ಅಲಬಾಮಾ (ಅಮೆರಿಕಾ), ಎ.೧೭- ಹುಟ್ಟುಹಬ್ಬದ ಸಾಮೂಹಿಕ ಪಾರ್ಟಿಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, ೨೮ ಮಂದಿ ಗಾಯಗೊಂಡ ಘಟನೆ ಅಲಬಾಮಾ ರಾಜ್ಯದ ದಾಡೆವಿಲ್ಲೆ ಎಂಬಲ್ಲಿ ನಡೆದಿದೆ. ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮೃತಪಟ್ಟ ನಾಗರಿಕರಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಕಂಬನಿ ಮಿಡಿದಿದ್ದಾರೆ.
ದಾಡೆವಿಲ್ಲೆಯ ಮಹೋಗಾನಿ ಮಾಸ್ಟರ್‌ಪೀಸ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಶೂಟೌಟ್ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಬಹುತೇಕರು ಹರೆಯದವರಾಗಿದ್ದಾರೆ. ವ್ಯಕ್ತಿಯೊಬ್ಬರ ೧೬ನೇ ವರ್ಷದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶೂಟೌಟ್ ಪ್ರಕರಣ ನಡೆದಿದೆ. ಪ್ರಸಕ್ತ ವರ್ಷದಲ್ಲಿ ಅಮೆರಿಕಾದಲ್ಲಿ ೧೬೦ಕ್ಕೂ ಹೆಚ್ಚಿನ ಸಾಮೂಹಿಕ ಶೂಟೌಟ್ ಪ್ರಕರಣಗಳು ನಡೆದಿದೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಬೈಡೆನ್, ಮಕ್ಕಳು ಭಯವಿಲ್ಲದೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ರಾಷ್ಟ್ರದಲ್ಲಿ ಏನಾಗುತ್ತಿದೆ ಎಂದು ಬೈಡೆನ್ ಹೇಳಿಕೆಯನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿ ಬಂದೂಕುಗಳು ಮಕ್ಕಳ ಪ್ರಮುಖ ಕೊಲೆಗಾರ. ಸದ್ಯ ಶೂಟೌಟ್ ಪ್ರಕರಣಗಳು ಏರುತ್ತಿದ್ದು, ಕಡಿಮೆಯಾಗುತ್ತಿಲ್ಲ. ಇದು ಅತಿರೇಕದ ಮತ್ತು ಸ್ವೀಕಾರಾರ್ಹವಲ್ಲ. ಶಾಸಕರು ಸಾಮಾನ್ಯ ಜ್ಞಾನದ ಗನ್ ಸುರಕ್ಷತೆ ಸುಧಾರಣೆಗಳ ಮೇಲೆ ಕಾರ್ಯನಿರ್ವಹಿಸಲು ಅಮೆರಿಕನ್ನರು ಬಯಸುತ್ತಾರೆ ಎಂದು ತಿಳಿಸಿದ್ದಾರೆ.