪಾಧ್ಯಕ್ಷ ಅನೀಲ ನಿರ್ಮಳೆ ಅವರ ಹುಟ್ಟುಹಬ್ಬವನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಮಾಸ್ಕ್ ಗಳನ್ನು ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಪಟ್ಟಣದ ಯುವಕರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು, ಹಂಪಲು ನೀರಿನ್ ಬಾಟಲಿ, ಮತ್ತು ಮಾಸ್ಕ ಆಸ್ಪತ್ರೆಯ ಒಪಿಡಿ, ಕೋವಿಡ್ ವಿಭಾಗದ ಕೋವಿಡ್ ಸೊಂಕಿತರಿಗೆ, ಡೆಲಿವಿರಿ ಗರ್ಭಿಣಿ ತಾಯಂದಿರಿಗೆ, ಹಣ್ಣು ಹಂಪಲು ಬಿಸ್ಕತ್ತು ನೀರಿನ ಬಾಟಲಿ ಮತ್ತು ಮಾಸ್ಕ ನೀಡಿ ತನ್ನ ಸ್ನೇಹಿತನ ಹುಟ್ಟು ಹಬ್ಬಕ್ಕೆ ಶುಭಕೋರಿದರು.

ಈ ಸಂಧರ್ಭದಲ್ಲಿ ಪಟ್ನೆ ಪ್ರಿಂಟರ್ಸ ಮಾಲಿಕ ರಾಮ ಪಟ್ನೆ, ಕರವೇ ಅಧ್ಯಕ್ಷ ಅನೀಲ ದೇವಕತ್ತೆ, ಮಹಾದೇವ ಭಾಲ್ಕೆ, ಅಭಿಜಿತ್ ಸ್ವಾಮಿ, ಬಾಲಾಜಿ ದಾಮಾ, ರಜನಿಕಾಂತ ದಾಮಾ, ಗಣೇಶ ಕಾಡೋದೆ, ಶ್ರೀಕಾಂತ ಮೇತ್ರೆ, ಶೇಖರ ಮೇತ್ರೆ, ಬಿರಪ್ಪಾ ವಾಸ್ರೆ, ಆಕಾಶ ಮೇತ್ರೆ, ಅಮರ ಮೇತ್ರೆ, ಭಜರಂಗ ಜಾಧವ, ಗೋರಖನಾಥ ಜಾಧವ, ರಮೇಶ ಜಾಧವ, ಉಪಸ್ಥಿತರಿದ್ದರು.