
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 27 :- ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ ಶ್ರೀನಿವಾಸ ಅವರ ಹುಟ್ಟುಹಬ್ಬದ ದಿನವಾದ ಇಂದು ಶಾಸಕರ ಆಶಯದಂತೆ ಕ್ಷೇತ್ರದ ಅಭಿಮಾನಿ ಬಳಗ ಯಾವುದೇ ಬ್ಯಾನರ್ ಹಾಗೂ ಫ್ಲಾಕ್ಸಿ ಹಾಕದಂತೆ ದುಂದುವೆಚ್ಚ ಮಾಡದೆ ಆ ಹಣವನ್ನು ವಿದ್ಯಾಭ್ಯಾಸ ಮಾಡುವ ಬಡಮಕ್ಕಳಿಗೆ ಉಪಯೋಗವಾಗುವಂತೆ ಒಂದನೇ ತರಗತಿಯಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಕಂಪಾಸ್, ಸ್ಲೇಟ್ ವಿತರಿಸಿ ಸಿಹಿ ಹಂಚುವ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಇಂದು ಮಧ್ಯಾಹ್ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ (ಮೇನ್ ಬಾಯ್ಸ್ ಸ್ಕೂಲ್ )ನಲ್ಲಿ ಅರ್ಥ ಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಬಿ.ವೆಂಕಣ್ಣ ಕಾಟೇರ್ ಲಂಕೇಶ್, ಕಂಪ್ಲಿ ಅಮೀರ್ ಹಮ್ಜಾ, ಸರ್ಮಸ್ ಹುಸೇನ್ (ಬಾಬು) ರಾಮದುರ್ಗ,ಬದ್ದಕಟ್ಟೆ ರಿಯಾಜ್ ಅಹಮದ್, ಮಾಬು ಸುಬಾನಿ, ಟಿ ಓ ನರಸಿಂಹ, ಗೋಮಾಲರ್ ಮಾರುತಿ, ಟಿ. ಜಾವಿದ್, ತಲಾಸ್ ಶ್ರೀನಿವಾಸ್ ಇತರರು ಶಾಸಕರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ ಅಭಿಮಾನಿಬಳಗದವರಾಗಿದ್ದಾರೆ.