ಹುಂಡಿ ಪೆಟ್ಟಿಗೆ ಎಣಿಕೆಯ ಕಾರ್ಯ


ಸಂಜೆವಾಣಿ ವಾರ್ತೆ
ಕೊಟ್ಟೂರು, ನ.08: ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರುಕೊಟ್ಟೂರೇಶ್ವರನ ಹುಂಡಿ ಪೆಟ್ಟಿಗೆ ಎಣಿಕೆಯ ಕಾರ್ಯ ಪ್ರಾರಂಭಿಸಲಾಯಿತು.
ಈ ಹುಂಡಿ ಪೆಟ್ಟಿಗೆ ಎಣಿಕೆ ಕಾರ್ಯವನ್ನು ಕೊಟ್ಟೂರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಪ್ರಾರಂಭಿಸಲಾಯಿತು.
ನಾಲ್ಕು ಮುಖ್ಯ ಹುಂಡಿ ಪೆಟ್ಟಿಗೆಯನ್ನು ಎಣಿಕೆ ಮಾಡಲಾಗುತ್ತದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಕಾಶ್ ರಾವ್  ತಿಳಿಸಿದರು. ಶಾಲಾ ಮಕ್ಕಳು ಎಣಿಕೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರರಾದ ನಾಗರಾಜ್, ಪ್ರಗತಿ ಕೃಷ್ಣ ಬ್ಯಾಂಕ್ ನ ವ್ಯವಸ್ಥಾಪಕರು, ಕೆ ಎಸ್ ನಾಗರಾಜ್ ಗೌಡ, ಪ್ರೇಮಾನಂದ ಗೌಡ, ಸೋಮನಾಥ ಪಾಟೀಲ್, ಗಡ್ಡಿ ಕೊಟ್ರೇಶ್, ಸಿಪಿಐ ಸೋಮಶೇಖರ್ ಕೆಂಚಾರೆಡ್ಡಿ, ಎಎಸ್ಐ ಶಿವಕುಮಾರ್, ಉಪ ಧರ್ಮ ಕರ್ತರಾದ  ಸಿ.ಎಚ್ ಎಂ ನಾಗರಾಜ್ ಹಾಗೂ ಹಿಂದೂ ಧಾರ್ಮಿಕ  ದತ್ತಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.