ಹುಟ್ಟು ಹಬ್ಬಕ್ಕೆ ಬಂದ ಗಣ್ಯರಿಗೆ ಧನ್ಯವಾದ ಅರ್ಪಿಸಿದ ರಿಷಬ್ ಪತ್ನಿ

ಬೆಂಗಳೂರು, ಮಾ ೧೦- ಚಂದನವನದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದಲ್ಲಿ ಭಾಗಿಯಾದ ಸೆಲಿಬಿಟ್ರಿ ಹಾಗೂ ಗಣ್ಯರಿಗೆ ರಿಷಬ್ ಶೆಟ್ಟಿ ಪತ್ನಿ ಧನ್ಯವಾದ ತಿಳಿಸಿದ್ದಾರೆ.

ಇತ್ತೇಚೆಗಷ್ಟೇ ಹೀರೋ, ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮಗಳು ರಾಧ್ಯಾ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿತ್ತು.

ಅದರ ಫೋಟೋಗಳನ್ನು ಪ್ರಗತಿ ಶೆಟ್ಟಿ ಅವರು ಶೇರ್ ಮಾಡಿದ್ದಾರೆ. ಬರ್ತ್‌ಡೇ ಸಂಭ್ರಮಾಚರಣೆಯಲ್ಲಿ ರವಿಚಂದ್ರನ್ ಹಾಗೂ ಅವರು ಪುತ್ರರು ಭಾಗಿಯಾಗಿದ್ದಾರೆ.ನಟ ಉಪೇಂದ್ರ , ರಮೇಶ್ ಅರವಿಂದ್ ಸಹ ಬರ್ತ್‌ಡೇಯಲ್ಲಿ ಭಾಗಿಯಾಗಿದ್ದರು. ರಾಧ್ಯಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಟಿ ಅಮೂಲ್ಯ, ಅಮೂಲ್ಯ ಅವರ ಪತಿ ಜಗದೀಶ್ , ನಟ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಸಹ ರಿಷಬ್ ಶೆಟ್ಟಿ ಅವರ ಮಗಳ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಅರ್ಜುನ್ ಸರ್ಜಾ ಪುಟಾಣಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದರು.

ಸಿನಿಮಾ ನಟ, ನಟಿಯರಲ್ಲದೇ ರಾಜಕೀಯ ಗಣ್ಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಡಿ.ಕೆ ಶಿವಕುಮಾರ್, ಸಾಧು ಕೋಕಿಲ, ಡಿಕೆಶಿ ಆಪ್ತ ಮಿಥುನ್ ರೈ ಪುಟಾಣಿ ರಾಧ್ಯಾಗೆ ವಿಶ್ ಮಾಡಿದ್ದಾರೆ.
ಅಲ್ಲದೇ ಬಿಜೆಪಿಯ ಆರ್. ಅಶೋಕ್, ನಟ ರವಿಶಂಕರ್ ಗೌಡ, ಮೈಸೂರು ಸಂಸದ ಪ್ರತಾಪ್ ಸಿಂಹ, ಸಿಟಿ ರವಿ, ಪ್ರಮೋದ್ ಶೆಟ್ಟಿ ಸೇರಿ ಇನ್ನು ಹಲವರು ಹುಟ್ಟುಹಬ್ಬದ ಸಂಭ್ರದಲ್ಲಿ ಪಾಲ್ಗೊಂಡಿದ್ದರು.

ಶೆಟ್ಟಿ ಅವರು ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಮ್ಮ ಖುಷಿಗೆ ಕಾರಣವಾಗಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.