ಹೀರೆಕಾಯಿ ಹುಳಿ ತೊವ್ವೆ

ಬೇಕಾಗುವ ಸಾಮಗ್ರಿಗಳು

*ತೊಗರಿಬೇಳೆ – ೧೦೦ ಗ್ರಾಂ
*ಈರೇಕಾಯಿ – ೧೦೦ ಗ್ರಾಂ
*ಟೊಮೆಟೊ – ೨ ದೊಡ್ಡದು
*ತೆಂಗಿನಕಾಯಿತುರಿ – ೧/೨ ಕಪ್ಪು
*ಒಣಕೊಬ್ಬರಿತುರಿ – ೧/೨ ಕಪ್ಪು
*ಹುಣಸೇಹಣ್ಣು – ಸ್ವಲ್ಪ
*ಬೆಲ್ಲ – ೧ ಟೇಬಲ್ ಸ್ಪೂನ್
*ಅರಿಶಿಣ – ೧ ಟೀ ಸ್ಪೂನ್
*ಕಡ್ಲೆಬೇಳೆ – ೧ ಟೀ ಸ್ಪೂನ್
*ಉದ್ದಿನಬೇಳೆ – ೧ ಟೀ ಸ್ಪೂನ್
*ಇಂಗು – ಸ್ವಲ್ಪ
*ಮೆಂತ್ಯೆ – ೧ ಟೀ ಸ್ಪೂನ್
*ಧನಿಯಾ – ೩ ಟೇಬಲ್ ಸ್ಪೂನ್
*ಬ್ಯಾಡಿಗೆ ಮೆಣಸಿನಕಾಯಿ – ೮
*ಚಕ್ಕೆ – ೨
*ಉಪ್ಪು- ರುಚಿಗೆ ತಕ್ಕಷ್ಟು
*ಎಣ್ಣೆ-

ಮಾಡುವ ವಿಧಾನ :

ಬಾಣಲಿಗೆ ಎಣ್ಣೆ ಹಾಕಿ ಇದು ಬಿಸಿಯಾದ ನಂತರ ಇಂಗು ಹಾಕಿ ಬಾಡಿಸಿ, ಇದಕ್ಕೆ ಮೆಂತ್ಯೆ, ಕಡ್ಲೆಬೇಳೆ, ಉದ್ದಿನಬೇಳೆ, ಧನಿಯಾ, ಬ್ಯಾಡಿಗೆ ಮೆಣಸಿನಕಾಯಿ, ಅರಿಶಿಣ, ತೆಂಗಿನಕಾಯಿ ತುರಿ ಹಾಕಿ ಜೊತೆಗೆ ಸ್ವಲ್ಪ ನೀರು ಸೇರಿಸಿ ರುಬ್ಬಿ ಮಸಾಲ ತಯಾರಿಕೊಳ್ಳಿ. ಪ್ಯಾನಿಗೆ ಒಣಕೊಬ್ಬರಿತುರಿ, ಸ್ವಲ್ಪ ನೀರು ಸೇರಿಸಿ ರುಬ್ಬಿ ಮಸಾಲ ತಯಾರಿಸಿಕೊಳ್ಳಿ. ಪ್ಯಾನಿಗೆ ಒಣಕೊಬ್ಬರಿತುರಿ, ಸ್ವಲ್ಪ ಅರಿಶಿಣ ಸೇರಿಸಿ ಹುರಿದು ಕೊಳ್ಳಿ ಕುಕ್ಕರ್‌ಗೆ ನೀರು ಮತ್ತು ತೊಗರಿಬೇಳೆ ಹಾಕಿ ಬೇಯಿಸಿ ಜೊತೆಗೆ ಹೆಚ್ಚಿದ ಈರೇಕಾಯಿ,ನ ರುಚಿಗೆ ತಕ್ಕಷ್ಟು ಉಪ್ಪು, ಟೊಮೆಟೊ ಹಾಕಿ ಬಾಡಿಸಿ ಇದಕ್ಕೆ ಬೆಲ್ಲ, ಹುಣಸೇರಸ, ರುಬ್ಬಿದ ಮಸಾಲ ಹಾಖಿ ಮಿಕ್ಸ್ ಮಾಡಿ ೨ ನಿಮಿಷ ಬೇಯಿಸಿ, ಇದಕ್ಕೆ ಅರಿಶಿಣ ಸೇರಿಸಿ ಹುರಿದ ಒಣಕೊಬ್ಬರಿತುಎಇ ಹಾಕಿ ಮಿಕ್ಸ್ ಮಾಡಿದರೆ ‘ಹೀರೆಕಾಯಿ ಹುಳಿ ತೊವ್ವೆ’ ರೆಡಿ.