ಹುಚ್ಚವನಹಳ್ಳಿಯಲ್ಲಿ ಔಷಧ ವಿತರಣೆ

ಜಗಳೂರು.ಮಾ.೨೭; ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದಲ್ಲಿ ಎರಡನೇ ಉಚಿತ ಆರೋಗ ತಪಾಸಣೆ ಹಾಗು ಚಿಕಿತ್ಸೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಸೌಲಭ್ಯ ಪಡೆದುಕೊಳ್ಳುವಂತೆ   ಶ್ರೀ ಸೌಖ್ಯ ಯುಮೇನಿಟಿನ್ ಪೌಂಡೇಷನ್ ಅಧ್ಯಕ್ಷರು ಡಾ.ಆರ್.ಜೆ ಹರೀಶ್ ಹೇಳಿದರು
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು  ನಮ್ಮ ಸಂಸ್ಥೆ ವತಿಯಿಂದ    ಈಗಾಗಲೇ ಹುಚ್ಚವನಹಳ್ಳಿ ಗ್ರಾಮದಲ್ಲಿ ನಡೆದ   ಮೊದಲ ಆರೋಗ್ಯ ಶಿಭಿರದಲ್ಲಿ  ಹುಚ್ಚವ್ವನಹಳ್ಳಿ.ಕೊರಚರಹಟ್ಟಿ ಗ್ರಾಮದಿಂದ 360 ಜನ ಚಿಕಿತ್ಸೆ ಪಡೆದಿದ್ದಾರೆ ಪ್ರತಿ ತಿಂಗಳು ಕೊನೆ ಭಾನುವಾರ ಉಚಿತ ಶಿಭಿರ ಇರಲಿದೆ  ಎರಡನೇ ಶಿಬಿರವು ಇದೇ ಶನಿವಾರ ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನೆಡೆಯಲಿದೆ ಜನರಲ್ ಪಿಜಿಷಿಯನ್ ಡಾ.ಚನ್ನಾರೆಡ್ಡಿ  ಡಾ.ಹರೀಶ್ ವೈದ್ಯರು ಭಾಗವಹಿಸಲಿದ್ದಾರೆ ಎಂದರು.ಹಿರೇಮಲ್ಲನಹೊಳೆ ಗ್ರಾ.ಪಂ ಉಪಾಧ್ಯಕ್ಷ. ಆರ್.ಎಲ್.ಅನೂಪ್ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಉತ್ತಮ ಉಚಿತ  ಆರೋಗ್ಯದ ಸೇವೆ ನೀಡುವ ಮೂಲಕ ಹುಟ್ಟೂರು ಋಣ ತೀರಿಸುವ ಕೆಲಸ ಮಾಡಲು ಬಯಸಿದ್ದು ಗ್ರಾಮಸ್ಥರ ಸಹಕಾರ  ಅಗತ್ಯವಾಗಿ ಬೇಕಿದೆ   ಡಾ.ಹರೀಶ್  ಹುಚ್ಚವನಹಳ್ಳಿ ಗ್ರಾಮದಲ್ಲಿ ಜನಿಸಿ ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣವನ್ನ ಮುಗಿಸಿ ನಂತರ ಉನ್ನತ ವಿಧ್ಯಾಭ್ಯಾಸ ಮಾಡಿ  ವೈದ್ಯಕೀಯ ಪದವಿಯೊಂದಗೆ ಸರ್ಕಾರಿ ವೈದ್ಯಾರಾಗಿ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಸೇವೆ ಮಾಡಿ ನಂತರ ಮಾನಸೀಕ ಆರೋಗ್ಯ ವಿಭಾಗದಲ್ಲಿ ಹಾಗು ಐ.ಎ.ಎಮ್ ನಲ್ಲಿ ಸಮಾಜಿಕ ಸೇವಾ ವಿಭಾಗದಲ್ಲಿ ಉತ್ತಮ ಸೇವೆ ಮಾಡಿರುವ ಅನುಭವ ಇದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳು ಇದಾರೆಯಿಂದ ಹುಟ್ಟೂರು ಜನರಿಗೆ ಮೊದಲು  ಉಚಿತ ಆರೋಗ್ಯ ಸೇವೆ ನೀಡುವ ಕಾರ್ಯಕ್ಕೆ ಮುಂದಾಗಿದ್ದು ಮೊದಲ ಪ್ರಯತ್ನದಲ್ಲಿ  ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ಅಶ್ವಿನಿ,.ಅಭಿಷೇಕ್ .ಇತರರು ಇದ್ದರು