ಹುಟ್ಟುಹಬ್ಬದಂದು ಪ್ರತಿಯೊಬ್ಬರು ಗಿಡ ನೆಡಿ ಪಿ.ಎಸ್.ಐ.ಜಯಶ್ರೀ. ಸಲಹೆ

ವಡಗೇರಾ:ಆ.7: ಪಟ್ಟಣದ ವಡಗೇರಾ ಪೆÇಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಜಯಶ್ರೀ. ರವರು ತಮ್ಮ ಹುಟ್ಟು ಹಬ್ಬದ ನಿಮಿತ್ಯ ತಾವುಕಾರ್ಯನಿರ್ವಹಿಸುತ್ತಿರುವ ವಡಗೇರಾ ಪೆÇಲೀಸ್ ಠಾಣೆಯ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅತಿ ಸರಳವಾಗಿ ಆಚರಿಸಿಕೊಂಡು ಮಾತನಾಡಿದರು.
ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಸಸಿಗಳನ್ನು ನೇಡುವಂತೆ ಸಲಹೆ ನೀಡಿದರು. ಹಲವಾರು ಯುವಕರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮೋಜು ಮಸ್ತಿ ಮಾಡುವ ಮೂಲಕ ಹಣವನ್ನು ದುಂದು ವೇಚ್ಚ ಮಾಡುತ್ತಾರೆ ಅದರ ಬದಲಾಗಿ ಗಿಡಗಳನ್ನು ನೆಟ್ಟು ಪೆÇೀಷಣೆ ಮಾಡಿದರೆ ಉತ್ತಮ ವಾತಾವರಣ ನಿರ್ಮಾಣವಾಗುತ್ತೆ ಕಳೆದ ಕೋರೂನಾ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ನಮ್ಮ ಬಂಧು ಬಳಗವನು ನಾವು ಕಳೆದುಕೊಂಡಿದ್ದೇವೆ ಅದನ್ನು ಅರಿತು ನಾವು ಈಗಲಾದರೂ ನಾವು ಜಾಗೃತಿ ವಹಿಸಿ ಗಿಡ ಮರಗಳನ್ನು ನೆಡೋಣ ಅಂದಾಗ ಮಾತ್ರ ನಮ್ಮ ಪರಿಸರ ಸ್ವಚ್ಛವಾಗಿರುತ್ತೆ ಒಳ್ಳೆ ಗಾಳಿ ಸಿಗುತ್ತೆ ಒಂದು ವೇಳೆ ನಾವು ನಿರ್ಲಕ್ಷದಲ್ಲಿ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಗಾಳಿಯನ್ನು ದುಡ್ಡು ಕೊಟ್ಟು ಕೊಳ್ಳಬೇಕಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಮನೆ ಶಾಲಾ ಹೊಲಗದ್ದೆ ಗುಡಿಗುಂಡಾರ ಆವರಣಗಳಲ್ಲಿ ಸಸಿಗಳನ್ನು ನೆಟ್ಟು ಪೆÇೀಷಣೆ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ. ಪೆÇಲೀಸ್ ಠಾಣೆ ಸಿಬ್ಬಂದಿಗಳಾದ. ಗುಂಡಪ್ಪ ನಾಯಕ್. ಮಹೇಂದ್ರ ಕಿಲನಕೇರಾ. ಬಾಬುರಾವ್. ಗೋವಿಂದ್. ಹಾಗೂ ಮರಿಲಿಂಗ ಗೋನಾಲ. ದೇವೇಂದ್ರ ಹುಲಕಲ. ಹಾಗೂ ಇನ್ನಿತರ ಉಪಸ್ಥಿತರಿದ್ದರು.