ಹುಟ್ಟುಹಬ್ಬದ ವಿಶೇಷ: ೫೦ ನೇ ವರ್ಷಕ್ಕೆ ಕಾಲಿಟ್ಟ ಕಾಶ್ಮೀರಾ ಶಾಹ, ಅನೇಕರಿಗೆ ತಿಳಿದಿಲ್ಲ,ಅವರು ಎರಡು ಮದುವೆ ಆಗಿರುವ ಸಂಗತಿ!

ನಟಿ ಕಾಶ್ಮೀರಾ(ಕಾಶ್ಮೇರಾ) ಶಾಹ ಅವರಿಗೆ ೫೦ ವರ್ಷ ತುಂಬಿದೆ ಎಂದು ಹೇಳಿದರೆ ನಂಬುವುದಕ್ಕೆ ಕಷ್ಟ. ಆದರೆ ಇಂದಿಗೂ ಅವರ ಹಾಟ್‌ನೆಸ್ ಮತ್ತು ಫಿಟ್‌ನೆಸ್‌ನಿಂದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳ ಮೂಲಕ ಯುವ ಹೃದಯಗಳಿಗೆ ’ಬೆಂಕಿ’ ಹಚ್ಚುತ್ತಿದ್ದಾರೆ. ಅವರು ಡಿಸೆಂಬರ್ ೨, ೧೯೭೧ ರಂದು ಜನಿಸಿದವರು.ಕಾಶ್ಮೀರಾ ಶಾಹ ಅವರ ಫಿಲ್ಮ್ ರಂಗದ ವೃತ್ತಿಜೀವನದ ಕುರಿತು ಹೇಳುವುದಾದರೆ ಅವರು ೧೯೯೭ ರಲ್ಲಿ ಶಾರುಖ್ ಖಾನ್ ಅವರ ಚಲನಚಿತ್ರ ’ಯೆಸ್ ಬಾಸ್’ ಮೂಲಕ ತಮ್ಮ ಬಾಲಿವುಡ್ ಇಂಡಸ್ಟ್ರಿಯನ್ನು ಪ್ರವೇಶಿಸಿದರು.ಅವರು ಮರಾಠಿ,ಹಿಂದಿ ಫಿಲ್ಮ್ ಗಳಲ್ಲಿ ಅಭಿನಯಿಸಿದ್ದಾರೆ.
ಜನ್ಮದಿನದ ಈ ಸಂದರ್ಭದಲ್ಲಿ, ಕಾಶ್ಮೀರಾ ಶಾಹ ಅವರ ವೈಯಕ್ತಿಕ ಜೀವನದ ಬಗ್ಗೆ ಅಪರೂಪದ ಕೆಲವು ಸಂಗತಿಗಳು ಹೀಗಿವೆ-
ಕಾಶ್ಮೀರಾ ಶಾಹ ಪ್ಯಾರ್ ತೋ ಹೋನಾ ಹಿ ಥಾ, ಹಿಂದೂಸ್ತಾನ್ ಕಿ ಕಸಮ್, ದುಲ್ಹನ್ ಹಮ್ ಲೇ ಜಾಯೇಂಗೆ, ಹೇರಾ ಫೇರಿ, ಕಹಿ ಪ್ಯಾರ್ ನ ಹೋ ಜಾಯೆ, ಆಶಿಕ್, ಆಂಖೇಂ, ಮರ್ಡರ್ ಮತ್ತು ವೇಕ್ ಅಪ್ ಸಿಡ್….. ಮುಂತಾದ ಫಿಲ್ಮ್ ಗಳಲ್ಲಿ ಕೆಲಸ ಮಾಡಿದ್ದಾರೆ. ಟಿವಿ ಶೋ ಬಗ್ಗೆ ಹೇಳಿದರೆ ಅವರು ಬಿಗ್ ಬಾಸ್ ಸೀಸನ್ ೧ ರಲ್ಲಿ ಪಾಲ್ಗೊಂಡಿದ್ದರು.
ಇದರ ನಂತರ, ಅವರು ೨೦೦೭ ರಲ್ಲಿ ಕೃಷ್ಣ ಅಭಿಷೇಕ್ ಅವರೊಂದಿಗೆ ’ನಾಚ್ ಬಲಿಯೆ ೩’ ರಲ್ಲಿ ಕಾಣಿಸಿಕೊಂಡರು. ಕಾಶ್ಮೀರಾ ಶಾಹ ಅವರು ಕೃಷ್ಣ ಅಭಿಷೇಕ್ ಅವರೊಂದಿಗೆ ೯ ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿ ಇದ್ದರು .ನಂತರ ೨೦೧೩ ರಲ್ಲಿ ವಿವಾಹವಾದರು. ಮದುವೆಯ ನಂತರ ಕಾಶ್ಮೀರಾ ತಾಯಿಯಾಗುವ ಕನಸು ಕಂಡಿದ್ದರು.
ಆದರೆ, ಮದುವೆಯ ನಂತರ ತಾಯಿಯಾಗುವುದು ಅವರಿಗೆ ತುಂಬಾ ಕಷ್ಟವಾಯಿತು. ಕಾಶ್ಮೀರಾ ೧೪ ಬಾರಿ ಗರ್ಭಿಣಿಯಾದರೂ ಪ್ರತಿ ಬಾರಿ ವಿಫಲರಾದರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದಾದ ನಂತರ ಸಲ್ಮಾನ್ ಖಾನ್ ರ ಸಲಹೆಯಂತೆ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಗಂಡು ಮಕ್ಕಳ ತಾಯಿಯಾದರು.
ಕಾಶ್ಮೀರಾ ಶಾಹ ಎರಡು ಬಾರಿ ಮದುವೆಯಾಗಿದ್ದಾರೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಆಕೆಯ ಮೊದಲ ಮದುವೆಯು ಅಮೇರಿಕನ್ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಮತ್ತು ನಿರ್ಮಾಪಕ ಬ್ರಾಡ್ ಲಿಸ್ಟರ್‌ಮ್ಯಾನ್ ಅವರೊಂದಿಗೆ ನಡೆದಿತ್ತು. ಆದರೆ ೬ ವರ್ಷಗಳ ನಂತರ ಇವರ ದಾಂಪತ್ಯ ಮುರಿದುಬಿತ್ತು. ಮೊದಲ ಮದುವೆ ಮುರಿದು ಬಿದ್ದ ನಂತರ, ಕಾಶ್ಮೀರಾರ ಜೀವನದಲ್ಲಿ ಕೃಷ್ಣಾ ಅಭಿಷೇಕ್ ಪ್ರವೇಶವಾದರು. ವಿಶೇಷ ಅಂದರೆ
ಎರಡು ದಿನಗಳ ಹಿಂದಷ್ಟೇ ಇವರ ಮದುವೆಯ ಸುದ್ದಿ ಅವರವರ ಮನೆಯವರಿಗೂ ತಿಳಿದದ್ದು. ಕೃಷ್ಣರೊಂದಿಗೆ ಕಾಶ್ಮೀರಾರ ಮೊದಲ ಭೇಟಿ ಜೈಪುರದಲ್ಲಿ ಆಯಿತು. ಜೈಪುರದಲ್ಲಿ ’ಔರ್ ಪಪ್ಪು ಪಾಸ್ ಹೋ ಗಯಾ’ ಫಿಲ್ಮ್ ನ ಶೂಟಿಂಗ್‌ನಲ್ಲಿ ಅವರು ಪರಸ್ಪರ ಭೇಟಿಯಾದರು, ಆದರೆ ಆ ಸಮಯದಲ್ಲಿ ಕಾಶ್ಮೀರಾ ಮೊದಲ ಗಂಡ ಬ್ರಾಡ್ ರಿಂದ ವಿಚ್ಛೇದನಪಡೆದಿದ್ದರು.
ಮೊದಲಿನಿಂದಲೂ ಕೃಷ್ಣರಿಗೆ ಕಾಶ್ಮೀರಾರ ಬಗ್ಗೆ ಸಾಫ್ಟ್ ಕಾರ್ನರ್ ಇತ್ತು . ಕಾಶ್ಮೀರಾ ಮದುವೆಯಾದ ಸಂಗತಿಯಿಂದ ಕೃಷ್ಣರು ತುಂಬಾ ನಿರಾಶೆಗೊಂಡಿದ್ದರಂತೆ. ಆದರೆ ಕಾಶ್ಮೀರಾ ತನ್ನ ಪತಿಯಿಂದ ಬೇರ್ಪಟ್ಟಿದ್ದಾರೆ ಎಂದು ತಿಳಿದ ತಕ್ಷಣ, ಕೃಷ್ಣರಿಗೆ ಕಾಶ್ಮೀರಾರ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಕಾಶ್ಮೀರಾ ಕೃಷ್ಣರಿಗಿಂತ ೧೨ ವರ್ಷ ದೊಡ್ಡವರಾಗಿದ್ದರೂ ಪ್ರೀತಿಯ ದಾರಿಯಲ್ಲಿ ವಯಸ್ಸಿನ ಗೋಡೆ ಇಬ್ಬರಿಗೂ ಅಡ್ಡಿಯಾಗಲಿಲ್ಲ. ಮನೆಯವರ ಮನವೊಲಿಸಿದ ನಂತರ ಅವರು ೧೨ ವರ್ಷದ ಹಿರಿಯ ಕಾಶ್ಮೀರಾ ಅವರನ್ನು ವಿವಾಹವಾದರು.

ವಿಚ್ಛೇದನದ ನಂತರ ಅಮೀರ್ ಖಾನ್ ಮತ್ತು ಕಿರಣ ರಾವ್ ಜೊತೆಯಾಗಿ ಕಾಣಿಸಿಕೊಂಡು ಮಗ ಆಜಾದ್ ನ ಹುಟ್ಟುಹಬ್ಬವನ್ನು ಆಚರಿಸಿದರು

ಬಾಲಿವುಡ್‌ನ ’ಮಿಸ್ಟರ್ ಪರ್ಫೆಕ್ಷನಿಸ್ಟ್’ ಅಮೀರ್ ಖಾನ್ ಜುಲೈನಲ್ಲಿ ಎರಡನೇ ಪತ್ನಿ ಕಿರಣ ರಾವ್ ಜೊತೆಗಿನ ತಮ್ಮ ೧೫ ವರ್ಷಗಳ ದಾಂಪತ್ಯವನ್ನು ಮುರಿದಿದ್ದರು. ದಂಪತಿ ತಮ್ಮ ವಿಚ್ಛೇದನವನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಘೋಷಿಸಿದ್ದರು. ಇಬ್ಬರೂ ಇನ್ನು ಮುಂದೆ ಪತಿ-ಪತ್ನಿಯಾಗಿರುವುದಿಲ್ಲ, ಆದರೆ ತಮ್ಮ ಮಗ ಆಜಾದ್‌ನನ್ನು ಒಟ್ಟಿಗೆ ಬೆಳೆಸುತ್ತೇವೆ ಎಂದು ಹೇಳಲಾದ ವೀಡಿಯೊವನ್ನು ಸಹ ಅವರು ಅಂದು ಹಂಚಿಕೊಂಡಿದ್ದರು.
ಈ ಜೋಡಿ ಇಂದು ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಬುಧವಾರ ಡಿಸೆಂಬರ್ ೧ ರಂದು ಮಾಜಿ ದಂಪತಿ ತಮ್ಮ ಮಗ ಆಜಾದ್ ನ ೧೦ ನೇ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿದರು. ಅಮೀರ್ ಮತ್ತು ಕಿರಣ ಒಟ್ಟಿಗೆ ಪುತ್ರ ಆಜಾದ್ ರ ಹುಟ್ಟುಹಬ್ಬವನ್ನು ಸುಂದರವಾಗಿ ಆಚರಿಸಿದರು ಮತ್ತು ಅವರ ವಿಶೇಷ ದಿನವನ್ನು ಸ್ಮರಣೀಯವಾಗಿಸಿದರು.


ಮಗನ ಸಂತೋಷಕ್ಕಾಗಿ ಮತ್ತೊಮ್ಮೆ ಅಮೀರ್ ಖಾನ್ ಮತ್ತು ಕಿರಣ ರಾವ್ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಲೇಖಕಿ ಶೋಭಾ ಡಿ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಜಾದ್ ಹುಟ್ಟುಹಬ್ಬದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಆಜಾದ್ ಹುಟ್ಟುಹಬ್ಬದಂದು ಅಮೀರ್ ಖಾನ್ ಅವರ ಹಿರಿಯ ಮಗ ಜುನೈದ್ ಕೂಡ ಹಾಜರಿದ್ದ. ಆಜಾದ್ ತನ್ನ ಜನ್ಮದಿನವನ್ನು ತನ್ನ ಹೆತ್ತವರೊಂದಿಗೆ ಸಂತೋಷದಿಂದ ಆಚರಿಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಅಮೀರ್ ಮತ್ತು ಕಿರಣ ಒಟ್ಟಿಗೆ ಆಜಾದ್ ರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿ ಆಚರಿಸಿದರು. ಫೋಟೋದಲ್ಲಿ ಅಮೀರ್ ತುಂಬಾ ಚಿಲ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಕಿರಣ ರಾವ್ ಕೂಡ ತುಂಬಾ ಕೂಲ್ ಆಗಿ ಕಾಣುತ್ತಿದ್ದಾರೆ. ಆಜಾದ್ ೨೦೧೧ ರಲ್ಲಿ ಅಮೀರ್ ಮತ್ತು ಕಿರಣ ದಂಪತಿಗೆ ಜನಿಸಿದ್ದ.
ಅಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಗಳು ಇರಾ. ಇರಾಳ ಹಿರಿಯ ಸಹೋದರ ಜುನೈದ್. ಅಮೀರ್ ಮತ್ತು ರೀನಾ ಅವರು ವಿವಾಹದ ೧೬ ವರ್ಷಗಳ ನಂತರ ಇಬ್ಬರೂ ೨೦೦೦ ರಲ್ಲಿ ವಿಚ್ಛೇದನ ಪಡೆದಿದ್ದರು. ಅದರ ನಂತರ ಅಮೀರ್ ಕಿರಣ ರಾವ್ ಅವರನ್ನು ೨೦೦೧ ರಲ್ಲಿ ಲಗಾನ್ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಇಲ್ಲಿಂದ ಇಬ್ಬರ ನಡುವೆ ಡೇಟಿಂಗ್ ಶುರುವಾಗಿದ್ದು, ಮದುವೆಗೂ ಮುನ್ನ ಇಬ್ಬರೂ ಒಂದೂವರೆ ವರ್ಷ ಒಟ್ಟಿಗೆ ವಾಸಿಸುತ್ತಿದ್ದರು. ಅಮೀರ್ ೨೦೦೫ ರಲ್ಲಿ ಚಲನಚಿತ್ರ ನಿರ್ಮಾಪಿ ಕಿರಣ ರಾವ್ ಅವರನ್ನು ವಿವಾಹವಾದರು. ಪಂಚಗಣಿಯಲ್ಲಿರುವ ಅಮೀರ್ ಅವರ ಫಾರ್ಮ್‌ಹೌಸ್‌ನಲ್ಲಿ ಇಬ್ಬರೂ ವಿವಾಹವಾದರು. ಕಿರಣ ಅವರು ಅಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ ಮತ್ತು ಮಕ್ಕಳಾದ ಜುನೈದ್ ಮತ್ತು ಇರಾ ಅವರಿಗೂ ತುಂಬಾ ಹತ್ತಿರವಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಅವರು ಒಟ್ಟಿಗೆ ಸಮಯ ಕಳೆಯುವುದು ಕಂಡುಬಂದಿದೆ.

’ಮೀನಾಕ್ಷಿ ಸುಂದರೇಶ್ವರ್’ ನ ನಟಿ ಸನ್ಯಾ ಮಲ್ಹೋತ್ರಾ ತನ್ನ ಬ್ರೇಕಪ್ ಕುರಿತು ಮಾತನಾಡಿದರು

ಬಾಲಿವುಡ್ ನಟಿ ಸನ್ಯಾ (ಸಾನಿಯಾ) ಮಲ್ಹೋತ್ರಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ’ಮೀನಾಕ್ಷಿ ಸುಂದರೇಶ್ವರ್’ ಫಿಲ್ಮ್ ನಲ್ಲಿ ಅವರು ಕಾಣಿಸಿಕೊಂಡರು. ಈ ಫಿಲ್ಮ್ ನಲ್ಲಿ ನಟಿಯೊಂದಿಗೆ ದಕ್ಷಿಣದ ನಟ ಅಭಿಮನ್ಯು ದಾಸಾನಿ ಕೂಡ ಕಾಣಿಸಿಕೊಂಡಿದ್ದಾರೆ.
ಇದೇ ವೇಳೆ ನಟಿ ತಮ್ಮ ಬ್ರೇಕಪ್ ಬಗ್ಗೆಯೂ ಮಾತನಾಡಿದ್ದಾರೆ. ಅದರಲ್ಲಿ ನಟಿ ತನ್ನ ಸಂಬಂಧಗಳು ಮತ್ತು ನೋವಿನ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡರು.


ಸಾನಿಯಾ ಮಲ್ಹೋತ್ರಾ ಬಾಲಿವುಡ್ ಮತ್ತು ಹಿಂದಿ ಫಿಲ್ಮ್ ಗಳಲ್ಲಿ ಕೆಲಸ ಮಾಡುವ ನಟಿ. ಅವರು ೨೦೧೬ ರಲ್ಲಿ ನಿತೀಶ್ ತಿವಾರಿ ಅವರ ದಂಗಲ್ ಜೀವನಚರಿತ್ರೆಯ ಗೇಮ್ ಡ್ರಾಮಾದಲ್ಲಿ ನಟಿಸಿದ್ದಾರೆ.
ಸಾನಿಯಾ ಮಲ್ಹೋತ್ರಾ ದೆಹಲಿಯಲ್ಲಿ ೧೯೯೨ ರಲ್ಲಿ ಜನಿಸಿದವರು. ಈಗ ಅವರಿಗೆ ೨೯ ವರ್ಷ. ಅವರು ದೆಹಲಿ ವಿಶ್ವವಿದ್ಯಾನಿಲಯದ ಗಾರ್ಗಿ ಕಾಲೇಜಿನಿಂದ ಪದವಿ ಪಡೆದಿದ್ದಾರೆ.ಅವರು ಸಮಕಾಲೀನ ಮತ್ತು ಬ್ಯಾಲೆಯ ನೃತ್ಯಗಾರರಾಗಿದ್ದಾರೆ. ಪದವಿಯ ನಂತರ ಮಲ್ಹೋತ್ರಾ ಅವರು ಡಾನ್ಸ್ ಇಂಡಿಯಾ ಡ್ಯಾನ್ಸ್ ಎಂಬ ನೃತ್ಯ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿದರು .ನಂತರ ಅವರು ಮುಂಬೈಗೆ ಹೋಗಿ ಆಡಿಷನ್ ನೀಡಲು ಪ್ರಾರಂಭಿಸಿದರು, ಆದರೆ ಅಲ್ಲಿ ಅವರು ಮೂರು-ನಾಲ್ಕು ತಿಂಗಳು ನಿರುದ್ಯೋಗಿಯಾಗಿದ್ದರು. ಅವರು ದೂರದರ್ಶನಕ್ಕಾಗಿ ಕ್ಯಾಮರಾಗಳಿಗೆ ಸಹಾಯ ಮಾಡಿದರು.ಅವರು ೫,೦೦೦ ರೂ.ಗೆ ಜಾಹೀರಾತುಗಳಲ್ಲಿ ಮಾಡೆಲ್ ಆದರು. ಒಂದು ವರ್ಷದ ನಂತರ ನಿರ್ದೇಶಕ ಮುಖೇಶ್ ಛಾಬ್ರಾ ಅವರು ಆಡಿಷನ್‌ಗೆ ಕರೆದರು. ಅವರು ನಿತೀಶ್ ತಿವಾರಿ ಅವರ ಜೀವನಚರಿತ್ರೆಯ ದಂಗಲ್ (೨೦೧೬ ರಲ್ಲಿ) ಫಿಲ್ಮ್ ನಲ್ಲಿ ಬಬಿತಾ ಕುಮಾರಿ ಪಾತ್ರದಲ್ಲಿ ಬಾಲಿವುಡ್ ಗೆ ಬಂದರು. ಫಾತಿಮಾ ಸನಾ ಶೇಖ್ ಜೊತೆಗೂ ಕಾಣಿಸಿಕೊಂಡರು. ಅವರಿಬ್ಬರು ಸ್ಬೇಹಿತೆಯರು.
“ಬ್ರೇಕಪ್ ಎಲ್ಲರಿಗೂ ತುಂಬಾ ಕಷ್ಟಕರ ಸಮಯ ಎಂದು ನಾನು ಭಾವಿಸುತ್ತೇನೆ, ಆದರೆ ಈ ಸಮಯವು ನನ್ನ ಮೇಲೆ ಹೊಸ ಕೆಲಸ ಮಾಡಲು ಪ್ರೇರೇಪಿಸಿದೆ.ತಾನು ಕೂಡ ವಿಘಟನೆಯ ನೋವನ್ನು ಅನುಭವಿಸಿದ್ದೇನೆ.” ಎಂದು ಸನ್ಯಾ ಇತ್ತೀಚೆಗೆ ಹೇಳಿದ್ದಾರೆ.
ಸನ್ಯಾ ಮಲ್ಹೋತ್ರಾ ಹೇಳುತ್ತಾರೆ- “ವಿಶೇಷವಾಗಿ ಬಾಲಿವುಡ್‌ನಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಪ್ರೀತಿಯ ಹಿಂದೆ ಓಡುತ್ತಿದ್ದಾರೆ ಎಂದು ತೋರಿಸಲಾಗುತ್ತದೆ, ಆದರೆ ನಿಮ್ಮೊಳಗೂ ಅದೇ ದೃಶ್ಯ ನಡೆಯುತ್ತಿದೆ.”
’ದಂಗಲ್’ ಹುಡುಗಿ ಸನ್ಯಾ ಮಲ್ಹೋತ್ರಾ ಅವರಿಗೆ ಈ ದೀಪಾವಳಿ ತುಂಬಾ ವಿಶೇಷ ಮತ್ತು ಸ್ಮರಣೀಯವಾಗಿತ್ತು. ಏಕೆಂದರೆ ಅವರು ದೀಪಾವಳಿಯಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದರು. ಸನ್ಯಾ ಅವರ ಈ ಹೊಸ ಮನೆ ಜುಹು-ವರ್ಸೋವಾ ಲಿಂಕ್ ರಸ್ತೆಯ ಬೇವ್ಯೂ ಬಿಲ್ಡಿಂಗ್‌ನಲ್ಲಿದೆ. ಇದೇ ಕಟ್ಟಡದಲ್ಲಿ ಇತ್ತೀಚೆಗೆ ಹೃತಿಕ್ ರೋಷನ್ ಖರೀದಿಸಿದ ಎರಡು ಮಹಡಿಗಳೂ ಇವೆ.
ವರದಿಗಳನ್ನು ನಂಬುವುದಾದರೆ, ಸನ್ಯಾ ಮಲ್ಹೋತ್ರಾ ಈ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ೧೪.೩ ಕೋಟಿ ರೂ.ಗೆ ಖರೀದಿಸಿದ್ದಾರೆ. ಈ ಮನೆಗೆ ೭೧.೫ ಲಕ್ಷ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ನೀಡಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ, ಸನ್ಯಾ ೨೦೨೦ ತನಗೆ ’ಗುಣಪಡಿಸಿದ ವರ್ಷ’ ಎಂದು ಹೇಳಿದ್ದರು, ಈ ಪ್ರಕ್ರಿಯೆಯು ಅವರ ಹಿಂದಿನ ಸಂಬಂಧ ಕೊನೆಗೊಂಡ ನಂತರ ಪ್ರಾರಂಭವಾಯಿತು.
“ನನ್ನ ಕೊನೆಯ ವಿಘಟನೆಯು ನನಗೆ ಹೃದಯವನ್ನು ಘಾಸಿಗೊಳಿಸಿತು: ನಾನು ದೆಹಲಿಯಲ್ಲಿ ವಾಸವಾಗಿದ್ದಾಗ ಪ್ರಾರಂಭವಾದ ನಾಲ್ಕು ವರ್ಷಗಳ ಸುದೀರ್ಘ, ದೂರದ ಸಂಬಂಧ ಅದು. ನಾವು ಈ ವಿಷಯ ಮರೆತ ನಂತರದ ದಿನಗಳಲ್ಲಿ ಲಾಕ್‌ಡೌನ್ ವಿಧಿಸಲಾಯಿತು ಮತ್ತು ನಾನು ಮುಂಬೈನಲ್ಲಿ ಒಬ್ಬಂಟಿಯಾಗಿದ್ದೆ” ಎಂದು ನೆನಪಿಸಿಕೊಂಡರು.
ಸನ್ಯಾ ಮಲ್ಹೋತ್ರಾ ಕ್ರೈಮ್ ಥ್ರಿಲ್ಲರ್ ಫಿಲ್ಮ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಫಿಲ್ಮ್ ನಲ್ಲಿ ಅವರ ಜೊತೆ ನಟರಾದ ಬಾಬಿ ಡಿಯೋಲ್ ಮತ್ತು ವಿಕ್ರಾಂತ್ ಮಾಸ್ಸೆ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಮುಂದಿನ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಲಿರುವ ಹಿಟ್ ದಿ ಫಸ್ಟ್ ಕೇಸ್ ಫಿಲ್ಮ್ ನಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ನಟ ರಾಜ್‌ಕುಮಾರ್ ರಾವ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದು ತೆಲುಗು ಚಿತ್ರವೊಂದರ ರಿಮೇಕ್ ಆಗಿದೆ.